ಮಂಡ್ಯ: ‘ಮಗುವಿನ ಬಿಳಿರಕ್ತ ಕಣ ಸಂಖ್ಯೆ ಪರೀಕ್ಷೆಯ ವರದಿಯನ್ನು ತಪ್ಪಾಗಿ ನೀಡಿ ಲೋಪವೆಸಗಿರುವ ಮಂಡ್ಯ ಡಯಾಗ್ನೋಸ್ಟಿಕ್ ಸೆಂಟರ್ ವಿರುದ್ಧ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಮಗುವಿನ ತಂದೆ ಆದರ್ಶ್ ಒತ್ತಾಯಿಸಿದರು.

‘ನ.15 ರಂದು ನನ್ನ ಒಂದೂವರೆ ವರ್ಷದ ಮಗು ಮಾನ್ವೀರ್ಗೆ ಜ್ವರ ಕಾಣಿಸಿಕೊಂಡಿದ್ದರಿಂದ ಮಕ್ಕಳ ತಜ್ಞ ಡಾ.ಜಗದೀಶ್ ಅವರ ಸೂಚನೆಯ ಮೇರೆಗೆ ಮಂಡ್ಯ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ ಬಿಳಿರಕ್ತ ಕಣಗಳ ಸಂಖ್ಯೆಯ ಪರೀಕ್ಷೆಯನ್ನು ಮಾಡಿಸಿದ್ದೆವು, ಆ ವರದಿಯಲ್ಲಿ ಬಿಳಿರಕ್ತ ಕಣ ಸಂಖ್ಯೆ 32 ಸಾವಿರ ಎಂದು ನಮೂದಿಸಿದ್ದರು. ಗಾಬರಿಗೊಂಡು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದು ಅಲ್ಲಿನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದಾಗ ಮಗುವಿನ ಬಿಳಿರಕ್ತ ಕಣಗಳ ಸಂಖ್ಯೆ 2,23,000 ಇರುವುದಾಗಿ ವರದಿ ಬಂದಿತ್ತು. ಸೆಂಟರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಒತ್ತಾಯಿಸಿದರು.

ಕುಟುಂಬದ ಸದಸ್ಯರಾದ ಯಶೋಧ, ರಾಣಿ, ಅನಿತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.