ಸಿಂಧನೂರು: ನಗರದ ವಾರ್ಡ್ ನಂ.6 ಕಾಟಿಬೇಸ್ ನಗರಸಭೆ ಸದಸ್ಯೆ ಹುಸೇನಬಿ ಖಾನ್ ನಿಧನರಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇರಾ ತಬಸ್ಸುಮ್ ಅಮ್ಜದ್ಖಾನ್ ಸ್ಪರ್ಧಿಸಿದ್ದು, ಗುರುವಾರ ವಾರ್ಡ್ನಲ್ಲಿ ಮತಯಾಚನೆ ಮಾಡಿದರು.

ವಾರ್ಡ್ ನಂ.6ರ ವ್ಯಾಪ್ತಿಯಲ್ಲಿ ಬರುವ ಕಾಟಿಬೇಸ್, ದೋಬಿಗಲ್ಲಿ, ಹಳೆಬಜಾರ್ ರಸ್ತೆಗಳಲ್ಲಿ ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ ಮನೆ-ಮನೆಗೆ ತೆರಳಿ ಕರಪತ್ರ ನೀಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಖಾಜಿಮಲಿಕ್ ವಕೀಲ, ನಗರಸಭೆ ಮಾಜಿ ಅಧ್ಯಕ್ಷ ಜಾಫರ್ ಜಾಗೀರದಾರ್, ಅಮ್ಜದ್ಖಾನ್, ಬಷೀರ್ ಎತ್ಮಾರಿ, ರಶೀದ್ ಎತ್ಮಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.