ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಗುಂಬೆ: ಎಲ್ಲೆಲ್ಲೂ ಜಲಲ ಧಾರೆಯರ ವೈಯ್ಯಾರ !

Published 21 ಜುಲೈ 2024, 4:15 IST
Last Updated 21 ಜುಲೈ 2024, 4:15 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಸಂಜೆಯ ಸೂರ್ಯಾಸ್ತದ ರಂಗು ಕಾಣಲು ಅಪ್ಯಾಯಮಾನ ಆಗುತ್ತಿದ್ದ ಇಲ್ಲಿನ ಆಗುಂಬೆ ಹಾಗೂ ಸುತ್ತಲಿನ ಗಿರಿಶ್ರೇಣಿಗಳು, ಈಗ ಬಳುಕುತ್ತಾ ಧುಮ್ಮಿಕ್ಕುವ ಜಲಧಾರೆಗಳ ವೈಯ್ಯಾರದಿಂದ ಪ್ರವಾಸಿಗರ ಕೈ ಬೀಸಿ ಕರೆಯುತ್ತಿವೆ.

ಘಾಟಿಯ ಹಾದಿ, ಆಗುಂಬೆಯ ಪರಿಸರದಲ್ಲಿ ಪುನರ್ವಸು ಮಳೆಯಿಂದ ಹಾಲು ಬಣ್ಣದ ಜಲಪಾತಗಳು ಧುಮ್ಮಿಕ್ಕುತ್ತಿವೆ. ನೋಡುಗರ ಕಣ್ಮನ ಸೆಳೆಯುತ್ತಿವೆ. ಆಗುಂಬೆ ಮೂಲಕ ಘಟ್ಟದ ಮೇಲೆ, ಕೆಳಗೆ ಓಡಾಡುವವರು ಕೆಲ ಹೊತ್ತು ಈ ವಯ್ಯಾರಿಯರ ಸಾಂಗತ್ಯದಲ್ಲಿ ಮೈಮರೆಯುತ್ತಿದ್ದಾರೆ.

ಆಗುಂಬೆ ಶಿವಮೊಗ್ಗದಿಂದ 93 ಕಿ.ಮೀ ದೂರದಲ್ಲಿದೆ. ಇಲ್ಲಿ ವಾರ್ಷಿಕವಾಗಿ 5,000 ಮಿ.ಮೀ–8,000 ಮಿ.ಮೀ ಮಳೆಯಾಗುತ್ತದೆ. ಇದನ್ನು ಕರ್ನಾಟಕದ ಚಿರಾಪುಂಜಿ ಎಂದೇ ಕರೆಯಲಾಗುತ್ತದೆ. ಸಮುದ್ರ ಮಟ್ಟದಿಂದ 826 ಮೀಟರ್‌ ಎತ್ತರದಲ್ಲಿರುವ ಘಾಟಿ ಪ್ರದೇಶ 14 ಹೇರ್‌ಪಿನ್‌ ತಿರುವುಗಳ ಒಳಗೊಂಡಿದೆ. ಇಲ್ಲಿ ಬಿರು ಬೇಸಿಗೆಯಲ್ಲೂ ತಂಪಿನ ವಾತಾವರಣ ಕಾಣಸಿಗುತ್ತದೆ. ಮಳೆ, ಚಳಿ, ಮಂಜು ಮುಸುಕಿದ ಆಹ್ಲಾದತೆ ಖುಷಿ ನೀಡುತ್ತದೆ. ವಾಹನ ಸವಾರರಿಗೆ ಇದೊಂದು ಸವಾಲಿನ ಮಾರ್ಗವಾದರೂ ಪ್ರಕೃತಿ ಪ್ರಿಯರಿಗೆ ನೆಚ್ಚಿನ ತಾಣ.

ಆಹಾ ಚಳಿ…: ಮಳೆಯ ಹನಿಗಳು ಮೈ ಮನಗಳಿಗೆ ತಟ್ಟುತ್ತಿದ್ದಂತೆಯೇ ಬೆಚ್ಚಗಿನ ದೇಹದಲ್ಲಿ ಸಣ್ಣನೆಯ ಕಂಪನ ಆರಂಭಗೊಳ್ಳುತ್ತದೆ. ಚೂರು ಪಾರು ಮಳೆಯಲ್ಲಿ ತೊಯ್ದರೆ ಕಥೆ ಹೈರಾಣು. ಬಟ್ಟೆ ಒದ್ದೆ ಜೊತೆಗೆ ಚಳಿ, ಮಂಜು ಮುಸುಕುವ ವಾತಾವರಣದಲ್ಲಿ ಆಹಾ ಚಳಿ ಎಂಬ ಬಿರುಧ್ವನಿ ಕೂಡ ಹೊರಬರಲು ಸಾಧ್ಯವೇ ಇಲ್ಲ. ಗಡ ಗಡ ನಡುಗುವ ದೇಹಕ್ಕೆ ಒಂದಿಷ್ಟು ಬಿಸಿ ತಿನಿಸು ಸಿಕ್ಕರೆ ಅದೃಷ್ಟವೇ ಸರಿ. ಕೆಲವೊಮ್ಮೆ ಬಿಸಿಯ ಪದಾರ್ಥಗಳು ಟೇಬಲ್‌ಗೆ ಬರುವ ಮೊದಲೇ ತಣ್ಣಗಾಗುತ್ತವೆ.

ಹರಿಯುವ ನೀರೆಲ್ಲಾ ಜಲಪಾತ: ಘಾಟಿ ಪ್ರದೇಶದಲ್ಲಿ ಹರಿಯುತ್ತಿರುವ ನೀರೆಲ್ಲಾ ಜಲಪಾತಗಳಂತೆ ಕಂಗೊಳಿಸುತ್ತಿವೆ. ಆಗುಂಬೆಯಿಂದ ಸೋಮೇಶ್ವರದವರೆಗೆ ಹಬ್ಬಿರುವ ಅತ್ಯಂತ ಕಿರಿದಾದ ತಿರುವಿನ ಸಂದಿಗೊಂದಿಗಳಲ್ಲಿ ಸಣ್ಣ ಸಣ್ಣ ಜಲಪಾತ ಸೃಷ್ಟಿಯಾಗಿವೆ. ಆಗುಂಬೆಯಿಂದ 10 ಕಿ.ಮೀ. ದೂರದಲ್ಲಿರುವ ಮಲ್ಲಂದೂರು ಗ್ರಾಮದ ಜೋಗಿ ಗುಂಡಿ ಜಲಪಾತ ಆಕರ್ಷಕವಾಗಿದೆ. 259 ಮೀಟರ್‌ ಎತ್ತರದಿಂದ ಧುಮ್ಮಿಕ್ಕುವ ಬರ್ಕಣ ಫಾಲ್ಸ್‌ ವೀಕ್ಷಣೆಗೆ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ.

ಇಂಬಳದ್ದೇ ಪಾರುಪತ್ಯ: ಜಲಪಾತ ವೀಕ್ಷಣೆಯ ಸ್ಥಳಗಳಲ್ಲಿ ಇಂಬಳಗಳ ಪಾರುಪತ್ಯ ಜೋರಾಗಿದೆ. ಬಹುತೇಕ ಕಾಲುಗಳಿಗೆ ಅಂಟುವ ಇವುಗಳು ಮೈಮರೆತರೆ ಅಥವಾ ಗಿಡ, ಮರಗಳಿಗೆ ಅಂಟಿದರೆ ಮುಖದವರೆಗೂ ಸವಾರಿ ಬರಲಿವೆ.

ತೀರ್ಥಹಳ್ಳಿ ತಾಲ್ಲೂಕಿನ ಮಲ್ಲಂದೂರು ಗ್ರಾಮದಲ್ಲಿರುವ ಜೋಗಿಗುಂಡಿ ಜಲಪಾತ

ಆಗುಂಬೆ ಘಾಟಿ ರಸ್ತೆಯಲ್ಲಿ ಮಳೆ ನೀರಿನಿಂದ ಸೃಷ್ಟಿಯಾಗಿರುವ ಜಲಪಾತ

ಸಹ್ಯಾದ್ರಿ ಶ್ರೇಣಿಯ ಶೀತಲ ಪ್ರದೇಶದಲ್ಲಿ ಕಂಡುಬರುವ ಇಂಬಳ

ಸಹ್ಯಾದ್ರಿ ಶ್ರೇಣಿಯ ಶೀತಲ ಪ್ರದೇಶದಲ್ಲಿ ಕಂಡು ಬರುವ ಇಂಬಳ

Cut-off box - ಅಂಕಿ ಅಂಶ ಜುಲೈ 14ರಿದ 20ರವರೆಗೆ ಆಗುಂಬೆಯಲ್ಲಿ ಸುರಿದ ಸರಾಸರಿ ಮಳೆ (ಸೆಂ.ಮೀ) ಭಾನುವಾರ;17.72  ಸೋಮವಾರ;10.2 ಮಂಗಳವಾರ;34.2 ಬುಧವಾರ;22 ಗುರುವಾರ;13.44 ಶುಕ್ರವಾರ;23.9 ಶನಿವಾರ;14.56 ಒಟ್ಟು;136.02

Cut-off box - ವಾರದಲ್ಲೇ 136 ಸೆ.ಮೀ ಮಳೆ.. ಕಳೆದ ವರ್ಷದ ಬರಗಾಲದಿಂದ ಬೇಸಿಗೆಯಲ್ಲಿ ಆಗುಂಬೆಯ ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿತ್ತು. ಕೃಷಿ ಜಮೀನಿಗೆ ನೀರು ಒದಗಿಸಲಾಗದೆ ರೈತರು ಕೈಸೋತಿದ್ದರು. ಈ ವರ್ಷ ಮಳೆಯಾಗದಿದ್ದರೆ ಮುಂದೇನು ಅನ್ನುತ್ತಿದ್ದ ರೈತರಲ್ಲಿ ಬಿಡದೇ ಸುರಿಯುತ್ತಿರುವ ಮಳೆ ಸಂತಸ ಹೆಚ್ಚಿಸಿದೆ. ನಗರ ಪ್ರದೇಶದಲ್ಲಿ ‘ಅಂತೂ ಸಾಕಷ್ಟು ನೀರು ಸಂಗ್ರಹ ಆಯ್ತಲ್ಲಾʼ ಎಂಬ ನಿಟ್ಟುಸಿರು ಕೇಳಿಸುತ್ತಿವೆ. ಕಳೆದ ಒಂದು ವಾರದ ಅವಧಿಯಲ್ಲಿ ಆಗುಂಬೆ ಮಳೆ ಮಾಪನ ಕೇಂದ್ರದಲ್ಲಿ 136 ಸೆಂ.ಮೀ ಮಳೆ ದಾಖಲಾಗಿದೆ. ಇಲ್ಲಿನ ಮಾಲತಿ ಮಲಾಪಹಾರಿ ನಂದಿನಿ ನಳಿನಿ ಸೀತಾ ನದಿಗಳಿಗೆ ಜೀವಕಳೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT