ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ಮಂಡ್ಯ | ಬೀನ್ಸ್‌, ಟೊಮೆಟೊ ದುಬಾರಿ; ಗ್ರಾಹಕ ಕಂಗಾಲು
ಮಂಡ್ಯ | ಬೀನ್ಸ್‌, ಟೊಮೆಟೊ ದುಬಾರಿ; ಗ್ರಾಹಕ ಕಂಗಾಲು
ಬಿಸಿಲಿನ ಝಳಕ್ಕೆ ಒಣಗುತ್ತಿರುವ ತರಕಾರಿ ಬೆಳೆ, ಮಳೆ ಬರುವವರೆಗೂ ದುಬಾರಿ ದರ
Published 14 ಜೂನ್ 2023, 1:27 IST
Last Updated 14 ಜೂನ್ 2023, 1:27 IST
ಅಕ್ಷರ ಗಾತ್ರ

ಮಂಡ್ಯ: ಬೀನ್ಸ್‌, ಹಾಗಲಕಾಯಿ, ಟೊಮೆಟೊ, ಕ್ಯಾರೆಟ್‌ ಮುಂತಾದ ತರಕಾರಿ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದು ಸಾಮಾನ್ಯ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಬಿಸಿಲ ಬೇಗೆಯಿಂದ ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣದಲ್ಲಿ ಕುಸಿತ ಉಂಟಾಗಿದ್ದು ಬೆಲೆಯಲ್ಲಿ ಏರಿಕೆಯಾಗಿದೆ.

ಕಳೆದ ವಾರ ₹10 ಇದ್ದ ಕೆ.ಜಿ ಟೊಮೆಟೊ ಬೆಲೆ ಈ ವಾರ ₹ 40– ₹ 50ಕ್ಕೆ ಏರಿಕೆಯಾಗಿದೆ. ನಾಟಿ ಬೀನ್ಸ್‌ ಮಾರುಕಟ್ಟೆಯಲ್ಲಿ ತೀವ್ರ ಕೊರತೆ ಎದುರಿಸುತ್ತಿದ್ದು ಕೆ.ಜಿ ₹ 120ಕ್ಕೆ ಮಾರಾಟವಾಗುತ್ತಿದೆ. ಗೆಡ್ಡೆ ಕೋಡು ಕೂಡ ₹ 60ಕ್ಕೆ ಮಾರಾಟವಾಗುತ್ತಿದ್ದು ಗ್ರಾಹಕರು ಇವುಗಳನ್ನು ಖರೀದಿ ಮಾಡಲು ಹಿಂದೆಮುಂದೆ ನೋಡುವಂತಾಗಿದೆ.

(ತರಕಾರಿ, ಹಣ್ಣು ದರ ಪಟ್ಟಿ (₹ಪ್ರತಿ ಕೆ.ಜಿ)

ನಾಟಿ ಬೀನ್ಸ್‌; 120

ನುಗ್ಗೇಕಾಯಿ; 80

ಹಸಿರು ಮೆಣಸಿನಕಾಯಿ; 80

ಕ್ಯಾರೆಟ್‌;80

ಗೆಡ್ಡೆಕೋಸು; 40

ಟೊಮೆಟೊ; 40

ರಾಜ್‌ ಈರುಳ್ಳಿ; 160

ನಾಟಿ ಬೆಳ್ಳುಳ್ಳಿ; 160

ಸೇಬು; 200

ಕಪ್ಪು ದ್ರಾಕ್ಷಿ; 140

ಸಪೋಟ; 80

ಕಿತ್ತಳೆ; 160

ಪಚ್ಚಬಾಳೆ; 30

ಏಲಕ್ಕಿಬಾಳೆ; 50

ದಾಳಿಂಬೆ; 180

ಮಳೆ ಬಾರದ ಕಾರಣ ಹೊಲಗಳಲ್ಲಿ ಉಷ್ಣಾಂಶ ಹೆಚ್ಚಾಗಿದೆ, ಜೊತೆಗೆ ನಾಲೆಗಳಿಗೆ ನೀರನ್ನೂ ಹರಿಸದ ಪರಿಣಾಮ ತೇವಾಂಶ ಇಲ್ಲವಾಗಿದೆ. ಹೀಗಾಗಿ ತರಕಾರಿ ಬೆಳೆ ಹಾಳಾಗುತ್ತಿದ್ದು ಮಾರುಕಟ್ಟೆಯ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮೈಸೂರು, ಬೆಂಗಳೂರು ಮಾರುಕಟ್ಟೆಯಲ್ಲೂ ಇದೇ ಪರಿಸ್ಥಿತಿ ಇರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ತರಕಾರಿ ವ್ಯಾಪಾರಿಗಳು ಹೇಳುತ್ತಾರೆ.

ಮಂಗಳೂರುಸೌತೆ, ಸಿಹಿಗುಂಬಳ, ಸೋರೆಕಾಯಿ ₹20, ಬೆಂಡೆಕಾಯಿ, ತೊಂಡೆಕಾಯಿ, ಸಿಹಿಗೆಣಸು, ಎಲೆಕೋಸು, ಮೂಲಂಗಿ, ಬೂದುಗುಂಬಳ, ಪಡವಲಾಯಿ, ಆಲೂಗೆಡ್ಡೆ ₹30, ಸೀಮೆಬದನೆಕಾಯಿ, ಹಾಗಲಕಾಯಿ, ಈರೇಕಾಯಿ, ಪಾರಂಬೆಳ್ಳುಳ್ಳಿ, ತಗಣಿಕಾಯಿ, ಬದನೆಕಾಯಿ, ಬೀಟರೂಟ್‌, ಮೂಲಂಗಿ ₹40ಕ್ಕೆ ಮಾರಾಟವಾಗುತ್ತಿವೆ.

