ರಾಯಚೂರು: ಸರ್ಕಾರದ ವಿವಿಧ ಸೌಕರ್ಯ ಪಡೆಯಲು ಫಲಾನುಭವಿಗಳಿಗೆ ಅವರ ಕುಟುಂಬಕ್ಕೆ ಜನನ, ಮರಣ ಪ್ರಮಾಣಪತ್ರ ಮುಖ್ಯವಾಗಿದೆ. ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಇಲಾಖೆಯ ನೋಂದಣಾಧಿಕಾರಿಗಳು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ಸಹಾಯಕ ಆಯುಕ್ತ ಸಂತೋಷ ಕುಮಾರ ಸಲಹೆ ನೀಡಿದರು.

ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಮತ್ತು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಜನನ ಮತ್ತು ಮರಣ ನೋಂದಣಿ ನಿಯಮಗಳು ಹಾಗೂ ಇ–ಜನ್ಮ ತಂತ್ರಾಂಶದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ಜ್ಞಾನವಿಲ್ಲದ ಕಾರಣ ಜನರಿಗೆ ಸೌಲಭ್ಯ ವಂಚಿತರಾಗುವಂತಾಗಿದೆ. ಅಧಿನಿಯಮ 1969ರ ಪ್ರಕಾರ ಕಡ್ಡಾಯವಾಗಿ ಎಲ್ಲಾ ಜನನ, ಮರಣ ನೋಂದಣಿ ಮಾಡಬೇಕು. ವಿಶೇಷವಾಗಿ ಮರಣ ನೋಂದಣೆಯಲ್ಲಿ 1ರಿಂದ 21ನೇ ದಿನದವರೆಗೆ ನೋಂದಣೆ ಮಾಡಿಸಬೇಕು. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಎಲ್ಲಾ ನೋಂದಣೆದಾರರು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ ಮಾತನಾಡಿ, ಜನನ ಪ್ರಮಾಣ ಪತ್ರಗಳು ಇಂದಿನ ದಿನಗಳಲ್ಲಿ ಮುಖ್ಯವಾದ ದಾಖಲೆಗಳಾಗಿವೆ. ಸರ್ಕಾರದ ಕಚೇರಿಗಳಲ್ಲಿ ಜನರ, ಮರಣದ ಕುರಿತ ಸಮಗ್ರ ದಾಖಲೆ ದೊರೆಯದ ಕಾರಣ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ಶಾಲೆಗಳಲ್ಲಿ ಮಕ್ಕಳಿಗೆ ದಾಖಲೆಯಿಂದ ಹಿಡಿದು ಮರಣದ ವರೆಗೆ ಪ್ರಮಾಣ ಪತ್ರ ಅವಶ್ಯವಾಗಿದೆ.

ಒಂದು ವರ್ಷ ಮೇಲ್ಪಟ್ಟಾದರೆ ನ್ಯಾಯಾಲಯದ ಮೂಲಕ ಸಾಕ್ಷಿ, ದಾಖಲೆ ಕಲೆ ಹಾಕಿ ಮಾಡಬೇಕಾಗುತ್ತದೆ. ಇದರಿಂದ ಕೆಲಸದ ಭಾರ ಹೆಚ್ಚಾಗುತ್ತದೆ. ಜನನ, ಮರಣ ಪ್ರಮಾಣ ಪತ್ರಕ್ಕಾಗಿ ಈ ಜನ್ಮ ಎಂಬ ಆ್ಯಪ್ ಅನುಷ್ಠಾನಗೊಳಿಸಿ ಆನ್ ಲೈನ್ ಮೂಲಕ ಪ್ರಮಾಣ ಪತ್ರ ನೋಂದಣೆ ಮಾಡಿಸಲಾಗುತ್ತಿದ್ದು ತ್ವರಿತಗತಿಯಲ್ಲಿ ನೋಂಣಿ ಕಾರ್ಯಗಳಾಗುತ್ತಿವೆ ಎಂದರು.

ತಹಶೀಲ್ದಾರ್ ಡಾ. ಹಂಪಣ್ಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.