ಚನ್ನಪಟ್ಟಣ (ರಾಮನಗರ): ‘ಉತ್ತರ ಕರ್ನಾಟಕದ ಅವಳಿ ನಗರಗಳಾದ ಹುಬ್ಬಳ್ಳಿ–ಧಾರವಾಡದಂತೆ ಚನ್ನಪಟ್ಟಣ ಮತ್ತು ರಾಮನಗರ ಪಟ್ಟಣಗಳನ್ನು ಸಹ ಅವಳಿ ನಗರಗಳನ್ನಾಗಿ ಅಭಿವೃದ್ದಿ ಮಾಡಲಾಗುವುದು. ಇದರಿಂದ ಈ ಭಾಗದ ಆರ್ಥಿಕ ಶಕ್ತಿ ಹೆಚ್ಚಿ, ಜನಜೀವನ ಮಟ್ಟವೂ ಸುಧಾರಿಸುತ್ತದೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ತಾಲ್ಲೂಕಿನ ನೀಲಕಂಠನಹಳ್ಳಿಯಲ್ಲಿ ಸೋಮವಾರ ಪ್ರಚಾರ ನಡೆಸಿ ಮಾತನಾಡಿದ ಅವರು, ‘ ಅಭಿವೃದ್ಧಿ ಮಾಡುವುದು ಎಂದರೆ ದುರುದ್ದೇಶಕ್ಕೆ ಈ ಭಾಗವವನ್ನು ಬೆಂಗಳೂರಿಗೆ ಸೇರಿಸುವುದಲ್ಲ. ಆಯಾ ಭೌಗೋಳಿಕ ವ್ಯಾಪ್ತಿಯಲ್ಲಿಯೇ ವಿಸ್ತೃತವಾಗಿ ಅಭಿವೃದ್ಧಿ ಮಾಡುವುದು’ ಎಂದು ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡಲು ಮುಂದಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟರು.

‘ಕ್ಷೇತ್ರದಲ್ಲಿ ಒಳಚರಂಡಿ ವ್ಯವಸ್ಥೆ ಆಗಿಲ್ಲ. ನಾನು ಸಿ.ಎಂ ಆಗಿದ್ದಾಗ ಒಳ ಚರಂಡಿ ಯೋಜಗೆಗೆ ₹97 ಕೋಟಿ ಬಿಡುಗಡೆ ಮಾಡಿದ್ದೆ. ಅದಾಗಿ ಮೂರು ವರ್ಷವಾದರೂ ಕೆಲಸವಾಗಿಲ್ಲ. ಟೆಂಡರ್ ಕರೆದು ಹಣ ಬಿಡುಗಡೆ ಮಾಡುವುದು ಬಿಟ್ಟು, ಗುತ್ತಿಗೆದಾರರಿಗೆ ‘ಮನೆ ಹತ್ತಿರ ಬಂದು ನೋಡಿ’ ಎಂದು ತಾಕೀತು ಮಾಡುತ್ತಿದ್ದಾರೆ. ಕಮಿಷನ್ ದುರಾಸೆಗೆ ಯುಜಿಡಿ ಯೋಜನೆ ನನೆಗುದಿಗೆ ಬಿದ್ದಿದೆ’ ಎಂದು ಆಕ್ರೋಶ ವ್ಯಕ್ತಡಿಸಿದರು.

‘ಪ್ರಧಾನಿ ಮೋದಿ ವಿರುದ್ಧ ದಲಿತರನ್ನು ಎತ್ತಿ ಕಟ್ಟುವ ಹೀನ ರಾಜಕೀಯವನ್ನು ಕಾಂಗ್ರೆಸ್ ಮಾಡುತ್ತಿದೆ. ಅಂಬೇಡ್ಕರ್ ಅವರನ್ನು ಎರಡು ಸಲ ಸೋಲಿಸಿ ರಾಜಕೀಯವಾಗಿ ನಿರ್ನಾಮ ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಹೆಸರನ್ನು ಚಿರಸ್ಥಾಯಿಗೊಳಿಸಲು ಮೋದಿ ಸಂಕಲ್ಪ ತೊಟ್ಟಿದ್ದಾರೆ. ಸಂವಿಧಾನ ಅಂಗೀಕರಿಸಿದ ನ. 26ನೇ ತಾರೀಖನ್ನು ಸಂವಿಧಾನ ದಿನವನ್ನಾಗಿ ಆಚರಿಸಲು ಕ್ರಮ ಕೈಗೊಂಡಿರುವ ಅವರು, ಅಂಬೇಡ್ಕರ್ ಕನಸಿನ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ’ ಎಂದರು.

‘ದಲಿತರನ್ನು ಉದ್ಧಾರ ಮಾಡುತ್ತೇವೆ ಎನ್ನುವವರು ವಾಲ್ಮೀಕಿ ನಿಗಮದಲ್ಲಿದ್ದ ಪರಿಶಿಷ್ಟರ ಹಣವನ್ನು ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ತೆಲಂಗಾಣ ಮತ್ತು ಬಳ್ಳಾರಿ ಚುನಾವಣೆಗಳಿಗೆ ಬಳಸಿದ್ದಾರೆ. ದುರ್ಬಲರನ್ನು ಉದ್ಧಾರವೆಂದರೆ ಇದೇನಾ?’ ಎಂದು ಟೀಕಿಸಿದರು.

ಬಿಜೆಪಿ ಸಂಸದ ಯದುವೀರ್ ಕೃಷದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಸಚಿವ ಸಾ.ರಾ. ಮಹೇಶ್, ಮಾಜಿ ಶಾಸಕರಾದ ಡಾ. ಅನ್ನದಾನಿ, ಚೌಡರೆಡ್ಡಿ ತೂಪಲ್ಲಿ, ನಿಸರ್ಗ ನಾರಾಯಣಸ್ವಾಮಿ ಹಾಗೂ ಸ್ಥಳೀಯ ಮುಖಂಡರು ಇದ್ದರು.

ಉದ್ಯೋಗಕ್ಕಾಗಿ ಹೆಣ್ಣು ಮಕ್ಕಳು ಗಾರ್ಮೆಂಟ್ಸ್ ಕಾರ್ಖಾನೆ ಬೇಕೆಂದು ಕೇಳಿದ್ದಾರೆ. ಅವರಿಗೆ ಟೈಲರಿಂಗ್ ತರಬೇತಿ ಕೊಡಿಸಿ ಕಾರ್ಖಾನೆ ಸ್ಥಾಪನೆ ಮಾಡಲು ಗಂಭೀರವಾಗಿ ಪ್ರಯತ್ನಿಸುವೆ
ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.