ದೇವೇಗೌಡರ ಕುಟುಂಬದ ಮೂರನೇ ತಲೆಮಾರಿನ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಬದಲಾದ ರಾಜಕೀಯ ಸ್ಥಿತಿಯಲ್ಲಿ ಚನ್ನಪಟ್ಟಣ ಉಪ ಚುನಾವಣೆಯ ಅಭ್ಯರ್ಥಿಯಾಗಿದ್ದಾರೆ. ಸತತ ಎರಡು ಚುನಾವಣೆಗಳಲ್ಲಿ ಸೋತಿರುವ ಅವರೀಗ, ತಂದೆಯಿಂದ ತೆರವಾಗಿರುವ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬಿಡುವಿಲ್ಲದ ಪ್ರಚಾರ ಕಾರ್ಯಕ್ರಮಗಳ ಮಧ್ಯೆ ಅವರು ‘ಪ್ರಜಾವಾಣಿ’ಗೆ ಸಂದರ್ಶನ ನೀಡಿದ್ದಾರೆ.

*ಉಪ ಚುನಾವಣೆ ಸ್ಪರ್ಧೆ ನಿಮಗೆ ಅನಿವಾರ್ಯವಾಗಿತ್ತೇ?

ಆರಂಭದಿಂದಲೂ ನಾನು ಸ್ಪರ್ಧೆಯಿಂದ ದೂರವಿದ್ದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮೈತ್ರಿ ಪಕ್ಷದ ನಾಯಕರು ಹಾಗೂ ಸ್ಥಳೀಯ ಕಾರ್ಯಕರ್ತರ ಒತ್ತಡದಿಂದಾಗಿ ನಿಲ್ಲಬೇಕಾಯಿತು. ಈ ಚುನಾವಣೆ ನಿಖಿಲ್ ಭವಿಷ್ಯ ನಿರ್ಧರಿಸಲಿದೆ ಎಂಬುದೇ ಬಹುತೇಕರ ಅಭಿಪ್ರಾಯ. ಆದರೆ, ನನ್ನ ಭವಿಷ್ಯಕ್ಕಿಂತ ಕಾರ್ಯಕರ್ತರ ಭಾವನೆಗೆ ಬೆಲೆ ಕೊಡಬೇಕು ಎಂಬುದು ನನ್ನ ನಿಲುವು.

* ಉಪ ಚುನಾವಣೆಯಲ್ಲಿ ಬಿಜೆಪಿ ದೋಸ್ತಿಯು ನಿಮಗೆ ಪ್ಲಸ್ ಆಗಲಿದೆಯೇ?

ಬಿಜೆಪಿ, ಜನತಾದಳ ಸೇರಿದಂತೆ ಹಲವು ಪಕ್ಷಗಳು ಸ್ಥಾಪನೆಯಾಗಿರುವುದೇ ಕಾಂಗ್ರೆಸ್ ವಿರುದ್ಧ. ಅಂದಮೇಲೆ ಕಾಂಗ್ರೆಸ್ ವಿರೋಧಿ ಮತಗಳು ಜೆಡಿಎಸ್–ಬಿಜೆಪಿ ಮೈತ್ರಿಕೂಟದ ಜೊತೆಗಿರಲಿವೆ. ಕ್ಷೇತ್ರವು ಜೆಡಿಎಸ್ನ ಭದ್ರಕೋಟೆಯಾಗಿದೆ. ಬಿಜೆಪಿಯೂ ತನ್ನದೇ ಮತಬ್ಯಾಂಕ್ ಹೊಂದಿದೆ. ಎರಡೂ ಪಕ್ಷಗಳ ನಾಯಕರು ಗೆಲುವಿಗೆ ಪಣ ತೊಟ್ಟು ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಜೊತೆಗಿನ ಮೈತ್ರಿ ನಮ್ಮ ಶಕ್ತಿಯನ್ನು ಹೆಚ್ಚಿಸಿದೆ.

*ಬಿಜೆಪಿ ಸಖ್ಯದ ಕಾರಣಕ್ಕೆ ಮುಸ್ಲಿಂ ಮತಗಳು ದೂರವಾಗುವ ಮಾತುಗಳು ಕೇಳಿ ಬರುತ್ತಿವೆಯಲ್ಲಾ?

ಮುಸ್ಲಿಂ ಸಮುದಾಯಕ್ಕೆ ದೇಶದಲ್ಲಿ ಮೀಸಲಾತಿ ಕೊಡುವ ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದು ಮಾಜಿ ಪ್ರಧಾನಿ ದೇವೇಗೌಡರು. ಜಿಲ್ಲೆಯಲ್ಲಿ ಕೋಮುಸೌಹಾರ್ದ ಕಾಪಾಡುವಲ್ಲಿ ಕುಮಾರಸ್ವಾಮಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಇದೇ ಕಾರಣಕ್ಕೆ ಅಲ್ಪಸಂಖ್ಯಾತರು ನಮ್ಮ ಜೊತೆಗಿದ್ದಾರೆ. ಕ್ಷೇತ್ರದಲ್ಲಿ ತಂದೆ ಸತತವಾಗಿ ಎರಡು ಸಲ ಗೆಲ್ಲುವುದರಲ್ಲಿ ಅವರ ಕಾಣಿಕೆಯೂ ಇದೆ. ಉಪ ಚುನಾವಣೆಯಲ್ಲೂ ಅದು ಮುಂದುವರಿಯಲಿದೆ ಎಂಬ ವಿಶ್ವಾಸವಿದೆ.

*ನೀವು ‘ಹೊರಗಿನವರು’ ಎಂಬುದನ್ನೇ ಎದುರಾಳಿಗಳು ಚುನಾವಣಾ ಅಸ್ತ್ರ ಮಾಡಿಕೊಂಡಿದ್ದಾರಲ್ಲ?

