ಕವಿತಾಳ: ಪಟ್ಟಣದಿಂದ ಲಿಂಗಸುಗೂರಿಗೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಬಸ್ನಲ್ಲಿ ಸ್ಥಳಾವಕಾಶ ಸಿಗದೇ ನಿತ್ಯ ಬಾಗಿಲಲ್ಲಿ ಜೋತು ಬಿದ್ದು ಪ್ರಯಾಣಿಸುವ ಸ್ಥಿತಿ ನಿರ್ಮಾಣವಾಗಿದೆ.

ಸಿರವಾರ ತಾಲ್ಲೂಕಿನ ಕಲಂಗೇರಿ, ಪಾತಾಪುರ, ಹಿರೇಹಣಿಗಿ, ಗೊಲ್ದಿನ್ನಿ, ಹುಸೇನಪುರ, ಸೈದಾಪುರ, ಕಡ್ಡೋಣಿ ತಿಮ್ಮಾಪುರ, ಕವಿತಾಳ ಸೇರಿದಂತೆ ಮಸ್ಕಿ ತಾಲ್ಲೂಕಿನ ಯಕ್ಲಾಸ್ಪುರ, ವಟಗಲ್, ಅಮೀನಗಡ, ಯತಗಲ್, ಕಾಚಾಪುರ, ನೆಲಕೊಳ, ಆನಂದಗಲ್ ಮತ್ತು ಪಾಮನಕಲ್ಲೂರು ಮತ್ತಿತರ ಹಳ್ಳಿಗಳಿಂದ ಲಿಂಗಸುಗೂರಿನ ಶಾಲಾ ಕಾಲೇಜಿಗೆ ಹೋಗುವ ನೂರಾರು ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಪಿಯುಸಿ, ಪದವಿ, ಐಟಿಐ, ನರ್ಸಿಂಗ್ ಸೇರಿದಂತೆ ವಿವಿಧ ತಾಂತ್ರಿಕ ಕೋರ್ಸ್ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ಬೆಳಿಗ್ಗೆ 7 ಗಂಟೆಯಿಂದಲೇ ಬಸ್ಗಾಗಿ ನಿಲ್ಲುತ್ತಾರೆ. ಅಂತರ್ ರಾಜ್ಯ ಬಸ್ಗಳಲ್ಲಿ ವಿದ್ಯಾರ್ಥಿ ಪಾಸ್ಗೆ ಅನುಮತಿ ಇಲ್ಲದಿರುವುದು ಹಾಗೂ ಬೇರೆ ಬಸ್ಗಳು ತುಂಬಿರುವ ಕಾರಣಕ್ಕೆ ಜಾಗ ಸಿಗದೇ, ಬಾಗಿಲಲ್ಲೇ ಜೋತು ಬಿದ್ದು ಪ್ರಯಾಣಿಸುತ್ತಿದ್ದಾರೆ.

ಲಿಂಗಸುಗೂರಿನಿಂದ ಕವಿತಾಳದವರೆಗೆ ವಿದ್ಯಾರ್ಥಿಗಳಿಗಾಗಿ ಈಚೆಗೆ ಸಂಚಾರ ಮಾಡುತ್ತಿದ್ದ ಬಸ್ ಸಂಚಾರವನ್ನು ರದ್ದುಗೊಳಿಸಿರುವುದು ಮತ್ತು ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣ ಸೇರಿದಂತೆ ವಿವಿಧ ಕಾರಣಗಳಿಂದ ವಿದ್ಯಾರ್ಥಿಗಳು ನಿತ್ಯ ಕಾಲೇಜಿಗೆ ತಡವಾಗಿ ಹೋಗುವಂತಾಗಿದೆ ಎಂದು ಪೋಷಕರು ದೂರಿದ್ದಾರೆ. ಬಸ್ಗಳ ಕೊರತೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಯ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮಕೈಗೊಳ್ಳಬೇಕು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.