ಶ್ರೀರಂಗಪಟ್ಟಣ: ಕಲ್ಲು ಕಲ್ಲುಗಳು ಕತೆ ಹೇಳುವ ಈ ಪಟ್ಟಣದಲ್ಲಿ ನೂರಾರು ಐತಿಹಾಸಿಕ ಪಳೆಯುಳಿಕೆಗಳಿದ್ದು, ಇಲ್ಲಿನ ಶ್ರೀರಂಗನಾಥಸ್ವಾಮಿ ದೇವಾಲಯ ಎದುರು ಇರುವ ಮ್ಯೂಸಿಯಂನಲ್ಲಿ ಐತಿಹಾಸಿಕ ಶಿಲಾ ಮೂರ್ತಿಗಳು ಪರಂಪರೆಯ ಶಿಲ್ಪ ಸೌರಭವನ್ನು ಸೂಸುತ್ತವೆ.

ನಾಡಹಬ್ಬ ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ ಮ್ಯೂಸಿಯಂನ ಆವರಣವನ್ನು ಅಂದಗಾಣಿಸುವ ಪ್ರಕ್ರಿಯೆ ಆರಂಭವಾಗಿದೆ. ಮ್ಯೂಸಿಯಂನ ಒಳಗೆ ಮತ್ತು ಹೊರಗೆ ಒಪ್ಪ ಓರಣವಾಗಿ ಜೋಡಿಸಿರುವ ಸಹಸ್ರಾರು ವರ್ಷಗಳಷ್ಟು ಹಳೆಯ ಶಿಲ್ಪಗಳು ಗತ ಕಾಲದ ಘಟನಾವಳಿಗಳಿಗೆ ಸಾಕ್ಷಿಯಾಗಿವೆ. ಗಂಗರು, ಚೋಳರು, ಹೊಯ್ಸಳರು, ವಿಜಯನಗರ ಮತ್ತು ಮೈಸೂರು ಒಡೆಯರ್ ದೊರೆಗಳ ಕಾಲಕ್ಕೆ ಸೇರಿದ ಶಿಲ್ಪಗಳು ಗಮನ ಸೆಳೆಯುತ್ತವೆ.

ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶನಾಲಯ 1997ರಲ್ಲಿ ಈ ಮ್ಯೂಸಿಯಂ ಆರಂಭಿಸಿದೆ. ಜಿಲ್ಲೆ, ಹೊರ ಜಿಲ್ಲೆಗಳಲ್ಲಿ ದೊರೆತ ಶಿಲ್ಪಗಳನ್ನು ತಂದು ಇಲ್ಲಿ ಸಂರಕ್ಷಿಸಿದೆ. ಮ್ಯೂಸಿಯಂನ ಒಳಭಾಗದಲ್ಲಿ 10ನೇ ಶತಮಾನದ ಸೂರ್ಯ ದೇವರ ಶಿಲ್ಪ ಆಕರ್ಷವಾಗಿದೆ. ಪೀಠದಿಂದ ತುದಿಯವರೆಗೆ 6.5 ಅಡಿ ಎತ್ತರ ಇರುವ ಇದನ್ನು ಶಿಲ್ಪಿ ಒಂದೇ ಕಲ್ಲಿನಲ್ಲಿ ಕಡೆದಿದ್ದಾನೆ. ಕುದುರೆಗಳು ಎಳೆಯುತ್ತಿರುವ ರಥದಲ್ಲಿ ಸೂರ್ಯದೇವನು ನಿಂತಿರುವಂತೆ ಕೆತ್ತಲಾಗಿದೆ.

ಇದರ ಪಕ್ಕದಲ್ಲಿ 11ನೇ ಶತಮಾನದ ಸ್ತ್ರೀದೇವಿ, 12ನೇ ಶತಮಾನದ ದ್ವಾರಪಾಲರು ಮತ್ತು ಸಪ್ತಮಾತೃಕೆಯರು, 13ನೇ ಶತಮಾನದ ವಿಷ್ಣು, 14ನೇ ಶತಮಾನದ ವರದರಾಜ, 15ನೇ ಶತಮಾನದ ಕುಬ್ಜ, 16ನೇ ಶತಮಾನದಲ್ಲಿ ಕಡೆದಿರುವ ಆಂಜನೇಯನ ಶಿಲ್ಪಗಳಿವೆ. ರಾಜ್ಯದ ಪ್ರಮುಖ ಸ್ಮಾರಕಗಳ ಚಿತ್ರಗಳಿರುವ ಫಲಕಗಳೂ ಇಲ್ಲಿ ಕಾಣ ಸಿಗುತ್ತವೆ. ಎಡ ಭಾಗದಲ್ಲಿ, ಕ್ರಿ.ಶ 1800ರಲ್ಲಿ ಬ್ರಿಟಿಷ್ ಸೇನೆಯ ಮೇಜರ್ ಜನರಲ್ ರಾಸ್ ತಯಾರಿಸಿರುವ ಶ್ರೀರಂಗಪಟ್ಟಣ ದ್ವೀಪದ ನಕ್ಷೆಯ ಮಾದರಿ ಅಂದಿನ ನೈಜ ಚಿತ್ರಣವನ್ನು ಬಿಂಬಿಸುತ್ತದೆ.

ಮ್ಯೂಸಿಯಂನ ಮುಂದೆ 50ಕ್ಕೂ ಹೆಚ್ಚು ಚಿತ್ರಗಲ್ಲುಗಳಿವೆ. ಯಕ್ಷ– ಯಕ್ಷಿಣಿಯರು, ಯುದ್ದದಲ್ಲಿ ಸೆಣೆಸಾಡುತ್ತಿರುವ ಯೋಧರು, ಕುದುರೆ ಸವಾರಿ ಮಾಡುತ್ತಿರುವ ಪ್ರಣಯಿಗಳು, ಬೇಟೆಗಾರ, ನಾಟ್ಯ ಕಲಾವಿದೆ ಇತರ ಚಿತ್ರಗಲ್ಲುಗಳಿವೆ. ಶಿಲಾ ಸ್ತಂಭಗಳ ಮೇಲೆ ಸರ್ಪಬಂಧ, ಹಂಸ, ನರಸಿಂಹ ಇತರ ಉಬ್ಬು ಶಿಲ್ಪಗಳಿವೆ. ಮುನ್ನೂರು ವರ್ಷಗಳ ಹಿಂದಿನ ಫಿರಂಗಿಯೂ ಇಲ್ಲಿದೆ. ನೂರಾರು ಕಲ್ಲಿನ ಗುಂಡುಗಳನ್ನು ತ್ರಿಭುಜಾಕೃತಿಯಲ್ಲಿ ಜೋಡಿಸಲಾಗಿದೆ.

ಇತಿಹಾಸ:

ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ತಂದೆ 10ನೇ ಚಾಮರಾಜ ಒಡೆಯರ್ ಅವರ ಸ್ಮರಣಾರ್ಥ 1904ರಲ್ಲಿ ಈ ಕಟ್ಟವನ್ನು ನಿರ್ಮಿಸಿದ್ದಾರೆ. ಇಲ್ಲಿಗೆ ಬರುವ ಯಾತ್ರಾರ್ಥಿಗಳಿಗೆ ಅನ್ನ, ಪಾನಕ, ಮಜ್ಜಿಗೆ, ನೀರು ಕೊಡುವ ಉದ್ದೇಶದಿಂದ ಈ ಕಟ್ಟಡವನ್ನು ಮರ, ಇಟ್ಟಿಗೆ ಮತ್ತು ಚುರಕಿ ಗಾರೆಯಿಂದ ನಿರ್ಮಿಸಿದ್ದು, 120 ವರ್ಷ ಕಳೆದರೂ ಈಗಲೂ ಗಟ್ಟಿ ಮುಟ್ಟಾಗಿದೆ. ಈ ವಸ್ತುಸಂಗ್ರಹಾಲಯದ ಒಳ ಹೊಕ್ಕು ಅರ್ಧ ಗಂಟೆ ವೀಕ್ಷಿಸಿದರೆ ನೂರಾರು ಸಂಗತಿಗಳು ತಿಳಿಯುತ್ತವೆ. ಅಂದಹಾಗೆ, ಈ ಮ್ಯೂಸಿಯಂ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ (ಸರ್ಕಾರಿ ರಜೆ ದಿನ ಹೊರತುಪಡಿಸಿ) ತೆರೆದಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.