ಮೈಸೂರು: ಪಾಲಿಕೆಯ ಮಹತ್ವಕಾಂಕ್ಷಿ ಪರಿಸರ ಸ್ನೇಹಿ ಯೋಜನೆ ‘ಸೈಕಲ್ ಫಾರ್ ಚೇಂಜ್’ ಸಮರ್ಪಕ ಅನುಷ್ಠಾನ ಕೊರತೆ ಹಾಗೂ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಎದುರಿಸುತ್ತಿದೆ. ಅದಕ್ಕೆ ಸೈಕಲ್ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೆಎಲ್ಬಿ ರಸ್ತೆಯಲ್ಲಿ ನಿರ್ಮಿಸಲಾದ ಸೈಕಲ್ ಪಥ ಪಾರ್ಕಿಂಗ್ ತಾಣವಾಗಿ ಬದಲಾಗಿದೆ. ಮಳಿಗೆದಾರರು, ಆಟೊ ಚಾಲಕರು ಟ್ರ್ಯಾಕ್ ಅನ್ನು ಅತಿಕ್ರಮಿಸಿಕೊಂಡಿದ್ದು, ಯೋಜನೆಯ ಉದ್ದೇಶವು ಈಡೇರಿಲ್ಲ ಎಂಬುದಕ್ಕೆ ಉದಾಹರಣೆ.

ಮುಡಾ ವೃತ್ತದಿಂದ ರಾಮಸ್ವಾಮಿ ವೃತ್ತದವರೆಗಿನ ಟ್ರ್ಯಾಕ್ನಲ್ಲಿ ಗಿಡಗಂಟಿಗಳನ್ನು ಗುಡ್ಡೆ ಮಾಡಲಾಗಿದೆ. ಚಹಾ ಅಂಗಡಿಯವರು ಟ್ರ್ಯಾಕ್ನಲ್ಲಿನ ಮರಕ್ಕೆ ಕಟ್ಟೆಯನ್ನು ಕಟ್ಟಿ, ಕುರ್ಚಿಗಳನ್ನು ಇರಿಸಿದ್ದಾರೆ. ಮುಂದೆ ಸಾಗಿದರೆ ಕಾರುಗಳು, ಬೈಕ್ ನಿಲ್ಲುತ್ತಿವೆ. ಖಾಸಗಿ ಹೋಟೆಲ್ನವರು ಟ್ರ್ಯಾಕ್ ಮೇಲೆಯೇ ಅಡುಗೆ ಮಾಡುತ್ತಿದ್ದಾರೆ. ರಾಮಸ್ವಾಮಿ ವೃತ್ತದಲ್ಲಿ ಆಟೊ ಚಾಲಕರು ಟ್ರ್ಯಾಕ್ ಮೇಲೆ ಆಟೊಗಳನ್ನು ನಿಲ್ಲಿಸುತ್ತಿದ್ದಾರೆ.

‘ಸೈಕಲ್ ಫಾರ್ ಚೇಂಜ್ ಯೋಜನೆ’ಯು ಪೂರ್ಣಗೊಂಡಿದ್ದರೂ ಅವೈಜ್ಞಾನಿಕ ನಿರ್ಮಾಣ ಹಾಗೂ ನಿರ್ವಹಣೆಯ ಕಾರಣ ಸಾರ್ವಜನಿಕರ ಹಣ ಪೋಲಾಗಿದೆ’ ಎನ್ನುತ್ತಾರೆ ಅಶೋಕಪುರಂನ ಪುನೀತ್.

ಎಲ್ಲೆಲ್ಲಿ ಪಥ: 2021ರಲ್ಲಿ ಯೋಜನೆಯನ್ನು ಪಾಲಿಕೆ ಅನುಷ್ಠಾನಕ್ಕೆ ತಂದಿತು. ಇದಕ್ಕೂ ಮುನ್ನ ಕಾರಂಜಿ ಕೆರೆ ಎದುರಿನ ನರಸಿಂಹರಾಜ ಬುಲೇವಾರ್ಡ್ನಲ್ಲಿ 1.5 ಕಿ.ಮೀ ಸೈಕಲ್ ಪಥವಿತ್ತು. ಹೊಸದಾಗಿ 8.73 ಕಿ.ಮೀ ಸೈಕಲ್ ಪಥವನ್ನು 8 ಕಡೆ ಸೈಕಲ್ ಪ್ರಿಯರಿಗಾಗಿ ನಿರ್ಮಿಸಲಾಗಿದೆ.

‘ಎಲ್ಲಿಯೂ ಯೋಜನೆಯು ಸಂಪೂರ್ಣವಾಗಿಲ್ಲ. ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಎರಡು ಸೈಕಲ್ ಸಂಚರಿಸುವಷ್ಟು ಟ್ರ್ಯಾಕ್ ಇರಲಿದೆಯೆಂದು ಪಾಲಿಕೆಯು ಯೋಜನೆ ಕಾರ್ಯರೂಪಕ್ಕೆ ತರುವಾಗ ಹೇಳಿತ್ತು. ಇದೀಗ ಇರುವ ರಸ್ತೆಗೆ ಟ್ರಾಫಿಕ್ ಕೋನ್ಗಳನ್ನು ಅಳವಡಿಸಿದ್ದು, ಅವುಗಳೂ ಪಾರ್ಕಿಂಗ್ ತಾಣಗಳಾಗಿವೆ’ ಎಂದು ಸೈಕ್ಲಿಸ್ಟ್ ಸಂದೀಪ್ ರಾವ್ ಬೇಸರ ವ್ಯಕ್ತಪಡಿಸಿದರು.

ಟ್ರಿಣ್ಟ್ರಿಣ್ 2.0 ಬಂದರೂ ಆಗದ ನಿರ್ವಹಣೆ: 2017ರಲ್ಲಿ ದೇಶದ ಮೊದಲ ಸಾರ್ವಜನಿಕ ಬೈಸಿಕಲ್ ಹಂಚಿಕೆ (ಪಿಬಿಎಸ್) ಯೋಜನೆ ‘ಟ್ರಿಣ್ ಟ್ರಿಣ್’ ಜಾರಿಗೊಂಡಾಗ ಪ್ರತ್ಯೇಕ ಪಥವಿರಲಿಲ್ಲ. 2021–22ರಲ್ಲಿ ಪಥ ನಿರ್ಮಾಣ ಆರಂಭವಾಯಿತು. ಇದೀಗ ಟ್ರಿಣ್– ಟ್ರಿಣ್ ಸೈಕಲ್ 2.0 ಯೋಜನೆ ಅನುಷ್ಠಾನಗೊಂಡಿದೆ. ಜಿಪಿಎಸ್ ಆಧರಿತ ಸಾವಿರ ಪೆಡಲ್ ಅಸಿಸ್ಟ್ ಸೈಕಲ್ಗಳು ಹಾಗೂ 100 ಡಾಕ್ಲೆಸ್ ಹಬ್ ನಿರ್ಮಾಣ ಮಾಡಲಾಗಿದೆ ಎಂದು ಪಾಲಿಕೆಯ ಬಜೆಟ್ನಲ್ಲಿ ಹೇಳಲಾಗಿದೆ. ಹೀಗಿದ್ದರೂ ಸೈಕಲ್ ಪಥ ಸಮರ್ಪಕ ನಿರ್ವಹಣೆಯಿಲ್ಲ.

ಈ ಬಗ್ಗೆ ಪ್ರತಿಕ್ರಿಯೆಗೆ ‘ಪ್ರಜಾವಾಣಿ’ ಕರೆ ಮಾಡಿದರೂ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್ ಸ್ವೀಕರಿಸಲಿಲ್ಲ.

‘ಸೈಕಲ್ ಸಂಸ್ಕೃತಿಗೆ ಪಥ ಬೇಕು’

‘ಸೈಕ್ಲಿಂಗ್ ಪಟುಗಳು ಹಾಗೂ ಫಿಟ್ನೆಸ್ ಪ್ರಿಯರು ಚಾಮುಂಡಿ ಬೆಟ್ಟ ರಸ್ತೆ ಗ್ರಾಮೀಣ ಭಾಗದ ರಸ್ತೆ ರಿಂಗ್ ರಸ್ತೆ ಬಳಸುತ್ತಿದ್ದಾರೆ. ಸಾಮಾನ್ಯ ನಾಗರಿಕರು ನಿತ್ಯದ ಚಟುವಟಿಕೆಗಳಿಗಾಗಿ ಸೈಕಲ್ ಅನ್ನು ಬಳಸುವಂತಾಗಲು ನಗರದಲ್ಲಿ ಪ್ರತ್ಯೇಕ ಪಥ ನಿರ್ಮಿಸಬೇಕು’ ಎಂದು ಮೈಸೂರು ಜಿಲ್ಲಾ ಹವ್ಯಾಸಿ ಸೈಕ್ಲಿಂಗ್ ಸಂಸ್ಥೆಯ ಲೋಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದ ಹೃದಯಭಾಗದ ರಸ್ತೆಗಳಲ್ಲಿ ಪಥಗಳನ್ನು ನಿರ್ಮಾಣ ಮಾಡಬೇಕು. ಈಗ ಕೋನ್ಗಳನ್ನು ಅಳವಡಿಸಿ ಟ್ರ್ಯಾಕ್ ಮಾಡಿರುವುದು ಅವೈಜ್ಞಾನಿಕವಾಗಿದ್ದು ದೀರ್ಘಕಾಲ ಬಾಳಿಕೆ ಬರದು’ ಎಂದು ಹೇಳಿದರು. ‘ಜನರಿಗೂ ಸೈಕಲ್ ಬಳಸಲು ಪ್ರೋತ್ಸಾಹಿಸಬೇಕು. ಇತ್ತೀಚೆಗೆ ರಾಜ್ಯ ಬಜೆಟ್ನಲ್ಲಿ ಮೈಸೂರಿನಲ್ಲಿ ವೆಲೋಡ್ರೋಮ್ ನಿರ್ಮಾಣಕ್ಕೆ ₹ 10 ಕೋಟಿ ಅನುದಾನ ನೀಡುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.