ಮೈಸೂರು: ಪುರಂದರದಾಸರ ‘ರಾಗಿ ತಂದಿರಾ ಭಿಕ್ಷಕೆ’ ಕೀರ್ತನೆಯ ಅರ್ಥ ವಿವರಿಸುತ್ತಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಕನ್ನಡ ಸೇರಿದಂತೆ ದೇಶದ ಎಲ್ಲ ಭಾಷೆ, ಸಂಸ್ಕೃತಿ, ಪರಂಪರೆಯ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ರಾಜ್ಯ ಸರ್ಕಾರಗಳೂ ಕೇಂದ್ರದ ಕಾರ್ಯಕ್ಕೆ ಕೈ ಜೋಡಿಸಬೇಕು’ ಎಂದು ಕೋರಿದರು.

ಇಲ್ಲಿನ ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ, ಕೇಂದ್ರ ಸಂಸ್ಕೃತಿ ಸಚಿವಾಲಯವು ಆಯೋಜಿಸಿರುವ ಮೂರು ದಿನಗಳ ಕರ್ನಾಟಕ ಶಾಸ್ತ್ರೀಯ ಸಂಗೀತದ ದಾಸ ಪರಂಪರೆಯ ಸಂಗೀತೋತ್ಸವ ‘ಮೈಸೂರು ಸಂಗೀತ ಸುಗಂಧ– 2024’ಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
.ಸಾಮಾಜಿಕ ಸಬಲೀಕರಣಕ್ಕೆಆರ್ಥಿಕ ನೀತಿ ಪೂರಕ: ನಿರ್ಮಲಾ ಸೀತಾರಾಮನ್.
‘ಮುಂದಿನ ಪೀಳಿಗೆಗೆ ಭಾರತವನ್ನು ಆರ್ಥಿಕ ಬಲಾಢ್ಯರಾಷ್ಟ್ರಗೊಳಿಸುವ ಜೊತೆಗೆ ಬಹುವೈವಿಧ್ಯದ ಭಾಷೆ, ಸಂಸ್ಕೃತಿ, ಸಂಗೀತವನ್ನು ಎಲ್ಲೆಡೆ ಪಸರಿಸುವುದೂ ಸರ್ಕಾರದ ಗುರಿ. ‘ವಿಕಾಸ್ ಭೀ, ವಿರಾಸತ್ ಭೀ’ (ವಿಕಾಸವೂ ಪರಂಪರೆಯೂ) ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರ’ ಎಂದು ತಿಳಿಸಿದರು.

‘ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಎಲ್ಲ ಭಾಷೆಗಳೂ ಶ್ರೇಷ್ಠ ಹಾಗೂ ಶ್ರೀಮಂತ. ಈ ಬಹು ವೈವಿಧ್ಯವನ್ನು ಉಳಿಸಲು ಏಕ ಭಾರತ ಶ್ರೇಷ್ಠ ಭಾರತ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಮೈಸೂರು ಸಂಗೀತ ಸುಗಂಧವು ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ಇರುವ ನವೆಂಬರ್ ತಿಂಗಳ ಮೊದಲ ವಾರ ಆಯೋಜನೆಯಾಗಲಿದೆ. ರಾಜ್ಯ ಸರ್ಕಾರವೂ ಬೆಂಬಲಿಸಬೇಕಿದೆ’ ಎಂದರು.
.ಯಾವ ದೇಶವೂ ಭಾರತವನ್ನು ಉಪೇಕ್ಷಿಸಲಾಗದು: ಸಚಿವೆ ನಿರ್ಮಲಾ ಸೀತಾರಾಮನ್.
‘ತಮಿಳುನಾಡಿನ ತಿರುವಾರೂರಿನಂತೆ ಮೈಸೂರು ಕರ್ನಾಟಕ ಸಂಗೀತಕ್ಕೆ ಕೊಡುಗೆ ನೀಡಿದೆ. ಮೈಸೂರಿನವರೇ ಆದ ಸದಾಶಿವರಾಯ, ವೀಣೆ ಶೇಷಣ್ಣ, ಮುತ್ತಯ್ಯ ಭಾಗವತಾರ್, ವಾಸುದೇವಾಚಾರ್ಯ ಎಲ್ಲರೂ ಕರ್ನಾಟಕ ಸಂಗೀತಕ್ಕೆ ಚಿನ್ನದ ಸ್ಪರ್ಶ ನೀಡಿದ್ದಾರೆ. ಮೈಸೂರು ಸಂಸ್ಥಾನದ ಜಯಚಾಮರಾಜೇಂದ್ರ ಒಡೆಯರ್ ಅವರೇ ನೂರಾರು ಸಂಗೀತ ಕೃತಿ ಸಂಯೋಜಿಸಿದ್ದಾರೆ’ ಎಂದು ಸ್ಮರಿಸಿದರು.

‘ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರ್, ಶ್ಯಾಮಶಾಸ್ತ್ರೀ ಅವರಿಗೂ ಮುನ್ನವೇ ಪುರಂದರದಾಸರು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಚೌಕಟ್ಟು ನೀಡಿ ಪಿತಾಮಹರಾದರು. ಕನಕದಾಸ, ಶ್ರೀಪಾದದಾಸ, ವಿಜಯದಾಸ, ಜಗನ್ನಾಥದಾಸ ಸೇರಿದಂತೆ ಭಕ್ತಿ ಚಳವಳಿಯ ದಾಸಶ್ರೇಷ್ಠರು ಬೀದಿಗಿಳಿದು ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದಿದ್ದರು’ ಎಂದರು.

