ಏನಿದು ಸೆಟ್ಲ್‌ಮೆಂಟ್ ಡೀಡ್?
ಸೆಟ್ಲ್‌ಮೆಂಟ್ ಡೀಡ್ ಎನ್ನುವುದು ಆಸ್ತಿ ನೋಂದಣಿಗೆ ದಾನಪತ್ರದಂತೆಯೇ ಇರುವ ಇನ್ನೊಂದು ಮಾರ್ಗ. ಇಲ್ಲಿ ಒಬ್ಬ ವ್ಯಕ್ತಿಯು ತನ್ನ ಹತ್ತಿರದ ಬಂಧುಗಳಿಗೆ ತನ್ನ ಆಸ್ತಿಯ ಹಕ್ಕನ್ನು ವರ್ಗಾಯಿಸಬಹುದು. ಕೆಲವೊಮ್ಮೆ ಆಸ್ತಿಯ ಪಾಲುದಾರಿಕೆ ಸಂಬಂಧಿಸಿದಂತೆಯೂ ಒಬ್ಬರು ಇನ್ನೊಬ್ಬರಿಗೆ ಆಸ್ತಿಯ ಹಕ್ಕನ್ನು ಬಿಟ್ಟುಕೊಡಬಹುದು. ಇದರಲ್ಲಿ ಹಣಕಾಸಿನ ವ್ಯವಹಾರದ ಪ್ರಸ್ತಾವ ಇರುವುದಿಲ್ಲ. ‘ಆದರೆ ಈ ಮಾರ್ಗವನ್ನೇ ದುರ್ಬಳಕೆ ಮಾಡಿಕೊಂಡು ಕೊಡು–ಕೊಳ್ಳುವ ಹಣಕಾಸಿನ ವ್ಯವಹಾರವನ್ನೇ ಉಲ್ಲೇಖಿಸದೇ ವಂಚಿಸಲಾಗುತ್ತದೆ’ ಎಂದು ಹೇಳುತ್ತಾರೆ ನಿವೃತ್ತ ಅಧಿಕಾರಿಯೊಬ್ಬರು.