ಪಾಂಡವಪುರ ತಾಲ್ಲೂಕಿನ ಅಂತನಹಳ್ಳಿ ಗ್ರಾಮದಲ್ಲಿ ಹೊಲ ಉಳುಮೆ ಮಾಡಿ ಹಸನುಗೊಳಿಸಿರುವುದು
ಹಳ್ಳಿಗಳಲ್ಲಿ ಮನೆಮಾಡಿದ ಕೃಷಿ ಸಂಭ್ರಮ ಬಿತ್ತನೆ ಬೀಜ, ಗೊಬ್ಬರ ಖರೀದಿ ಚುರುಕು ಹೊಲ ಹಸನು ಮಾಡುವತ್ತ ರೈತರ ಚಿತ್ತ
ಹೊಲ ಪಾಳು ಬಿಡಬೇಡಿ; ಜೆಡಿ
‘ಜಿಲ್ಲೆಯ ಹೆಚ್ಚು ರೈತರು ಈಚೆಗೆ ಕೃಷಿ ಭೂಮಿಯನ್ನು ಪಾಳು ಬಿಡುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಈಗಾಗಲೇ ಶೇ 25ರಷ್ಟು ಜಮೀನು ಬೀಳು–ಜವಳಾಗಿದೆ. ಉತ್ತಮ ಮಳೆಯಾಗುತ್ತಿದ್ದು ರೈತರು ಭೂಮಿಯನ್ನು ಪಾಳು ಬಿಡಬಾರದು. ಉಳುಮೆ ಮಾಡಿ ಏನಾದರೂ ಒಂದು ಬೆಳೆ ಮಾಡಬೇಕು’ ಎಂದು ಕೃಷಿ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಹೇಳಿದರು. ‘ಮುಂಗಾರು ಬಿತ್ತನೆ ತಡವಾಗಿದ್ದರೂ ಅಲ್ಪಾವಧಿ ಬೆಳೆಗಳನ್ನು ಹಾಕಲು ಅಡ್ಡಿ ಇಲ್ಲ. ಹೂವು ತರಕಾರಿ ಸೇರಿದಂತೆ ಕಡೇಪಕ್ಷ ಮೇವು ಬೆಳೆಗಳನ್ನಾದರೂ ಬಿತ್ತನೆ ಮಾಡಬೇಕು. ಭೂಮಿಯನ್ನು ಪಾಳು ಬಿಟ್ಟರೆ ಮಣ್ಣು ಕೊಚ್ಚಿಕೊಂಡು ಸವಕಳಿಯಾಗುವ ಅಪಾಯವಿದೆ. ಹೀಗಾಗಿ ರೈತರು ಮೊದಲು ಹೊಲ ಉಳುಮೆಗೆ ಆದ್ಯತೆ ಕೊಡಬೇಕು’ ಎಂದರು. ‘ಈ ಬಾರಿ ಬಿತ್ತನೆ ಬೀಜ ರಸಗೊಬ್ಬರಕ್ಕೆ ಯಾವುದೇ ತೊಂದರೆ ಇಲ್ಲ. ಕಳೆದ ಬಾರಿ ಬಂದ ರಸಗೊಬ್ಬರದ ಸಂಗ್ರಹವೂ ಇದ್ದು ರೈತರಿಗೆ ಅಗತ್ಯವಾದ ಗೊಬ್ಬರ ಪೂರೈಕೆ ಮಾಡಲಾಗುವುದು’ ಎಂದರು.
ವಾರದಲ್ಲಿ 6.2 ಸೆಂ.ಮೀ ಮಳೆ
ಜಿಲ್ಲೆಯಾದ್ಯಂತ ವಾರದೊಳಗೆ ವಾಡಿಕೆ ಮಳೆಗಿಂತಲೂ ಹೆಚ್ಚುವರಿ ಮಳೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಸಂತಸ ತರಿಸಿದೆ. 7 ದಿನದಲ್ಲಿ 6.2 ಸೆಂ.ಮೀ ಮಳೆಯಾಗಿದೆ ವಾಡಿಕೆ 2.26 ಸೆಂ.ಮೀ ಮಳೆಗೆ ಪ್ರತಿಯಾಗಿ ಹೆಚ್ಚುವರಿಯಾಗಿ 4 ಸೆ.ಮೀ ಮಳೆ ಸುರಿದಿದೆ. ಮೇ 1ರಿಂದಲ ಇಲ್ಲಿಯವರೆಗೆ 10.5 ಸೆಂ.ಮೀ.ಮಳೆಯಾಗಿದ್ದು ಹೆಚ್ಚುವರಿಯಾಗಿ 8.5 ಸೆಂ.ಮೀ.ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ 2 ಸೆಂ.ಮೀ ಮಳೆಯಾಗಿದೆ.