ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ ಉಪ ಚುನಾವಣೆ: ಪ್ರಚಾರದಲ್ಲಿ ಪ್ರತಿಧ್ವನಿಸಿದ ‘ಮೇಕೆದಾಟು’ ರಾಜಕೀಯ

ಕಾಂಗ್ರೆಸ್‌ನವರು ಡಿಎಂಕೆ ಒಪ್ಪಿಸಲಿ: ಎಚ್‌ಡಿಕೆ ಸವಾಲು
Published : 9 ನವೆಂಬರ್ 2024, 23:30 IST
Last Updated : 9 ನವೆಂಬರ್ 2024, 23:30 IST
ಫಾಲೋ ಮಾಡಿ
Comments
ಚನ್ನಪಟ್ಟಣ ತಾಲ್ಲೂಕಿನ ಹುಣಸನಹಳ್ಳಿಯಲ್ಲಿ  ಕಾಂಗ್ರೆಸ್‌ ಪಕ್ಷದಿಂದ ಶನಿವಾರ ನಡೆದ ತಿಗಳ ಸಮುದಾಯದ ಸಮಾವೇಶದಲ್ಲಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮಾಜಿ ಸಂಸದ ಡಿ.ಕೆ. ಸುರೇಶ್ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಸಮುದಾಯದ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರು
ಚನ್ನಪಟ್ಟಣ ತಾಲ್ಲೂಕಿನ ಹುಣಸನಹಳ್ಳಿಯಲ್ಲಿ  ಕಾಂಗ್ರೆಸ್‌ ಪಕ್ಷದಿಂದ ಶನಿವಾರ ನಡೆದ ತಿಗಳ ಸಮುದಾಯದ ಸಮಾವೇಶದಲ್ಲಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮಾಜಿ ಸಂಸದ ಡಿ.ಕೆ. ಸುರೇಶ್ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಸಮುದಾಯದ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರು
ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನಿಯಾಗಬಲ್ಲ ನಾಯಕ ಯಾರಾದಾರೂ ಇದ್ದಾರೆಯೇ? ಸ್ಟಾಲಿನ್ ಅಥವಾ ಮಮತಾ ಬ್ಯಾನರ್ಜಿ ಪ್ರಧಾನಿ ಆಗಬಹುದೇ? 
ಎಚ್‌.ಡಿ. ದೇವೇಗೌಡ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ
ನಾವು ಕಡಲೆಕಾಯಿ ಗಿಡ ಕೀಳುತ್ತೇವೆ ಎಂದಿಲ್ಲ. ಸರ್ಕಾರವನ್ನೇ ಕಿತ್ತೊಗೆಯುತ್ತೇವೆ ಎಂದಿರೋದು. ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂಬುದು ಜನರ ಭಾವನೆಯಾಗಿದೆ. ಅದನ್ನೇ ದೇವೇಗೌಡರು ಹೇಳಿದ್ದಾರೆ
ಎಚ್‌.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ
ನೀರಾವರಿ ಸೇರಿದಂತೆ ತಾಲ್ಲೂಕಿನ ಸಮಗ್ರ ನೀರಾವರಿಗಾಗಿ ನಾನು ಹೋರಾಟ ಮಾಡುತ್ತಿದ್ದರೆ ಜೆಡಿಎಸ್‌ ನಾಯಕರು ತಮ್ಮ ಕುಟುಂಬದ ಕುಡಿಯ ಪಟ್ಟಾಭಿಷೇಕ್ಕಕ್ಕಾಗಿ ಹೋರಾಡುತ್ತಿದ್ದಾರೆ. ಯಾರು ಹಿತವರು ಎಂದು ನೀವೆ ಯೋಚಿಸಿ ಮತ ಚಲಾಯಿಸಿ
ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿ
‘ನಿಮ್ಮ ವಿರುದ್ಧ ತೊಡೆ ತಟ್ಟಿದ್ದ ನಮ್ಮಣ್ಣ’
‘ಇನ್ನೊಬ್ಬರ ಬಳಿ ಕೈ ಚಾಚುವ ರೀತಿ ನಮ್ಮ ಅಪ್ಪ-ಅಮ್ಮ ನಮ್ಮನ್ನು ಬೆಳೆಸಿಲ್ಲ ದೇವೇಗೌಡರೇ‌. 23ನೇ ವಯಸ್ಸಿಗೇ ನಮ್ಮಣ್ಣನನ್ನು ನಿಮ್ಮ ವಿರುದ್ಧ ತೊಡೆ ತಟ್ಟಿ ನಿಲ್ಲಿಸಿದ್ದಾರೆ. ಯಾರ ಬಳಿಯೂ ಕೆರೆಯನ್ನು ಬರೆಸಿಕೊ ಎಂದು ಹೇಳಿಲ್ಲ. ನೀವು ಡಿಸಿಎಂ ಬಗ್ಗೆ ಮಾತನಾಡಿದರೆ ಸುಮ್ಮನಿರುತ್ತಿದ್ದೆ. ಆದರೆ ನಮ್ಮಣ್ಣನ ಬಗ್ಗೆ ಮಾತನಾಡಿದ್ದೀರಿ. ಹಿರಿಯರು ಅಂತ ಗೌರವ ಕೊಟ್ಟರೆ ಏನೇನೊ ಮಾತನಾಡುತ್ತೀರಾ? ಕುತಂತ್ರ ಮಾಡಿ ನಮ್ಮಣ್ಣನನ್ನು ಜೈಲಿಗೆ ಕಳಿಸಿದ್ದ ನೀವು ಈಗ ಸಿದ್ದರಾಮಯ್ಯ ಅವರ ವಿರುದ್ದವು ಅದೇ ಕೆಲಸ ಮಾಡಲು ಮುಂದಾಗಿದ್ದೀರಿ. ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದಕ್ಕೆ ಹೀಗೆ ಮಾಡ್ತಿದ್ದೀರಾ? ಮೊಮ್ಮಗನ ಚುನಾವಣಾ ಪ್ರಚಾರಕ್ಕೆ ಈಗ ಬಂದು ಸರ್ಕಾರ ತೆಗೆಯುತ್ತೇನೆ ಎಂದು ಎದೆ ಬಡಿದುಕೊಂಡು ಮಾತನಾಡುತ್ತೀರಾ ಗೌಡರೇ’ ಎಂದು ತಮ್ಮ ಅಣ್ಣ ಡಿಕೆಶಿ ವಿರುದ್ಧದ ಗೌಡರ ಟೀಕೆಗೆ ಮಾಜಿ ಸಂಸದ ಡಿ.ಕೆ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
‘ಮೀಸಲಾತಿ ಕೊಟ್ಟಿದ್ದು ಗೌಡರಲ್ಲ ಮೊಯಿಲಿ’
‘ಮುಸಲ್ಮಾನರಿಗೆ ಮೀಸಲಾತಿ ಕೊಟ್ಟಿದ್ದು ನಾನೇ ಎನ್ನುತ್ತಿರುವ ದೇವೇಗೌಡರು ಜನರ ದಾರಿ ತಪ್ಪಿಸುತ್ತಿದ್ದಾರೆ. ಮೀಸಲಾತಿ ಕೊಟ್ಟಿದ್ದು ವೀರಪ್ಪ ಮೊಯಿಲಿ. ಮೀಸಲಾತಿ ಕುರಿತು ಅವರು ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ಕಳಿಸಿದ್ದ ಮೊಯಿಲಿ ಅವರು ಶೇ 6ರಷ್ಟು ಮೀಸಲಾತಿ ಶಿಫಾರಸು ಮಾಡಿದ್ದರು. ನಂತರ ಬಂದ ದೇವೇಗೌಡರು ಕೊಟ್ಟಿದ್ದು ಕೇವಲ ಶೇ 4ರಷ್ಟು ಮೀಸಲಾತಿ ಕೊಟ್ಟು ನಮಗೆ ಮೋಸ ಮಾಡಿದ್ದಾರೆ. ಬಿಜೆಪಿಯವರು ಮುಸ್ಲಿಮರ ಮತ ಬೇಕಿಲ್ಲ ಎನ್ನುತ್ತಾರೆ. ಅವರ ಜೊತೆ ಕೈ ಜೋಡಿಸಿರುವ ಜೆಡಿಎಸ್‌ನವರು ಯಾವ ಮುಖ ಇಟ್ಟುಕೊಂಡು ನಮ್ಮ ಮತ ಕೇಳುತ್ತಾರೆ. ಮುಸ್ಲಿಮರ ಪರ ಇದ್ದೇವೆ ಎಂದು ಬಿಜೆಪಿಯವರಿಂದ ಹೇಳಿಸಲಿ. ಆಗ ನಿಖಿಲ್‌ಗೆ ಮತ ಹಾಕಲು ಚಿಂತನೆ ಮಾಡುತ್ತಾರೆ’ ಎಂದು ಸಚಿವ ಜಮೀರ್ ಅಹಮದ್ ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT