ಹೊಳೆಹೊನ್ನೂರು (ಶಿವಮೊಗ್ಗ): ಅನ್ಯಕೋಮಿನ ಯುವಕನೊಂದಿಗೆ ಓಡಾಡುತ್ತಿರುವುದಾಗಿ ಆರೋಪಿಸಿ ಮುಸ್ಲಿಂ ಸಮುದಾಯದ ಯುವತಿ ಮೇಲೆ ಹಲ್ಲೆ ನಡೆಸಿದ್ದ ಅದೇ ಸಮುದಾಯದ 13 ಮಂದಿ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ಸಮೀಪದ ಅರಬಿಳಚಿ ಗ್ರಾಮದ ಯುವತಿ ಅದೇ ಊರಿನ ಯುವಕನ ಜೊತೆ ಓಡಾಡುತ್ತಿದ್ದರು. ಇದನ್ನು ಗಮನಿಸಿದ್ದ ಆರೋಪಿಗಳಾದ ಮಕ್ಬೂರ್ ಪಾಷಾ, ತೋಹಿದ್, ರಫೀಕ್ ತಸೀನಾ, ತಾಂಜೀಯಾ, ಕಲೀಂ, ಸುನ್ನು, ನಸ್ರುಲ್ಲಾ, ಅಬ್ದುಲ್, ಜಿಶಾನ್, ರಿಜ್ವಾನ್, ಅಬ್ದುಲ್ಲಾ, ಅಬ್ಬಾಸ್ ಅಲಿ ಹಾಗೂ ಅಕ್ಬರ್ ಈ ಕುರಿತು ಯುವತಿಯನ್ನು ಪ್ರಶ್ನಿಸಿದ್ದರು. ಹಲ್ಲೆ ಕೂಡ ನಡೆಸಿದ್ದರು. ಈ ಸಂಬಂಧ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

‘ಅನ್ಯ ಕೋಮಿನ ಯುವಕನ ಜೊತೆ ಏಕೆ ಓಡಾಡುತ್ತೀಯಾ ಎಂದು ಪ್ರಶ್ನಿಸಿದ್ದ ಆರೋಪಿಗಳು, ಯಾವ ತಪ್ಪನ್ನೂ ಮಾಡಿಲ್ಲ ಎಂದು ಹೇಳಿದರೂ ಕೇಳದೆ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಮಸೀದಿ ಸಮಿತಿಯವರು ಕರೆಯುತ್ತಿರುವುದಾಗಿ ಹೇಳಿದ್ದ ಅವರು ತಾಯಿಯೊಂದಿಗೆ ಅಲ್ಲಿಗೆ ಹೋಗಿದ್ದಾಗ ಥಳಿಸಿದ್ದರು’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.