ಮೈಸೂರು: ‘ಮುಡಾದಲ್ಲಿ ನಿವೇಶನ ಹಂಚಿಕೆ ಮಾಡುವ ಮಂಜೂರಾತಿ ಪತ್ರದ ಸೆಕ್ಯುರಿಟಿ ಬಾಂಡ್ ಪ್ರತಿಗಳನ್ನು ಗೊತ್ತು ಗುರಿ ಇಲ್ಲದೇ ಕಂಡ ಕಂಡವರಿಗೆ ನೀಡಿರುವ ಅಧಿಕಾರಿ ಅಥವಾ ನೌಕರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದು ಅಧ್ಯಕ್ಷ ಕೆ.ಮರೀಗೌಡ ತಿಳಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಬುಧವಾರ ಪ್ರಕಟವಾಗಿದ್ದ ‘3,500 ನಿವೇಶನಗಳ ಲೆಕ್ಕವೇ ಇಲ್ಲ’ ವರದಿಗೆ ಸ್ಪಂದಿಸಿದ್ದಾರೆ.

‘ಪ್ರಾಧಿಕಾರದಿಂದ ನಿವೇಶನಗಳ ಹಂಚಿಕೆ ವಿಷಯದಲ್ಲಿ ಕೇಳಿಬಂದಿರುವ ಆರೋಪಗಳ ಕುರಿತು ವಿಚಾರಣೆ ನಡೆಸಿ ವರದಿ ನೀಡಲು ಸರ್ಕಾರವು ನಿವೃತ್ತ ನ್ಯಾಯಾಧೀಶ ಪಿ.ಎನ್, ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗವನ್ನು ರಚಿಸಿದೆ. ಈ ಹಿಂದೆ ಮಂಜೂರಾತಿ ಪತ್ರದ ಸೆಕ್ಯುರಿಟಿ ಬಾಂಡ್ ಪಡೆದುಕೊಳ್ಳಲಾಗಿರುವ ಸಂಪೂರ್ಣ ಮಾಹಿತಿಯನ್ನು ಪ್ರಾಧಿಕಾರದಿಂದ ಆಯೋಗಕ್ಕೆ ಸಲ್ಲಿಸಲಾಗುವುದು. ಬಳಿಕ ಆಯೋಗವು ನೀಡುವ ವರದಿಯ ಅನುಸಾರ ಸರ್ಕಾರದ ನಿರ್ದೇಶನದಂತೆ ತಪ್ಪಿತಸ್ಥ ಅಧಿಕಾರಿಗಳು, ನೌಕರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.