ಮೈಸೂರು: ‘ನಾನು ಬೆಂಗಳೂರಿನ ವಿದ್ಯಾನಿಕೇತನದಲ್ಲಿ ಓದಿದೆ. ಪಠ್ಯಗಳ ಒತ್ತಡ ಹೆಚ್ಚಿದಂತೆ ಕ್ರೀಡೆ ಹೆಚ್ಚು ಆಪ್ತವಾಯಿತು. ಹೀಗಾಗಿ ಪಿಟಿ ಟೀಚರ್ ನನ್ನ ಫೇವರಿಟ್ ಆದರು’ ಎಂದು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ನೆನೆದರು.

ವಿದ್ಯಾರ್ಥಿನಿ ಅಪೂರ್ವಾಳ ಪ್ರಶ್ನೆಗೆ ಉತ್ತರಿಸುತ್ತಿದ್ದಂತೆಯೇ ವಿದ್ಯಾರ್ಥಿಗಳು ಕುತೂಹಲದಿಂದ ಅವರ ಮಾತುಗಳನ್ನು ಆಲಿಸಿದರು.

‘ಕಲಿಸು’ ಫೌಂಡೇಷನ್ ಇಲ್ಲಿನ ಕುಂಬಾರಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿದ ಗ್ರಂಥಾಲಯವನ್ನು ಸೋಮವಾರ ಉದ್ಘಾಟಿಸಿದ ಸಂಸದರು, ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದರು.

ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಗಾನವಿ ‘ಗುಣಮಟ್ಟದ ಶಿಕ್ಷಣ ಎಂದರೇನು’ ಎಂದು ಪ್ರಶ್ನಿಸಿದಳು. ಅದಕ್ಕೆ ಪ್ರತಿಕ್ರಿಯಿಸಿ, ‘ಶಿಕ್ಷಣಕ್ಕೆ ಪೂರಕವಾದ ವಾತಾವರಣ ಹಾಗೂ ತಂತ್ರಜ್ಞಾನದ ಜೊತೆಗಿನ ಕಲಿಕೆಯೇ ಗುಣಮಟ್ಟದ ಶಿಕ್ಷಣ. ಈಗಿನ ತಲೆಮಾರಿನ ಮಕ್ಕಳಿಗೆ ಭಾರತದಲ್ಲಿ ವಿಫುಲ ಉದ್ಯೋಗ ಅವಕಾಶವಿದ್ದು, ಕೌಶಲಾಧರಿತ ಶಿಕ್ಷಣ ಪಡೆದರೆ ವೃತ್ತಿ ಜೀವನಕ್ಕೆ ಸಹಕಾರಿ ಆಗಲಿದೆ. ಸರ್ಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳಂತೆ ಉತ್ತಮ ಸೌಲಭ್ಯ, ಗುಣಮಟ್ಟ ಸಿಗಲು ಶ್ರಮಿಸುತ್ತೇವೆ’ ಎಂದರು.

4ನೇ ತರಗತಿಯ ಮುಕ್ತಾ ‘ಸಮಾಜಸೇವೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು’ ಎಂದು ಪ್ರಶ್ನಿಸಿದಳು. ‘ಸಮಾಜಸೇವೆ ಭಾರತಿಯರಲ್ಲಿ ರಕ್ತಗತವಾಗಿದ್ದು, ಮನೆಯಿಂದಲೇ ಅದರ ಆರಂಭವಾಗಬೇಕು. ತಂದೆ– ತಾಯಿಯ ಸೇವೆಯ ಬಳಿಕ ಸಮಾಜದ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು’ ಎಂದು ಯದುವೀರ್ ಉತ್ತರಿಸಿದರು.

8ನೇ ತರಗತಿಯ ಧನ್ಯಶ್ರೀ ‘ವಿದ್ಯಾರ್ಥಿಗಳಿಗೆ ನಿಮ್ಮ ಕಿವಿ ಮಾತೇನು’ ಎಂದು ಸಂಸದರನ್ನು ಕೇಳಿದಾಗ, ‘ವಿದ್ಯಾಭ್ಯಾಸಕ್ಕೆ ಭಾರತದಲ್ಲಿ ಉತ್ತಮ ಅವಕಾಶಗಳಿವೆ, ಅವನ್ನು ಬಳಸಿಕೊಂಡು ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಅಧ್ಯಯನ ನಡೆಸಿ’ ಎಂದು ಸಲಹೆ ನೀಡಿದರು.

ಒಗ್ಗಟ್ಟಿನ ಕಥೆ ಹೇಳಿದ ಯದುವೀರ್: ಕಲಿಸು ಫೌಂಡೇಷನ್ ವತಿಯಿಂದ ರೂಪಿಸಿದ 100ನೇ ಗ್ರಂಥಾಲಯ ಉದ್ಘಾಟಿಸಿದ ಯದುವೀರ್, ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ನೀತಿ ಕಥೆಯನ್ನು ಹೇಳಿದರು.

ಎಡಿಸಿ ಪಿ.ಶಿವರಾಜು, ಕಲಿಸು ಫೌಂಡೇಶನ್ ಸಂಸ್ಥಾಪಕ ಎಂ.ಎಂ.ನಿಖಿಲೇಶ್, ಡಿಡಿಪಿಐ ಜವರೇಗೌಡ, ಉತ್ತರ ವಲಯದ ಬಿಇಒ ಎಸ್.ರೇವಣ್ಣ ಇದ್ದರು.

ಪಠ್ಯಗಳ ಒತ್ತಡ ಹೆಚ್ಚಿದಂತೆ ಕ್ರೀಡೆ ಹೆಚ್ಚು ಆಪ್ತವಾಯಿತು ಕೌಶಲಾಧರಿತ ಶಿಕ್ಷಣದಿಂದ ವೃತ್ತಿ ಜೀವನಕ್ಕೆ ಸಹಕಾರಿ ಆಗಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.