ಲಿಂಗಸುಗೂರು (ರಾಯಚೂರು ಜಿಲ್ಲೆ): ತಾಲ್ಲೂಕಿನ ಕುಪ್ಪಿಗುಡ್ಡ ಗ್ರಾಮಸ್ಥರು ವಂತಿಗೆ ಸಂಗ್ರಹಿಸಿ ಖರೀದಿಸಿದ ನಿವೇಶನವನ್ನು ಸರ್ಕಾರಿ ಪ್ರಾಥಮಿಕ ಶಾಲೆಗೆ ದೇಣಿಗೆ ನೀಡಿದ್ದಾರೆ.

ರಾಯಚೂರು ಜಿಲ್ಲಾ ಕೇಂದ್ರ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿರುವ ಪುಟ್ಟ ಗ್ರಾಮ ಕುಪ್ಪಿಗುಡ್ಡದಲ್ಲಿ ಪ್ರಾಥಮಿಕ ಶಾಲೆ ಇದೆ. 1ರಿಂದ 7ನೇ ತರಗತಿಯಲ್ಲಿ 87 ಮಕ್ಕಳು ಓದುತ್ತಿದ್ದಾರೆ. ಇರುವ ಏಳು ಕೊಠಡಿಗಳ ಪೈಕಿ ಮೂರು ಕೊಠಡಿಗಳು ಶಿಥಿಲಗೊಂಡಿದ್ದು, ಕ್ರೀಡಾ ಚಟುವಟಿಕೆಗೆ ಮೈದಾನವೇ ಇಲ್ಲವಾಗಿತ್ತು.

ವೀರೇಶ ಮುದ್ನೂರು, ದೇವಣ್ಣ ನೆಲೋಗಿ, ಹನುಮಂತರಾಯ ನೆಲೋಗಿ, ಸಾಬಣ್ಣ ನೆಲೋಗಿ, ಮಾಧವ ನೆಲೋಗಿ, ಬಾಲಪ್ಪ ಮಾನಮಟ್ಟಿ, ಅಯ್ಯನಗೌಡ ಪಾಟೀಲ ಸೇರಿದಂತೆ ಶಾಲಾ ಸುಧಾರಣಾ ಸಮಿತಿ ಸದಸ್ಯರು ₹5 ಲಕ್ಷ ವಂತಿಗೆ ಸಂಗ್ರಹಿಸಿದ್ದಾರೆ. ಈ ಮೊತ್ತದಲ್ಲಿ 45X36 (1,620 ಚದರ ಅಡಿ) ವಿಸ್ತೀರ್ಣದ ನಿವೇಶನ ಖರೀದಿಸಿ ಶಾಲೆಗೆ ದೇಣಿಗೆ ನೀಡಿದ್ದಾರೆ.

ಅಕ್ಟೋಬರ್ 15ರಂದು ಲಿಂಗಸುಗೂರು ಉಪ ನೋಂದಣಾಧಿಕಾರಿ ಕಚೇರಿಗೆ ಬಂದ ಗ್ರಾಮಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿ ಹೊಂಬಣ್ಣ ರಾಠೋಡ ಸಮಕ್ಷಮ ರಾಜ್ಯಪಾಲರ ಹೆಸರಿನಲ್ಲಿ ನಿವೇಶನ ನೋಂದಣಿ ಮಾಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೊಂಬಣ್ಣ ರಾಠೋಡ ಮಾತನಾಡಿ, ‘ತಾಲ್ಲೂಕಿನಲ್ಲಿ ಈ ಹಿಂದೆ ದಾನವಾಗಿ ನೀಡಿದ ಎಷ್ಟೋ ಶಾಲಾ ನಿವೇಶನಗಳು ಸಮಸ್ಯೆಯಲ್ಲಿವೆ. ಇಂತಹ ಸಂದರ್ಭದಲ್ಲಿ ಕುಪ್ಪಿಗುಡ್ಡ ಗ್ರಾಮಸ್ಥರು ವಂತಿಗೆ ಸಂಗ್ರಹಿಸಿ ಖರೀದಿಸಿದ ನಿವೇಶನವನ್ನು ಸರ್ಕಾರದ ಹೆಸರಲ್ಲಿ ನೋಂದಾಯಿಸಿದ್ದು ಖುಷಿ ತಂದಿದೆ’ ಎಂದರು.

‘ಶಾಲಾ ಸುಧಾರಣಾ ಸಮಿತಿ ಸಭೆಯಲ್ಲಿ ಕೊಠಡಿಗಳ ಸ್ಥಿತಿಗತಿ, ನಿವೇಶನ ಕೊರತೆ ಬಗ್ಗೆ ಗಮನಕ್ಕೆ ತಂದಿದ್ದೆವು. ಶಿಕ್ಷಕರ ಸಹಕಾರದಿಂದ ಗ್ರಾಮಸ್ಥರು ವಂತಿಗೆ ಸಂಗ್ರಹಿಸಿ ನಿವೇಶನ ನೋಂದಣಿ ಮಾಡಿಸಿದ್ದು ಖುಷಿ ತಂದಿದೆ. ಶಿಕ್ಷಣ ಪ್ರೇಮಿಗಳ ಸಹಕಾರಕ್ಕೆ ಋಣಿಯಾಗಿರುವೆ’ ಎಂದು ಮುಖ್ಯಶಿಕ್ಷಕಿ ಕಾಶಿಬಾಯಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.