ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪ್ಪ ಸರಿಯಾಗಿ ಕೆಲಸ ಮಾಡಿದ್ದರೆ ನಿಖಿಲ್ ಸೋಲುತ್ತಿದ್ದರಾ: ಡಿಕೆಶಿ ಪ್ರಶ್ನೆ

Published : 9 ನವೆಂಬರ್ 2024, 1:10 IST
Last Updated : 9 ನವೆಂಬರ್ 2024, 1:10 IST
ಫಾಲೋ ಮಾಡಿ
Comments
ಚನ್ನಪಟ್ಟಣ ತಾಲ್ಲೂಕಿನಲ್ಲಿ ಶುಕ್ರವಾರ ಪ್ರಚಾರ ನಡೆಸಿದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ವೃದ್ಧೆಯೊಬ್ಬರ ಪಾದಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು
ಚನ್ನಪಟ್ಟಣ ತಾಲ್ಲೂಕಿನಲ್ಲಿ ಶುಕ್ರವಾರ ಪ್ರಚಾರ ನಡೆಸಿದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ವೃದ್ಧೆಯೊಬ್ಬರ ಪಾದಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು
ಚನ್ನಪಟ್ಟಣ ತಾಲ್ಲೂಕಿನ ಭೂಹಳ್ಳಿಯಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರವಾಗಿ ನಡೆದ ಪ್ರಚಾರಸಭೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಭಾಗವಹಿಸಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶಾಸಕ ಗೋಪಾಲಯ್ಯ ಹಾಗೂ ಇತರರು ಇದ್ದರು
ಚನ್ನಪಟ್ಟಣ ತಾಲ್ಲೂಕಿನ ಭೂಹಳ್ಳಿಯಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರವಾಗಿ ನಡೆದ ಪ್ರಚಾರಸಭೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಭಾಗವಹಿಸಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶಾಸಕ ಗೋಪಾಲಯ್ಯ ಹಾಗೂ ಇತರರು ಇದ್ದರು
ಕಳೆದೆರಡು ಚುನಾವಣೆಯಲ್ಲಿ ಕುತಂತ್ರದಿಂದ ಸೋಲಿಸಿದರು. ಈಗಲೂ ಗಿಫ್ಟ್ ಕೂಪನ್ ಹಂಚಿಕೆ ಸೇರಿದಂತೆ ಹಲವು ರೀತಿಯ ಕುತಂತ್ರ ಮಾಡುತ್ತಿದ್ದಾರೆ. ಯಾವ ಆಮಿಷಕ್ಕೂ ಒಳಗಾಗದೆ ನಿಮ್ಮ ಸೇವೆಗೆ ನನಗೊಂದು ಅವಕಾಶ ಕೊಡಿ
ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ
ರಾಜಕೀಯದಲ್ಲಿ ಸಾಕಷ್ಟು ಏಳುಬೀಳು ಸೋಲು-ಗೆಲುವು ಕಂಡಿದ್ದೇನೆ. ಸೋತಾಗ ಅಂಜದೆ ಗೆದ್ದಾಗ ಹಿಗ್ಗದೆ ಕೆಲಸ ಮಾಡಿದ್ದೇನೆ. ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ
ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿ
‘ನಿಖಿಲ್ ಕಟ್ಟಿ ಹಾಕಲು ಸಾಧ್ಯವಿಲ್ಲ’
‘ನಿಖಿಲ್‌ ಅವರನ್ನು ಕಟ್ಟಿ ಹಾಕಲು ಚನ್ನಪಟ್ಟಣಕ್ಕೆ ಸರ್ಕಾರದ ಉಪ ಮುಖ್ಯಮಂತ್ರಿ ಸೇರಿದಂತೆ 15ಕ್ಕೂ ಹೆಚ್ಚು ಸಚಿವರು ಮತ್ತು 30ಕ್ಕೂ ಹೆಚ್ಚು ಶಾಸಕರ ದಂಡೇ ಬಂದಿದೆ. ಅವರು ಎಷ್ಟೇ ತಿಪ್ಪರಲಾಗ ಹಾಕಿದರೂ ನಿಖಿಲ್ ಅವರನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ’ ತಾಲ್ಲೂಕಿನ ಕಲ್ಲಾಪುರದಲ್ಲಿ ಪುತ್ರ ನಿಖಿಲ್ ಪರ ನಡೆದ ಪ್ರಚಾರದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ‘ಪಾಲು ಕೇಳಿದರೆ ಕೈಗಾರಿಕೆ ಬರುತ್ತಾ?’ ‘ಪಕ್ಕದ ಮಹಾರಾಷ್ಟ್ರಕ್ಕೆ ಟೊಯೊಟಾ ಕಂಪನಿ ಯಾಕೆ ಹೋಯ್ತು? ₹5ಸಾವಿರ ಕೋಟಿ ಯಾರಿಂದ ಹೋಯ್ತು? ರಾಜ್ಯಕ್ಕೆ ಕೈಗಾರಿಕೆಗಳು ಬಂದಾಗ ಸಚಿವರಾದರು ನಮ್ಮ ಷೇರು ಎಷ್ಟು ಕೊಡ್ತಿರಾ ಎಂದು ಕೇಳುತ್ತಾರಾ? ಷೇರಿಗಾಗಿ ಕುರ್ಚಿ ಹಾಕಿಕೊಂಡು ಕುಳಿತರೆ ಕಾರ್ಖಾನೆಗಳು ಬರುತ್ತವೆಯೇ? ನನಗೆಲ್ಲಾ ಮಾಹಿತಿ ಇದ್ದು ಇವರ ನಡವಳಿಕೆ ಬಗ್ಗೆ ಚರ್ಚಿಸೋಕೆ ಬಹಳ ಇದೆ’ ಎಂದು ಎಚ್‌ಡಿಕೆ ವಿರುದ್ಧ ಶಿವಕುಮಾರ್ ಪರೋಕ್ಷವಾಗಿ ಆರೋಪ ಮಾಡಿದರು. ‘ಕೇಳಿದ್ದು ಯಾರೆಂದು ಮುಂದೆ ಹೇಳುವೆ’ ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ ಕುಮಾರಸ್ವಾಮಿ ‘ಯಾರು ಪಾಲು ಕೇಳಿದ್ದಾರೆಂದು ಮುಂದೆ ಚರ್ಚಿಸುವೆ. ಕಾಂಗ್ರೆಸ್ ರಾಜ್ಯವನ್ನು ಅಭಿವೃದ್ಧಿ ಮಾಡುತ್ತದೆ ಎನ್ನುವುದು ಬರೀ ಕನಸಷ್ಟೇ. ಕೈಗಾರಿಕೆಗಳ ಬಗ್ಗೆ ಸರ್ಕಾರದ ನಡವಳಿಕೆ ಸರಿ ಇಲ್ಲ. ಕೈಗಾರಿಕೆ ಸ್ಥಾಪಿಸಲು ಉದ್ಯಮಿಗಳು ಬಂದರೆ ನಮಗೂ ಪಾಲು ಕೊಡಿ ಎಂದು ಸರ್ಕಾರದವರೇ ಡಿಮ್ಯಾಂಡ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಟೊಯೊಟಾ ಕಂಪನಿ ಮಹಾರಾಷ್ಟ್ರಕ್ಕೆ ಹೋಯ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT