ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಪುರ: ಆಡಳಿತ ಸೌಧಕ್ಕೆ ಸ್ಥಳಾಂತರವಾಗದ ಕಚೇರಿ

ಕಟ್ಟಡದಲ್ಲಿ ಖಾಲಿ ಉಳಿದಿರುವ ಕೊಠಡಿಗಳು; ಮೂರಂತಸ್ತಿನ ಕಟ್ಟಡದಲ್ಲಿ ನಿರ್ವಹಣೆ ಕೊರತೆ
Published : 26 ಆಗಸ್ಟ್ 2024, 6:27 IST
Last Updated : 26 ಆಗಸ್ಟ್ 2024, 6:27 IST
ಫಾಲೋ ಮಾಡಿ
Comments
ಕನಕಪುರದಲ್ಲಿರುವ ತಾಲ್ಲೂಕು ಆಡಳಿತ ಸೌಧ
ಕನಕಪುರದಲ್ಲಿರುವ ತಾಲ್ಲೂಕು ಆಡಳಿತ ಸೌಧ
- 2018ರಲ್ಲಿ ಉದ್ಘಾಟನೆಯಾದ ಆಡಳಿತ ಸೌಧ ಹಳೆ ಕಟ್ಟಡ ಕೆಡವಿ ಹೊಸದಾಗಿ ಕಟ್ಟಡ ನಿರ್ಮಾಣ ನಿರ್ವಹಣೆ ಇಲ್ಲದ ಶೌಚಾಲಯ, ಕೈ ಕೊಡುವ ವಿದ್ಯುತ್
ತಾಲೂಕು ಆಡಳಿತ ಸೌಧದಲ್ಲಿ ಎಲ್ಲವೂ ಚೆನ್ನಾಗಿದೆ. ಯಾವುದೇ ಸಮಸ್ಯೆಗಳಿಲ್ಲ. ಯಾವ ಕೊಠಡಿಗಳು ಖಾಲಿ ಇಲ್ಲ. ಸಮಸ್ಯೆಯಾಗಿದೆ ಎಂದು ಯಾರು ಬಂದು ನಮಗೆ ದೂರು ನೀಡಿಲ್ಲ
– ಡಾ. ಸ್ಮಿತಾ ರಾಮ್ ತಹಶೀಲ್ದಾರ್ ಕನಕಪುರ
‘ಸ್ಥಳಾಂತರಕ್ಕೆ ಮೀನ–ಮೇಷ ಏಕೆ?’
‘ಎಲ್ಲಾ ಇಲಾಖೆಗಳ ಕಚೇರಿಗಳು ಒಂದೇ ಸೂರಿನಲ್ಲಿ ಇಬೇಕೆಂದು ಸುಭದ್ರವಾಗಿದ್ದ ಹಳೆ ತಾಲ್ಲೂಕು ಕಚೇರಿಯನ್ನು ಕೆಡವಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲಾಯಿತು. ಕೆಲವು ಇಲಾಖೆಗಳು ಇಂದಿಗೂ ಬಾಡಿಗೆ ಕಟ್ಟಡದಲ್ಲಿವೆ. ಅದರಲ್ಲೂ ಉಪ ನೋಂದಣಾಧಿಕಾರಿ ಕಚೇರಿಯನ್ನು ಇಲ್ಲಿಗೆ ಸ್ಥಳಾಂತರಿಸುವಂತೆ ಹಲವು ಸಾರಿ ಹೋರಾಟ ಮಾಡಿದ್ದೇವೆ. ಆದರೂ ಪ್ರಯೋಜನ ಆಗಿಲ್ಲ. ಈಗ ತಹಶೀಲ್ದಾರ್ ಕಚೇರಿಯನ್ನು ಸ್ಥಳಾಂತರಿಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ನೀಡಲಾಗುತ್ತಿದೆ. ಸರ್ಕಾರದ ಹಣವನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳಬಾರದು’ – ಕುಮಾರಸ್ವಾಮಿ ಕಾನೂನು ಸಲಹೆಗಾರ ಜಯ ಕರ್ನಾಟಕ ಜನಪರ ವೇದಿಕೆ ಕನಕಪುರ ‘ಕಟ್ಟಡದ ನಿರ್ವಹಣೆ ಕೊರತೆ’ ‘ತಾಲ್ಲೂಕು ಆಡಳಿತ ಸೌಧವನ್ನು ನಿರ್ಮಾಣ ಮಾಡಿ ಕೇವಲ ಏಳು ವರ್ಷವಾಗಿದೆ. ಕಳಪೆ  ಕಾಮಗಾರಿಯಿಂದಾಗಿ ಕಟ್ಟಡದ ಕೆಲವೆಡೆ ಬಿರುಕು ಬಿಟ್ಟಿದೆ. ನೀರು ಸೋರುತಿದ್ದು ಟೈಲ್ಸ್‌ಗಳು ಉದುರುತ್ತಿವೆ. ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲದೆ ಗಲೀಜಾಗಿವೆ. ಕೆಲವು ಕೊಠಡಿಗಳು ಖಾಲಿ ಇದ್ದರೂ ಅಗತ್ಯವಿರುವ ಇಲಾಖೆಗಳಿಗೆ ನೀಡದೆ ಅನುಪಯುಕ್ತವಾಗಿ ಬಿಡಲಾಗಿದೆ. ನಿತ್ಯ ಹಲವು ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಆಡಳಿತ ಸೌಧಕ್ಕೆ ಬರುತ್ತಾರೆ. ಹಾಗಾಗಿ ತಾಲ್ಲೂಕು ಆಡಳಿತವು ಕಟ್ಟಡ ನಿರ್ವಹಣೆ ಕಡೆಗೂ ಗಮನ ಹರಿಸಬೇಕು’. – ಮಲ್ಲಿಕಾರ್ಜುನ್ ಅಧ್ಯಕ್ಷ ಧಮ್ಮದೀವಿಗೆ ಚಾರಿಟೇಬಲ್ ಟ್ರಸ್ಟ್ ಕನಕಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT