ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಷಡ್ಯಂತ್ರಕ್ಕೆ ಜಗ್ಗಲ್ಲ, ಬಗ್ಗಲ್ಲ, ಕೈಕಟ್ಟಿ ಕೂರಲ್ಲ: ಅಬ್ಬರಿಸಿದ ಸಿದ್ದರಾಮಯ್ಯ

Published : 9 ಆಗಸ್ಟ್ 2024, 13:40 IST
Last Updated : 9 ಆಗಸ್ಟ್ 2024, 13:40 IST
ಫಾಲೋ ಮಾಡಿ
Comments
ಬೊಬ್ಬೆ ಹಾಕುತ್ತಿದ್ದಾರೆ:
‘ಮುಡಾ ವಿಚಾರದಲ್ಲಿ ನನ್ನದೊಂದು ಪತ್ರವಿಲ್ಲ, ಸಹಿಯೂ ಇಲ್ಲ. ಆಗ ನಮ್ಮ ಸರ್ಕಾರವೂ ಇರಲಿಲ್ಲ. ಆದರೆ, ಹಗರಣ, ಎಂದು ಬೊಬ್ಬೆ ಹಾಕುತ್ತಾ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಅದಕ್ಕೆ ಸೊಪ್ಪು ಹಾಕಬೇಡಿ’ ಎಂದು ಕೋರಿದರು. ‘ಕೋಮುವಾದಿಗಳು, ಜಾತಿವಾದಿಗಳು, ಪಾಳೇಗಾರಿಕೆ ಪ್ರವೃತ್ತಿ ಇರುವವರನ್ನು ಓಡಿಸಬೇಕಾದ ಅನಿವಾರ್ಯ ಇದೆ’ ಎಂದರು. ‘ನನ್ನ ರಾಜಕೀಯ ಜೀವನ ತೆರೆದ ಪುಸ್ತಕ, ಅಧಿಕಾರ ಸಿಕ್ಕಿದ್ದರೂ ಆಸ್ತಿ ಮಾಡಬೇಕು ಎಂಬ ವ್ಯಾಮೋಹ‌ ಬಂದಿಲ್ಲ; ನನ್ನ ಕುಟುಂಬಕ್ಕೂ ಇಲ್ಲ. ರಾಜ್ಯದ ಜನರಿಗೆ ದ್ರೋಹ ಮಾಡಲು ಸಾಧ್ಯವೇ?’ ಎಂದು ಕೇಳಿ ನೆರೆದಿದ್ದವರಿಂದ ‘ಇಲ್ಲ, ಇಲ್ಲ’ ಎಂಬ ಉತ್ತರವನ್ನು ಪಡೆದುಕೊಂಡರು.
ಜನರ ಆಶೀರ್ವಾದ ಇರುವವರೆಗೂ ನನ್ನನ್ನಾಗಲಿ, ನಮ್ಮ ಸರ್ಕಾರವನ್ನಾಗಲಿ ಯಾರಿಂದಲೂ ಅಲುಗಾಡಿಸಲು ಸಾಧ್ಯವಾಗುವುದಿಲ್ಲ
ಸಿದ್ದರಾಮಯ್ಯ, ಮುಖ್ಯಮಂತ್ರಿ
ನಿವೇಶನ ಇದ್ದರೆ ತೋರಿಸಲಿ: ಸಿ.ಎಂ
‘15 ಬಜೆಟ್ ಮಂಡಿಸಿದ ನನಗೆ ಹಣದ ಮೋಹ ಇದ್ದಿದ್ದರೆ ಕೋಟಿ ಕೋಟಿ ರೂಪಾಯಿ ಮಾಡಬಹುದಿತ್ತು. ಇಷ್ಟು ದಿನವಾದರೂ ನನಗೆ ಮೈಸೂರಲ್ಲಿ ಮನೆ ಇಲ್ಲ. ಈಗ ಕಟ್ಟಿಸುತ್ತಿದ್ದೇನೆ. ಹಿಂದಿದ್ದ ಮನೆಯನ್ನು ಸಾಲ ಪಡೆದು ಕಟ್ಟಿಸಿದ್ದೆ. ಸಾಲ ತೀರಿಸಲಾಗದೇ ಮಾರಿದೆ. ಬಾಡಿಗೆ ಮನೆಯಲ್ಲಿದ್ದುಕೊಂಡೇ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಈಗ ಕಟ್ಟುತ್ತಿರುವ ಮನೆ ಬಿಟ್ಟು ನನ್ನ ಹೆಸರಲ್ಲಿ ಒಂದೇ ಒಂದು ಸೈಟು ಇದ್ದರೆ ತೋರಿಸಲಿ’ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
‘ಅವರೆಲ್ಲರೂ ಜೈಲಿಗೆ ಹೋಗುತ್ತಿದ್ದರು’
‘ನಾನು ಎಂದಿಗೂ ದ್ವೇಷದ ಅಥವಾ ಸೇಡಿನ ರಾಜಕಾರಣ ಮಾಡಿಲ್ಲ.‌ ಹಾಗೇನಾದರೂ ಮಾಡಿದ್ದರೆ ಇಂತಹ ಪರಿಸ್ಥಿತಿ ನನಗೆ ಬರುತ್ತಿರಲಿಲ್ಲ. ನನ್ನ ವಿರುದ್ಧ ಆರೋಪಿಸುತ್ತಿರುವ ವಿರೋಧ ಪಕ್ಷದವರೆಲ್ಲರೂ ಜೈಲಿಗೆ ಹೋಗುತ್ತಿದ್ದರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT