ಅಡಿಕೆ ಮಾರುಕಟ್ಟೆಯ ಭವಿಷ್ಯಕ್ಕಾಗಿ ಈ ಮಿಕ್ಸಿಂಗ್ ವ್ಯವಸ್ಥೆಗೆ ಕಡಿವಾಣ ಹಾಕಬೇಕಿದೆ. ಬೆಳೆಗಾರರು ಗುಣಮಟ್ಟದ ಅಡಿಕೆ ಹಾಗೂ ಬಣ್ಣ ಫಾಲಿಶ್ ಹಾಕಿದ ಅಡಿಕೆ ಪ್ರತ್ಯೇಕವಾಗಿ ತರಲಿ
ಶ್ರೀಕಾಂತ್ ಬರುವೆ ವ್ಯವಸ್ಥಾಪಕ ನಿರ್ದೇಶಕ ಮ್ಯಾಮ್ಕೋಸ್ ಶಿವಮೊಗ್ಗ
ಕೆಲವು ಕೇಣಿದಾರರು ವ್ಯಾಪಾರಸ್ಥರು ತಾತ್ಕಾಲಿಕ ಲಾಭದ ಆಸೆಗೆ ರೈತರನ್ನು ವಂಚಿಸಿ ಕಳಪೆ ಗುಣಮಟ್ಟದ ಅಡಿಕೆ ಸಿದ್ಧಗೊಳಿಸುತ್ತಿದ್ದಾರೆ. ಹೀಗಾದಲ್ಲಿ ಅಡಿಕೆ ಉದ್ಯಮ ಹಾಳಾಗಲಿದೆ. ಆ ಬಗ್ಗೆ ರೈತರು ಎಚ್ಚರಿಕೆ ವಹಿಸಬೇಕು.
ಆರ್.ಎಂ.ಮಂಜುನಾಥಗೌಡ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ
ಬೆಲೆ ಏರಿಕೆಯ ಆಶಾಭಾವ
‘ಉತ್ತರ ಭಾರತದಲ್ಲಿ ಬಿಸಿಲ ಝಳದ ನಂತರ ಪ್ರವಾಹದ ಕಾರಣಕ್ಕೆ ಸುಮಾರು ಒಂದೂವರೆ ತಿಂಗಳು ಪಾನ್ ಮಸಾಲ ಹಾಗೂ ಗುಟ್ಕಾ ಕಂಪೆನಿಗಳು ಅಡಿಕೆ ಕ್ರಶಿಂಗ್ ಕಾರ್ಯ ಸ್ಥಗಿತಗೊಳಿಸಿದ್ದವು. ಹೀಗಾಗಿ ಕಳೆದ ವರ್ಷಕ್ಕಿಂತ ಈ ಹಂಗಾಮಿನಲ್ಲಿ ದರ ಕೊಂಚ ತಗ್ಗಿದೆ’ ಎಂದು ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ ಹೇಳುತ್ತಾರೆ. ಈಗ ಕ್ರಶಿಂಗ್ ಆರಂಭಿಸಿರುವುದರಿಂದ ಮತ್ತೆ ಬೆಲೆ ಏರಿಕೆಯಾಗಬಹುದು. ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂಬ ಆಶಾಭಾವನೆ ವ್ಯಕ್ತಪಡಿಸುತ್ತಾರೆ.