ತಿ.ನರಸೀಪುರ: ಪಟ್ಟಣದ ಇಂದಿರಾ ಕಾಲೋನಿಯಲ್ಲಿ ಗಾಂಜಾ ಸಂಗ್ರಹ ಮಾಡಿದ್ದ ತಾಯಿ ಮತ್ತು ಮಗನನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ವಸುಂಧರ ಹಾಗೂ ಅವರ ಪುತ್ರ ಪ್ರಶಾಂತ್ ಬಂಧಿತರು. ಮನೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಗಾಂಜಾ ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ.

ಪೊಲೀಸರ ದಾಳಿ ವೇಳೆ ಒಣಗಿದ ಬೀಜ, ಕಾಂಡ ಹಾಗೂ ಸೊಪ್ಪು ಒಳಗೊಂಡ 195 ಗ್ರಾಂ ಗಾಂಜಾ, ₹6480 ನಗದು ಹಾಗೂ ಮೂರು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ತಹಶೀಲ್ದಾರ್ ಟಿ. ಜಿ. ಸುರೇಶ್ ಆಚಾರ್, ರಾಜಸ್ವ ನಿರೀಕ್ಷಕ ಮಹೇಂದ್ರ ಹಾಗೂ ದ್ವಿತೀಯ ದರ್ಜೆ ಸಹಾಯಕ ನಿತಿನ್, ಠಾಣೆಯ ನಿರೀಕ್ಷಕ ಧನಂಜಯ, ಪಿಎಸ್ಐ ಜಗದೀಶ್ ದೂಳ್ ಶೆಟ್ಟಿ, ಸಿಬ್ಬಂದಿ ಅಬ್ದುಲ್ ಲತೀಫ್, ಭಾಸ್ಕರ್, ಪ್ರಭಾಕರ್, ಶಿವಸ್ವಾಮಿ, ಮಹಿಳಾ ಪೇದೆ ಕವಿತಾ ಹಾಗೂ ಚಾಲಕ ಮಹದೇವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.