ಶಕ್ತಿನಗರ: ಆರ್ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳ ಕೇಂದ್ರಗಳಿಂದ ಆಗುತ್ತಿರುವ ಪರಿಸರ ಹಾನಿಯಿಂದಾಗಿ ಸಾರ್ವಜನಿಕರಿಗೆ ಅನಾರೋಗ್ಯ ಸಮಸ್ಯೆಗಳ ಮೇಲೆ ಪರಿಣಾಮ ಬೀರಿದ್ದು ಕೂಡಲೆ ಸಮಸ್ಯೆಗಳನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಸೋಮವಾರ ಶಕ್ತಿನಗರಕ್ಕೆ ಭೇಟಿ ನೀಡಿದ ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮನವಿ ಸಲ್ಲಿಸಿದರು.

ಆರ್ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳ ಕೇಂದ್ರಗಳಿಂದ ಬರುವ ಹಾರುಬೂದಿಯಿಂದ ನೀರು ಮತ್ತು ಪರಿಸರ ಹಾಳಾಗುತ್ತಿದೆ. ಅಲ್ಲದೆ ಜನರಿಗೆ ಅಸ್ತಮಾ, ಕ್ಯಾನ್ಸರ್, ಸಿಲೋಕೋಸಿಸ್ ಹಾಗೂ ಇನ್ನಿತರ ರೋಗಗಳು ಉಲ್ಬಣಿಸುತ್ತಿವೆ. ಹಾರುಬೂದಿ ಟ್ಯಾಂಕರ್ ಗಳ ಓಡಾಟದಿಂದ ಪುರಾತನ ಕೃಷ್ಣ ಮೇಲ್ ಸೇತುವೆ ರಸ್ತೆ ಸಂಪೂರ್ಣ ಹಾಳಾಗಿದ್ದು ಇತ್ತೀಚೆಗೆ ಖುದ್ದಾಗಿ ಪರಿಶೀಲಿಸಿ ರಾಷ್ಟೀಯ ಹೆದ್ದಾರಿ ಇಂಜಿನಿಯರ್ ಗಳಿಗೆ ಸೂಚನೆ ನೀಡಿ ರಸ್ತೆ ದುರಸ್ತಿ ಮಾಡಿಸಿದರೂ ಪುನಃ ಸೇತುವೆ ರಸ್ತೆ ಹಾಳಾಗಿದೆ. ಆರ್ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳ ಕೇಂದ್ರ ವ್ಯಾಪ್ತಿ ಯ ಸಾರ್ವಜನಿ ಕ ರಿಗೆ ಪ್ರತಿದಿನ ತೊಂದರೆ ಆಗುತ್ತಿರುವ ಮತ್ತು ಅನಾರೋಗ್ಯ ಸಮಸ್ಯೆಗಳ ಬಗ್ಗೆ ಅನೇಕ ದೂರುಗಳು ಬರುತ್ತಿವೆ ಎಂದು ಸಂಸದ ಅಮರೇಶ್ವರ ನಾಯಕ ಅವರು ದೂರಿದರು.

ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದಿಂದ ವಿಧಿಸಲಾದ ಷರತ್ತುಗಳನ್ನು ಪಾಲಿಸಲು ಹಾರುಬೂದಿ ಟ್ಯಾಂಕರ್ಗಳಿಂದ ನಿರ್ದಿಷ್ಟ್ ಸೆಸ್ ಸಂಗ್ರಹಿಸಿ ಮತ್ತು ಸಿ.ಎಸ್.ಆರ್. ನಿಧಿಯಿಂದ ಸದರಿ ಕೇಂದ್ರಗಳ ಒಳಗೆ ಹಾಗೂ ಸುತ್ತಮುತ್ತ ಅರಣ್ಯೀಕರಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಂಸದ ಅಮರೇಶ್ವರ ನಾಯಕ ಅವರು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.