ನಾಗಮಂಗಲ (ಮಂಡ್ಯ): ‘ಜಾನಪದವು ಮನುಷ್ಯನ ಹಳೆಯ ಬೇರಾಗಿದ್ದು, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಹೊಸಚಿಗುರಾಗಿವೆ. ಹೊಸಚಿಗುರನ್ನು ಆರಾಧಿಸುವ ಹೊತ್ತಿನಲ್ಲಿ ನಾವು ಹಳೆಯ ಬೇರನ್ನು ಮರೆತರೆ ಚಿಗುರು ಹೂವಾಗುವುದಿಲ್ಲ, ಹಣ್ಣಾಗುವುದೂ ಇಲ್ಲ. ಆ ನಿಟ್ಟಿನಲ್ಲಿ ನಾವು ಜನಪದದ ಮೂಲಬೇರನ್ನು ಮರೆಯದೇ ಮುಂದುವರಿಯಬೇಕಾಗಿದೆ’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಮಂಗಳವಾರ ಬಾಲಗಂಗಾಧರನಾಥ ಸ್ವಾಮೀಜಿ ಅವರ ವಾರ್ಷಿಕ ಪಟ್ಟಾಭಿಷೇಕ ಮತ್ತು ಗುರು ಸಂಸ್ಮರಣೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ 45ನೇ ಕಾಲಭೈರವೇಶ್ವರ ಜಾನಪದ ಕಲಾಮೇಳದಲ್ಲಿ ‘ಚುಂಚಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

‘ನನ್ನ ಓದು, ನನ್ನ ಗಳಿಕೆ, ನನ್ನ ಅಧಿಕಾರ ಎಲ್ಲವೂ ನನಗಾಗಿಯೇ ಎಂದು ಯಾರು ಬದುಕುತ್ತಾರೋ ಅವರು ಬದುಕಿದ್ದಾಗಲೂ ಬದುಕಲಿಲ್ಲ, ಸತ್ತ ನಂತರವೂ ಯಾರ ನೆನಪಿನಲ್ಲೂ ಉಳಿಯಲಿಲ್ಲ. ಜನಪದರನ್ನು ಮತ್ತು ಜನಪದ ಸಾಹಿತ್ಯವನ್ನು ಮರೆತರೆ ಯಾವುದೇ ಸಮಾಜವು ದೀರ್ಘಕಾಲ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಇಂದಿಗೂ ಸಹ ಜನಪದ ಹಾಡುಗಳನ್ನು ಕೇಳಿದರೆ ನೊಂದ ಮನಸ್ಸಿಗೆ ಸಾಂತ್ವನ ಸಿಗುತ್ತದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ‘ಆಧುನಿಕ ಜಗತ್ತಿನ ಎಲ್ಲ ಸೌಲಭ್ಯಗಳನ್ನು ಅನುಭವಿಸುತ್ತಿರುವ ನಗರವಾಸಿಗಳಾದ ನಾವು, ಅರಣ್ಯದಲ್ಲಿ ವಾಸಿಸುವ ಬುಡಕಟ್ಟು ಜನರಂತೆ ಸಂತೋಷದ ಜೀವನ ನಡೆಸಲು ಆಗುತ್ತಿಲ್ಲ. ಬದುಕಿರುವಾಗ ಒಳ್ಳೆಯ ಕೆಲಸವನ್ನು ಮಾಡಿದರೆ, ಭಗವಂತನ ಪಾದ ಸೇರುವಾಗ ನೆಮ್ಮದಿ ಮತ್ತು ಸಾರ್ಥಕತೆ ದೊರೆಯುತ್ತದೆ. ನಮಗೆ ಮೊದಲು ಬೇಕಾಗಿರುವುದು ಮಾನವೀಯತೆ, ಮನುಷ್ಯತ್ವ’ ಎಂದರು.

ಚುಂಚಶ್ರಿ ಪ್ರಶಸ್ತಿ ಪ್ರದಾನ

ಶೈಕ್ಷಣಿಕ ಕ್ಷೇತ್ರದ ಸೇವೆಗಾಗಿ ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಹೋಬಳಿಯ ಕೊತ್ತಲಗಾಲ ಗ್ರಾಮದ ಕೆ.ಪಿ.ಬಸವೇಗೌಡ, ಸಮಾಜ ಸೇವೆಗಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೊಳವಾರ ಗ್ರಾಮದ ಹಿರಿಯಣ್ಣ ಹೆಗಡೆ, ಸಾಹಿತ್ಯ ಮತ್ತು ಜನಪದ ಕ್ಷೇತ್ರದ ಸಾಧನೆಗಾಗಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹಿರೇಗೌಡನದೊಡ್ಡಿಯ ಸಾಹಿತಿ ರಾಮೇಗೌಡ ಮತ್ತು ಜನಪದ ಕ್ಷೇತ್ರದಲ್ಲಿನ ಸುದೀರ್ಘ ಸೇವೆಗಾಗಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮಲ್ಲವ್ವ ಬಸಪ್ಪ ಮೇಗೇರಿ ಅವರಿಗೆ ವರ್ಷದ ‘ಚುಂಚಶ್ರೀ’ ಪ್ರಶಸ್ತಿಯನ್ನು ₹50 ಸಾವಿರ ನಗದು, ಸ್ಮರಣಿಕೆಯೊಂದಿಗೆ ನೀಡಿ ಆದಿಚುಂಚನಗಿರಿ ಮಠದ ವತಿಯಿಂದ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.