ರಾಯಚೂರು: ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸದಸ್ಯರೂ ಆಗಿರುವ ಶಾಸಕ ಗೂಳಿಹಟ್ಟಿ ಶೇಖರ್ ಅವರು, 'ರಾಯಚೂರು ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಚರ್ಚ್ ಗಳಿವೆ. ಅದರಲ್ಲಿ ಎಷ್ಟು ನೈಜವಾಗಿವೆ ಎಂಬುದನ್ನು ಪರಿಶೀಲಿಸಬೇಕು. ಮೂಲ ಕ್ತೈಸ್ತರು ಎಷ್ಟಿದ್ದಾರೆ ಹಾಗೂ ಮತಾಂತರಗೊಂಡವರು ಎಷ್ಟಿದ್ದಾರೆ ಎಂಬುದನ್ನು ಪಟ್ಟಿ ಮಾಡಿ ಕಳುಹಿಸಿ' ಎಂದು ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

ಕಲ್ಯಾಣ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

'ಜಿಲ್ಲೆಯ ವಿವಿಧೆಡೆ 145 ಚರ್ಚ್ ಗಳ ದುರಸ್ತಿಗೆ ಅನುದಾನ ಮಂಜೂರಿ ಮಾಡಿರುವ ಪಟ್ಟಿ ಇಲ್ಲಿದೆ. ಯಾವ ಅರ್ಹತೆಗಳನ್ನು ಆಧರಿಸಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಮತಾಂತರ ಮಾಡುವುದಕ್ಕೆ ಅವಕಾಶವಿಲ್ಲ' ಎಂದು ತಿಳಿಸಿದರು.

ಕಲ್ಯಾಣ ಸಮಿತಿ ಅಧ್ಯಕ್ಷ ಕುಮಾರ ಬಂಗಾರಪ್ಪ ಈ ಕುರಿತು ಮಾತನಾಡಿ, 'ಪ್ರಾರ್ಥನೆ ಮಾಡುವ ಉದ್ದೇಶಕ್ಕಾಗಿ ಚರ್ಚ್ ಗಳನ್ನು ದುರಸ್ತಿ ಮಾಡಿಕೊಳ್ಳುತ್ತಿದ್ದರೆ ಸಮಸ್ಯೆಯಿಲ್ಲ. ಅಲ್ಲಿ ಮತಾಂತರದ ಕೆಲಸಗಳು ನಡೆಯುವುದಕ್ಕೆ ಅವಕಾಶವಾಗಬಾರದು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.