ರಾಯಚೂರು: ಜಿಲ್ಲೆಯಲ್ಲಿ ಪ್ರಸ್ತಕ್ತ ವರ್ಷ ಸಮೃದ್ಧವಾಗಿ ಮಳೆಯಾಗಿದೆ. ಕೃಷ್ಣಾ, ತುಂಗಭದ್ರಾ ನದಿಗಳು ತುಂಬಿ ಹರಿಯುತ್ತಿವೆ. ಬಹುತೇಕ ಬೆಳೆಗಳೂ ಚೆನ್ನಾಗಿ ಬಂದಿವೆ. ಬಿಸಿಲೂರಲ್ಲಿ ಸ್ವಲ್ಪಮಟ್ಟದಲ್ಲಿ ತಂಪು ಆವರಿಸಿದ್ದು, ವಿಘ್ನವಿನಾಶಕನಿಗೆ ಭಗ್ಯ ಸ್ವಾಗತ ನೀಡಲು ಭಕ್ತರು ಸಜ್ಜಾಗಿದ್ದಾರೆ.

ಒಂದು ತಿಂಗಳು ಮೊದಲೇ ಹೈದರಾಬಾದ್, ಸೋಲಾಪುರ ಹಾಗೂ ಪಶ್ಚಿಮಬಂಗಾಳದಿಂದ ಗಣಪತಿ ಮೂರ್ತಿಗಳು ಜಿಲ್ಲೆಗೆ ಬಂದಿವೆ. ನಗರದ ಪ್ರಮುಖ ಸ್ಥಳಗಳಲ್ಲಿ ಬೃಹತ್ ಮೂರ್ತಿಗಳು ನಿರ್ಮಾಣಗೊಂಡಿವೆ. ಇದರ ಜತೆ ಜತೆಯಾಗಿಯೇ ಸಾರ್ವಜನಿಕ ಗಣೇಶೋತ್ಸವ ಮಂಡಳಗಳು ಭಕ್ತರಿಂದ ದೇಣಿಗೆ ಸಂಗ್ರಹಿಸಿ ಹಬ್ಬದ ಸಂಭ್ರಮಕ್ಕೆ ತಯಾರಿ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಈ ವರ್ಷ 1954 ಸಾರ್ವಜನಿಕ ಗಣೇಶೋತ್ಸವ ಮಂಪಟಗಳಲ್ಲಿ ಗಣನಾಯಕನ ಪ್ರತಿಷ್ಠಾಪನೆಯಾಗಲಿವೆ. ಈ ಪೈಕಿ ರಾಯಚೂರು ಉಪ ವಿಭಾಗದಲ್ಲಿ 595, ಲಿಂಗಸುಗೂರು ಉಪ ವಿಭಾಗದಲ್ಲಿ 557 ಹಾಗೂ ಸಿಂಧನೂರು ಪೊಲೀಸ್ ಉಪ ವಿಭಾಗದಲ್ಲಿ 505 ಸಾರ್ವಜನಿಕ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಅನುಮತಿ ಪಡೆದುಕೊಂಡಿವೆ.

ಪೊಲೀಸ್ ಇಲಾಖೆಯ ಅಧಿಕಾರಿಗಳು ಈಗಾಗಲೇ ವಿಭಾಗ, ನಗರ, ಪಟ್ಟಣ ಹಾಗೂ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೂ ಶಾಂತಿಪಾಲನಾ ಸಭೆಗಳನ್ನು ನಡೆಸಿ ಹಬ್ಬವನ್ನು ಶಾಂತಿಯುತ ಹಾಗೂ ಸೌಹಾರ್ದತೆಯಿಂದ ಆಚರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇದೇ ಅವಧಿಯಲ್ಲಿ ಸಾರ್ವಜನಿಕ ಸುರಕ್ಷತೆ, ಕಾನೂನು ಸುವ್ಯವಸ್ಥೆಗೆ ಅನುಸರಿಸಬೇಕಾದ ನಿಯಮಗಳ ಕುರಿತು ಮನವರಿಕೆ ಮಾಡಿದ ನಂತರವೇ ಗಣೇಶೋತ್ಸವ ಮಂಡಳಗಳಿಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕೊಟ್ಟಿದೆ.