ದಪ್ಪಮೆಣಸಿನಕಾಯಿ, ಹೂಕೋಸು, ಅವರೆಕಾಯಿ, ಗೋರಿಕಾಯಿ, ಸುವರ್ಣಗೆಡ್ಡೆ ₹60, ನಾಟಿಬೀನ್ಸ್‌, ನುಗ್ಗೇಕಾಯಿ, ಹಸಿರುಮೆಣಸಿನಕಾಯಿ ₹80, ನಾಟಿ ಬೀನ್ಸ್‌, ಹಸಿಬಟಾಣಿ ₹120, ರಾಜ್‌ಈರುಳ್ಳಿ ₹160, ಶುಂಠಿ ₹200ರಂತೆ ಪ್ರತಿ ಕೆ.ಜಿಗೆ ಮಾರಾಟವಾಗುತ್ತಿದ್ದರೆ, ಒಂದು ನಿಂಬೆಹಣ್ಣಿಗೆ ₹5ರಂತೆ ಮಾರಾಟ ಮಾಡಲಾಗುದೆ. ಸೌತೆಕಾಯಿ ಬೆಲೆ ಕೂಡ ಹೆಚ್ಚಳವಾಗಿದ್ದು 1 ಸೌತೆಕಾಯಿ ₹ 10ಕ್ಕೆ ಮಾರಾಟವಾಗುತ್ತಿದೆ.

ಸೊಪ್ಪುಗಳ ಬೆಲೆಯಲ್ಲಿ ಸ್ಥಿರತೆ ಇದೆ. ಮೆಂತೆ ಸೊಪ್ಪು ₹10ಕ್ಕೆ ಇಳಿಕೆಯಾಗಿದೆ, ಕಳೆದವಾರ 1 ಕಟ್ಟು ₹ 40ಕ್ಕೆ ಮಾರಾಟವಾಗುತ್ತಿತ್ತು. ಕಿಲ್‌ಕೀರೆ, ಪುದಿನಾ, ಪಾಲಾಕ್‌, ಕರಿಬೇವು ₹10, ದಂಟು ₹15, ಸಬ್ಬಸಿಗೆ, ಚಿಕ್ಕಿಸೊಪ್ಪು ₹20, ಫಾರಂ ಕೊತ್ತಂಬರಿ ₹ 30ಕ್ಕೆ ಮಾರಾಟವಾಗುತ್ತಿದೆ. ಬಿಸಿಲಿನ ಕಾರಣದಿಂದಾಗಿ ತಾಜಾ ಸೊಪ್ಪು ಗ್ರಾಕರಿಗೆ ದೊರೆಯುತ್ತಿಲ್ಲ.

ಕೆಲವು ಹೂಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಅದರಲ್ಲಿ ಮಲ್ಲಿಗೆ, ಕನಕಾಂಬರ, ಕಾಕಡ ದುಬಾರಿ ಆಗಿದೆ. ಕೆಂಪು ಚೆಂಡು ಹೂ ಕೆ.ಜಿ ₹ 50, ಹಳದಿ ಚೆಂಡುವೂ ₹50, ಸುಗಂಧ ರಾಜ ₹120, ಸಣ್ಣಗುಲಾಬಿ, ಕಲ್ಕತ್ತಾ ಮಲ್ಲಿಗೆ, ಗಣಗಲೆ, ಸೇವಂತಿಗೆ ₹160, ಬಿಳಿ ಸೇವಂತಿ ₹180, ಬಟನ್ಸ್‌ ₹250, ಮರಳೆ ₹550, ಕಾಕಡ ₹500, ಮಲ್ಲಿಗೆ ₹600, ಕನಕಾಂಬರ ₹850ರಂತೆ ಮಾರಾಟವಾಗುತ್ತಿವೆ.

ಮಾರು ತುಳಸಿ, ಕೆಂಪು ಚೆಂಡುಹೂ ₹30, ಹಳದಿ ಚೆಂಡು ಹೂ ₹40, ಕಾಕಡ, ಮರಳೆ ₹50, ಕನಕಾಂಬರ ₹60, ಬಟನ್ಸ್‌ ₹70, ಸೇವಂತಿಗೆ, ಬಿಳಿ ಸೇವಂತಿಗೆ ₹80, ಮಲ್ಲಿಗೆ ₹100ರಂತೆ ಮಾರಾಟವಾಗುತ್ತಿವೆ.

ಹಣ್ಣುಗಳ ಬೆಲೆಯೂ ದೂಬಾರಿಯಾಗಿದ್ದು ಗ್ರಾಹಕರಿಗೆ ಭಾರ ಎನಿಸಿವೆ. ಕೆ.ಜಿ ಸೇಬು ಹಣ್ಣು ₹ 200 ದಾಟಿದೆ. ಪಪ್ಪಾಯ, ಪಚ್ಚಬಾಳೆ ₹30, ಕಲ್ಲಂಗಡಿ, ಅನಾನಸ್ ₹40, ಏಲಕ್ಕಿಬಾಳೆಹಣ್ಣು, ಕರಬೂಜ ₹50, ಸೀಬೆ, ಸಪೋಟ, ಮೂಸಂಬಿ ₹80, ಕಂದ್ರಾಕ್ಷಿ, ಕಪ್ಪುದ್ರಾಕ್ಷಿ, ದಪ್ಪದ್ರಾಕ್ಷಿ, ಕಿವಿಹಣ್ಣು(ಬಾಕ್ಸ್‌) ₹140, ಕಿತ್ತಳೆ ₹160, ದಾಳಿಂಬೆ ₹180ರಂತೆ ಮಾರಾಟವಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT