ಮಾಗಡಿ: ‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಕಡತಕ್ಕೆ ಸಹಿ ಹಾಕಲು ಲಂಚ ಪಡೆಯುತ್ತಿದ್ದ ವಿಷಯ ನನಗೆ ಗೊತ್ತಿದೆ. ಯಾವಾಗ ಬೇಕಾದರೂ ಸಾಕ್ಷಿ ಸಮೇತ ಬಹಿರಂಗಪಡಿಸಲು ಸಿದ್ಧ’ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.

ಮುಖ್ಯಮಂತ್ರಿ ಆಗಿದ್ದಾಗ ಕುಮಾರಸ್ವಾಮಿ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಏಕೆ ವಾಸ್ತವ್ಯ ಹೂಡಿದ್ದರು ಎಂದು ಅವರು ಪ್ರಶ್ನಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಆದವರು ವಿಧಾನಸೌಧದಲ್ಲಿನ ಕಚೇರಿ ಅಥವಾ ಗೃಹ ಕಚೇರಿಯಲ್ಲಿ ಕಡತಗಳಿಗೆ ಸಹಿ ಹಾಕಬೇಕು. ಹೋಟೆಲ್ನಲ್ಲಿ ಕುಳಿತು ಅಲ್ಲ’ ಎಂದರು.

ಕಡತಗಳಿಗೆ ಸಹಿ ಹಾಕುವ ಮುನ್ನ ವ್ಯವಹಾರ ಕುದುರಿಸುವ ಉದ್ದೇಶದಿಂದಲೇ ಅವರು ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು ಎಂದು ಆರೋಪ ಮಾಡಿದರು.

‘ಮುಖ್ಯಮಂತ್ರಿ ಆಗಿದ್ದಾಗ ಕಡತಗಳಿಗೆ ಸಹಿ ಹಾಕಲು ಹಣ ನೀಡುವಂತೆ ಬಲವಂತ ಮಾಡಿಲ್ಲ. ನಾನು ಶುದ್ಧಹಸ್ತ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ಬಾಲಕೃಷ್ಣ ಈ ರೀತಿ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಆಗಿದ್ದಾಗ ತಾಜ್ ಹೋಟೆಲ್ನಲ್ಲಿ ಅವರ ಕಾರ್ಯವೈಖರಿ ಹೇಗಿತ್ತು? ಅಲ್ಲಿ ಅವರು ಯಾಕೆ ವಾಸ್ತವ್ಯ ಹೂಡಿದ್ದರು? ಕಡತಗಳಿಗೆ ಸಹಿ ಹಾಕಿಸಿಕೊಳ್ಳಲು ಯಾರೆಲ್ಲ ಬಂದು ಹೋಗುತ್ತಿದ್ದರು? ಇನ್ನೂ ಮುಂತಾದ ರಹಸ್ಯ ಸೇರಿದಂತೆ ಎಲ್ಲವೂ ಗೊತ್ತಿದೆ ಎಂದು ಬಾಲಕೃಷ್ಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.