ಪ್ರಾಥಮಿಕ ಹಂತದಲ್ಲಿ ಆಯಾ ಪೊಲೀಸ್ ಠಾಣೆಗಳಿಂದ ವರದಿ ತರಿಸಿಕೊಂಡು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೂರು ಗುಂಪುಗಳಲ್ಲಿ ವಿಭಜಿಸಿದೆ. 51 ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಗಣಪತಿಗಳನ್ನು ಅತಿಸೂಕ್ಷ್ಮ, 216 ಗಣಪತಿಗಳನ್ನು ಸೂಕ್ಷ್ಮ ಹಾಗೂ ಹಾಗೂ 1390 ಗಣಪತಿಗಳನ್ನು ಸಾಮಾನ್ಯ ಎಂದು ಗುರುತಿಸಿದೆ. ಇವುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಅರ್ಧ ದಿನ ಹಾಗೂ ಒಂದರಿಂದ 13ನೇ ದಿನದ ವರೆಗೂ ಗಣಪತಿಗಳನ್ನು ಪ್ರತಿಷ್ಠಾಪಿಸುವ ಪದ್ಧತಿ ಜಿಲ್ಲೆಯಲ್ಲಿ ಇದೆ. ಅರ್ಧದಿನದ 83 ಗಣಪತಿಗಳು ಹಬ್ಬದ ಮೊದಲ ದಿನವೇ ವಿಸರ್ಜನೆಯಾಗಲಿವೆ. ಐದು ಹಾಗೂ 7 ದಿನದ ಗಣಪತಿಗಳು ಮೆರವಣಿಗೆಯಲ್ಲಿ ಸಾಗಿ ಬಂದು ಮಾವಿನಕೆರೆ ಸಮೀಪದ ಹೊಂಡದಲ್ಲಿ ವಿಸರ್ಜನೆಯಾಗಲಿವೆ. ಐದನೇ ದಿನ 700, ಏಳನೇ ದಿನ 125 ಹಾಗೂ ಒಂಬತ್ತನೆಯ ದಿನ 215 ಸಾರ್ವಜನಿಕ ಗಣಪತಿಗಳು ವಿಸರ್ಜನೆಯಾಗುವ ನಿರೀಕ್ಷೆ ಇದೆ.

‘ಗಣೇಶ ಹಬ್ಬದ ಸಂದರ್ಭದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುವಂತೆ ಈಗಾಗಲೇ ಕೆಎಸ್ಆರ್ಪಿ ನಾಲ್ಕು ತಂಡಗಳನ್ನು ತರಿಸಿಕೊಳ್ಳಲಾಗಿದೆ. 500 ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ತಿಳಿಸಿದ್ದಾರೆ.

‘ಸೂಕ್ಷ್ಮ ಪ್ರದೇಶದಲ್ಲಿರುವ ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಆಯಕಟ್ಟಿನ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗಿದೆ. ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಶಾಂತಿಯುತವಾಗಿ ಹಬ್ಬ ಆದರಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಹೂವು, ಹಣ್ಣುಗಳ ಬೆಲೆ ಏರಿಕೆ

ನಗರದ ಮಾರುಕಟ್ಟೆಯಲ್ಲಿ ಶುಕ್ರವಾರ ಹಬ್ಬದ ಖರೀದಿ ಜೋರಾಗಿಯೇ ನಡೆಯಿತು. ಗೌರಿ ಹಾಗೂ ಗಣೇಶನ ಹಬ್ಬದ ಒಂದು ವಾರ ಮುಂಚೆಯೇ ಬಾಳೆ ಹಣ್ಣಿನ ದರ ಏರಿಕೆ ಕಂಡಿದೆ.

ಬಾಳೆಹಣ್ಣು, ಸೇಬು, ಚಿಕ್ಕು, ಮೂಸಂಬಿ, ಸೀತಾಫಲದ ಬೆಲೆ ದಿಢೀರ್ ಹೆಚ್ಚಾಗಿದೆ. ಸಾಮಾನ್ಯ ದರಕ್ಕಿಂತ ₹50ರಿಂದ ₹100 ಏರಿಕೆಯಾಗಿದೆ. ಹಬ್ಬದ ಖರೀದಿಗೆ ಬಂದವರು ಚೌಕಾಶಿ ಮಾಡಿ ಹಣ್ಣು ಖರೀದಿಸಿದರು. ಬಾಳೆಗಿಡ ಹಾಗೂ ಚೆಂಡುಹೂವಿನ ಗಿಡಗಳನ್ನು ಮನೆಗಳಿಗೆ ಕೊಂಡೊಯ್ದರು.

‘ಭಕ್ತರ ಅನುಕೂಲಕ್ಕಾಗಿ ಪಂಚಫಲ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದೇವೆ. ಇದಕ್ಕೆ ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಳೆ ಬೆಳೆ ಚೆನ್ನಾಗಿ ಬಂದಿರುವ ಕಾರಣ ವ್ಯಾಪಾರವೂ ಚೆನ್ನಾಗಿ ಆಗಿದೆ’ ಎಂದು ಹಣ್ಣಿನ ವ್ಯಾಪಾರಿ ಮಂಚಾಲಮ್ಮ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.