ಈ ಚುನಾವಣೆಯು ‘ಸ್ಥಳೀಯರು’ ಮತ್ತು ‘ಹೊರಗಿನವರು’ ಎಂಬುದರ ಮೇಲೆ ನಡೆಯುತ್ತಿಲ್ಲ. ಹಾಗಿದ್ದರೆ ನಮ್ಮ ತಂದೆಯವರು ಎದುರಾಳಿ ಸಿ.ಪಿ.ಯೋಗೇಶ್ವರ್ ವಿರುದ್ಧ ಸತತ ಎರಡು ಸಲ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಸ್ಥಳೀಯ ಅಸ್ಮಿತೆ ಮೇಲೆ ಜನರನ್ನು ವಿಭಜಿಸಿ ಮತಲಾಭ ಪಡೆಯಲು ಕಾಂಗ್ರೆಸ್ನವರು ಯತ್ನಿಸುತ್ತಿದ್ದಾರೆ.

*ನಿಮ್ಮ ಎದುರಾಳಿ ನೀರಾವರಿ ಕ್ರೆಡಿಟ್ ಮೇಲೆ ಪ್ರಚಾರ ಮಾಡುತ್ತಿದ್ದಾರೆ, ಇದಕ್ಕೇನಂತೀರಿ?

ತಾಲ್ಲೂಕಿನ 17 ಕೆರೆಗಳನ್ನು ನಾನೇ ತುಂಬಿಸಿದೆ ಎನ್ನುವ ಯೋಗೇಶ್ವರ್ ಅವರೇನಾದರೂ ಮುಖ್ಯಮಂತ್ರಿ ಅಥವಾ ನೀರಾವರಿ ಸಚಿವರಾಗಿದ್ದರೇ? ಆದರೂ, ನಾನೇ ಕೆರೆಗಳನ್ನು ತುಂಬಿಸಿದ ಭಗೀರಥ ಎಂದು ಫ್ಲೆಕ್ಸ್ ಹಾಕಿಸಿಕೊಂಡು ಪ್ರಚಾರ ಪಡೆದರು. ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದಗೌಡರು, ಹಣ ಬಿಡುಗಡೆ ಮಾಡಿ ಕೆರೆಗಳನ್ನು ತುಂಬಿಸಿದರು. ನೀರಾವರಿ ದೂರದೃಷ್ಟಿಯೊಂದಿಗೆ ದೇವೇಗೌಡರು ಇಗ್ಗಲೂರು ಬ್ಯಾರೇಜ್ ನಿರ್ಮಿಸಿದ್ದರಿಂದ ಇದು ಸಾಧ್ಯವಾಯಿತು.

*ನಿಮ್ಮ ಅಭಿವೃದ್ಧಿ ಅಜೆಂಡಾ ಏನು?

ಕ್ಷೇತ್ರದ ಮತ್ತಷ್ಟು ಕೆರೆಗಳಿಗೆ ನೀರು ತುಂಬಿಸಿ ರೈತರಿಗೆ ನೀರಾವರಿ ಕಲ್ಪಿಸಲಾಗುವುದು. ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವ ಜತೆಗೆ ಮೂಲಸೌಕರ್ಯಕ್ಕೆ ಒತ್ತು ನೀಡುವೆ. ತಂದೆ ಕೈಗಾರಿಕಾ ಸಚಿವರಾಗಿರುವುದರಿಂದ ಈ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವುದಕ್ಕೆ ಆದ್ಯತೆ ನೀಡುವೆ.

‘ಜೊತೆಯಲ್ಲಿದ್ದೇ ಕಾಂಗ್ರೆಸ್ನವರು ಬೆನ್ನಿಗೆ ಚೂರಿ ಹಾಕಿದರು’

* ಜನ ನಿಮಗೆ ಯಾಕೆ ಮತ ಹಾಕಬೇಕು?

ಈ ಚುನಾವಣೆ ನಾನು ಬಯಸಿದ್ದಲ್ಲ. ಹಿಂದಿನ ಎರಡು ಚುನಾವಣೆಗಳ ಪೈಕಿ ಮಂಡ್ಯದಲ್ಲಿ ಕಾಂಗ್ರೆಸ್ನವರು ಜತೆಯಲ್ಲಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕಿದರು. ರಾಮನಗರದಲ್ಲಿ ಗಿಫ್ಟ್ ಕೂಪನ್ ಹಂಚಿ ಷಡ್ಯಂತ್ರ ಮಾಡಿ ಸೋಲಿಸಿದರು. ಈ ಚುನಾವಣೆ ಹಿಂದಿನಂತಿಲ್ಲ. ಕ್ಷೇತ್ರದ ಜನ ಈಗಾಗಲೇ ಯೋಗೇಶ್ವರ್ ಅವರಿಗೆ ಹಲವು ಅವಕಾಶಗಳನ್ನು ನೀಡಿದ್ದಾರೆ. ಸದ್ಯ ಉಳಿದಿರುವುದು ಮೂರೂವರೆ ವರ್ಷವಷ್ಟೆ. ನನಗೂ ಒಂದು ಅವಕಾಶ ಕೊಟ್ಟು ಕಾರ್ಯವೈಖರಿ ಪರೀಕ್ಷಿಸಲಿ. ಆ ಪರೀಕ್ಷೆಯಲ್ಲಿ ಪಾಸಾದರೆ 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರಿಚ್ಛೆಯಂತೆ ನಡೆಯಲಿ. ಆ ಪರೀಕ್ಷೆಗಾದರೂ ಜನ ನನಗೆ ಮತ ಹಾಕಬೇಕು ಎಂದು ಕೋರುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.