ಮಂಡ್ಯ: ಚಲಿಸುತ್ತಿದ್ದ ವೇಳೆ ಏಕಾಏಕಿ ಕಾರಿನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡು ಮಂಡ್ಯ ನಗರದ ಎಪಿಎಂಸಿ ಕಚೇರಿ ಸಮೀಪ ಭಾನುವಾರ ರಾತ್ರಿ ಹೆದ್ದಾರಿಯಲ್ಲಿ ಕಾರು ಹೊತ್ತಿ ಉರಿಯಿತು.

ಮದನ್ ಎಂಬುವವರು ಬೆಂಗಳೂರಿನ ಕೆಂಗೇರಿಯಿಂದ ಕುಶಾಲನಗರ ಕಡೆ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಸುಟ್ಟ ವಾಸನೆ ಬಂದಿದೆ.

ತಕ್ಷಣ ಮದನ್ ಅವರು ಹೆದ್ದಾರಿ ಬದಿಯಲ್ಲಿ ಕಾರು ನಿಲ್ಲಿಸಿದ್ದಾರೆ. ದಟ್ಟ ಹೊಗೆ ಕಾಣಿಸಿಕೊಂಡು, ನೋಡು ನೋಡುತ್ತಿದ್ದಂತೆ ಕಾರು ಧಗಧಗನೆ ಹೊತ್ತಿ ಉರಿಯಿತು.

ಮದನ್ ಮತ್ತು ಆತನ ಸ್ನೇಹಿತ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ದೌಡಾಯಿಸಿ, ಅಗ್ನಿ ನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.