‘ಕನ್ನಡದ ದಾಸ ಪರಂಪರೆಯ ಭಕ್ತಿಸಂಗೀತ ದೇಶದ ಪ್ರತಿಯೊಬ್ಬರ ಹೃದಯವನ್ನೂ ನೇರವಾಗಿ ತಟ್ಟುತ್ತದೆ. ಚಿಕ್ಕಂದಿನಲ್ಲಿ ಕನ್ನಡ ಗೊತ್ತಿಲ್ಲದಿದ್ದರೂ ಪುರಂದರ ದಾಸರ ‘ಗಜವದನ ಬೇಡುವೆ, ಗೌರಿ ತನಯ’ ಹೇಳುತ್ತಿದ್ದೆ’ ಎಂದು ನೆನಪು ಮಾಡಿಕೊಂಡರು.
.ಚುನಾವಣಾ ಬಾಂಡ್ ಮೂಲಕ ಸುಲಿಗೆ ಆರೋಪ: ನಿರ್ಮಲಾ ಪ್ರಕರಣ ಸಿಐಡಿಗೆ ವಹಿಸಲು ಚಿಂತನೆ.
‘ಕೇಂದ್ರ ಸರ್ಕಾರ ಎಲ್ಲ ನೀಡಿದೆ’

‘ಕೇಂದ್ರ ಸರ್ಕಾರ ಮೈಸೂರು ಸೇರಿದಂತೆ ರಾಜ್ಯಕ್ಕೆ ಎಲ್ಲ ಅಗತ್ಯ ಸಹಕಾರ ನೀಡುತ್ತಿದೆ. ವೋಕಲ್ ಫಾರ್ ಲೋಕಲ್ ಅಭಿಯಾನದಡಿ ಪ್ರತಿ ಜಿಲ್ಲೆಯ ಉತ್ಪನ್ನ, ಕಲೆಯನ್ನು ಜಗತ್ತಿಗೆ ಕೊಂಡೊಯ್ಯುತ್ತಿದೆ’ ಎಂದು ನಿರ್ಮಲಾ ಹೇಳಿದರು.

‘ಪ್ರಸಾದ್ ಯೋಜನೆಯಡಿ ಚಾಮುಂಡೇಶ್ವರಿ ದೇಗಲ ಅಭಿವೃದ್ಧಿಗೆ ₹ 45.71 ಕೋಟಿ, ಸ್ವದೇಶ್ ದರ್ಶನ್ ಯೋಜನೆಯಡಿ ಟಾಂಗಾ ಸವಾರಿ ವಲಯ ಅಭಿವೃದ್ಧಿಗೆ ₹ 22.48 ಕೋಟಿ ನೀಡಲಾಗಿದೆ. ಬೇಲೂರು– ಹಳೇಬೀಡು– ಸೋಮನಾಥಪುರ ದೇಗುಲಗಳು ಯುನೆಸ್ಕೋ ಪಾರಂಪರಿಕ ತಾಣವಾಗಿವೆ. ಹಂಪಿಯಲ್ಲಿ ನಡೆದ ಜಿ–20 ಸಭೆಯಲ್ಲಿ ನಾಡಿನ ಲಂಬಾಣಿ ಕರಕುಶಲ ವಸ್ತು ಪ್ರದರ್ಶಿಸಲಾಗಿತ್ತು. ‘ಬಾರಿಸು ಕನ್ನಡ ಡಿಂಡಿಮವ’ ಅಭಿಯಾನಕ್ಕೆ ಪ್ರಧಾನಿ ಚಾಲನೆ ನೀಡಿದ್ದರು’ ಎಂದು ವಿವರಿಸಿದರು.
.ಚುನಾವಣಾ ಬಾಂಡ್ ಹಗರಣ | ಸಚಿವೆ ನಿರ್ಮಲಾ ರಾಜೀನಾಮೆ ನೀಡಲಿ: ಕಾಂಗ್ರೆಸ್.
‘ಗ್ಯಾರಂಟಿ’ ಬೇಡವೆಂದ ಪ್ರೇಕ್ಷಕ ವಶಕ್ಕೆ: ನಿರ್ಮಲಾ ಅವರ ಭಾಷಣ ಮುಗಿಯುತ್ತಿದ್ದಂತೆ ಕೆ.ಆರ್.ನಗರದ ರೇವಣ್ಣ ಎಂಬುವರು ವೇದಿಕೆ ಮುಂಭಾಗಕ್ಕೆ ಬಂದು, ‘ಮಹಾರಾಷ್ಟ್ರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಘೋಷಿಸಬೇಡಿ’ ಎಂದು ಕೋರಿದರು.

‘ಮೋದಿ ದೇಶ ಅಭಿವೃದ್ಧಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಮಾಡಿ ಲೂಟಿ ಮಾಡುತ್ತಿದೆ’ ಎಂದರು. ವೇದಿಕೆಯಿಂದಲೇ ಹೀಗೆ ಮಾತನಾಡದಂತೆ ಸಚಿವೆ ಸೂಚಿಸಿದರು. ಅವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಸಚಿವ ಸುರೇಶ್ ಗೋಪಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್.ಶ್ರೀವತ್ಸ, ಪ್ರವಾಸೋದ್ಯಮ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸುಮನ್ ಬಿಲ್ಲಾ ಹಾಜರಿದ್ದರು
.ಚುನಾವಣಾ ಬಾಂಡ್ ಮೂಲಕ ಸುಲಿಗೆ ಆರೋಪ: ನಿರ್ಮಲಾ ವಿರುದ್ಧದ FIRನಲ್ಲಿ ಏನಿದೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.