ಹುಣಸೂರು: ತಾಲ್ಲೂಕಿನಾದ್ಯಂತ ಹಿಂಗಾರು ಮಳೆ ವಾಡಿಕೆಗಿಂತಲೂ ಹೆಚ್ಚಾಗಿ ಸುರಿದಿದ್ದರಿಂದ ರಾಗಿ ಬೇಸಾಯಕ್ಕೆ ಹಿನ್ನಡೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ‘ರಾಗಿ ಕಣಜ’ ಎಂದು ಹೆಸರಾಗಿರುವ ಹುಣಸೂರು ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಇಳುವರಿ ಕುಂಠಿತವಾಗುವ ಸಾಧ್ಯತೆ ಹೆಚ್ಚಾಗಿದೆ.

‘ಪ್ರಸಕ್ತ ಸಾಲಿನಲ್ಲಿ ಅಕ್ಟೋಬರ್ 20ವರಗೆ 78.89 ಸೆಂ.ಮೀ ಮಳೆಯಾಗಿದ್ದು, ವಾಡಿಕೆ ಮಳೆ 69.7 ಸೆಂ.ಮಿ ಬೀಳಬೇಕಿತ್ತು. 11.42 ಸೆಂ.ಮೀ ಹೆಚ್ಚುವರಿ ಮಳೆಯಾಗಿದೆ. ಈ ಪೈಕಿ ಹನಗೋಡು ಹೋಬಳಿಯಲ್ಲಿ 86.5 ಸೆಂ.ಮೀಗೆ 89.67 ಸೆಂ.ಮೀ ಮಳೆಯಾಗಿ ತಾಲ್ಲೂಕಿನಲ್ಲೇ ಅತಿಹೆಚ್ಚು ಮಳೆ ದಾಖಲಾಗಿದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ಅನಿಲ್ ತಿಳಿಸಿದ್ದಾರೆ.

ಹಿಂಗಾರು ಮಳೆಯ ಪ್ರಮುಖ ಬೆಳೆ ರಾಗಿ, ಮುಸುಕಿನ ಜೋಳ, ಅವರೆಕಾಯಿ, ಹುರುಳಿ, ಹಲಸಂದೆ, ಉದ್ದು, ಹೆಸರುಕಾಳು ಮತ್ತು ನೆಲಕಡಲೆ ಸೇರಿದೆ. 3,405 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ನಾಟಿ ಮುಗಿದಿದ್ದು, ಕೆಲವು ಭಾಗಗಳಲ್ಲಿ ತೆನೆ ಕಚ್ಚುವ ಹಂತದಲ್ಲಿದೆ. ಈ ಹಂತದಲ್ಲಿ ಬೆಳೆಯಲ್ಲಿ ಯಾವುದೇ ಕೃಷಿ ಚಟುವಟಿಕೆ ನಡೆಸಲು ಆಗುತ್ತಿಲ್ಲ.

ಕ್ಷೀಣಿಸಿದ ಬೇಸಾಯ:

ಕೃಷಿ ಇಲಾಖೆ ಅಂದಾಜಿ ನಂತೆ 3,950 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೇಸಾಯ ನಡೆಯಬೇಕಿತ್ತು. 3405 ಹೆಕ್ಟೇರ್ ಪ್ರದೇಶಕ್ಕೆ ಸೀಮಿತವಾಗಿದೆ. ಮುಂಗಾರು ಹಂಗಾಮಿನಲ್ಲಿ 16,925 ಹೆಕ್ಟೇರ್ಗೆ 16,050 ಹೆಕ್ಟೇರ್ ಪ್ರದೇಶದಲ್ಲಿ (ಶೇ 94ರಷ್ಟು ) ರಾಗಿ ಬಿತ್ತನೆ ಕಾರ್ಯ ನಡೆದಿತ್ತು.

‘ದ್ವಿದಳ ಧಾನ್ಯಗಳಲ್ಲಿ ಮುಸುಕಿನ ಜೋಳ 1,355 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುರಿ ಇತ್ತು. ಅಕ್ಟೋಬರ್ 20ಕ್ಕೆ 1,045 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಕ್ತಾಯವಾಗಿದೆ. ತಿಂಗಳ ಅಂತ್ಯಕ್ಕೆ ಗುರಿ ಮುಟ್ಟುವ ಸಾಧ್ಯತೆ ಇದೆ. ಹುರುಳಿ 2500 ಹೆಕ್ಟೇರ್ಗೆ 2,170 ಹೆಕ್ಟೇರ್ನಷ್ಟು ಬಿತ್ತನೆಯಾಗಿದೆ. ಹಲಸಂದೆ 600 ಹೆಕ್ಟೇರ್ಗೆ 530 ಹೆಕ್ಟೇರ್, ಅವರೆಕಾಯಿ 2,700 ಹೆಕ್ಟೇರ್ ಪ್ರದೇಶ ಗುರಿ ಹೊಂದಿದ್ದು, ಈ ಪೈಕಿ 2,035 ಹೆಕ್ಟೇರ್ ನಲ್ಲಿ ಬಿತ್ತನೆ ಮುಗಿದಿದೆ. ಈ ಬೆಳೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಅನಿಲ್.

‘ನಿರೀಕ್ಷಿಸಿದಷ್ಟು ಇಳುವರಿ ಅಸಾಧ್ಯ’

ತಂಬಾಕು ನಂತರ ರಾಗಿ ಮತ್ತು ಅವರೆಕಾಯಿ ಬೆಳೆಯುತ್ತೇವೆ, ಈ ಸಾಲಿನಲ್ಲಿ ಹಿಂಗಾರು ಮಳೆ ಅತಿಯಾಗಿ ಭೂಮಿಯಲ್ಲಿ ಶೀತ ಹೆಚ್ಚಾಗಿದ್ದು, ಸಕಾಲಕ್ಕೆ ಯೂರಿಯಾ ನೀಡಲು ಸಾಧ್ಯವಾಗದೆ ಬೆಳವಣಿಗೆ ಕುಂಠಿತವಾಗಿ ಇಳುವರಿ ನಿರೀಕ್ಷಿಸಿದಷ್ಟು ಸಿಗುವುದಿಲ್ಲ’ ಎನ್ನುತ್ತಾರೆ ಪ್ರಗತಿಪರ ಕೃಷಿಕ ಮಹೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.