ಶಿಮುಲ್: ನಂದಿನಿ ಹಾಲಿನ ಉತ್ಪಾದನೆ ಹೆಚ್ಚಳ;15 ಮಾದರಿ ಬ್ರೆಡ್, ಬನ್ ತಯಾರಿಕೆ ಆರಂಭ
ಕಿರಣ್ ಕುಮಾರ್
Published : 18 ಜುಲೈ 2024, 6:51 IST
Last Updated : 18 ಜುಲೈ 2024, 6:51 IST
ಫಾಲೋ ಮಾಡಿ
Comments
ಮಾರಾಟಕ್ಕೆ ಸಜ್ಜಾಗಿರುವ ನಂದಿನಿ ಹಾಲಿನ ಉತ್ಪನ್ನಗಳು
ಹೋಟೆಲ್‌ಗಲ್ಲಿ ಟೀ ಕಾಫಿ ದರ ಏರಿಕೆ !
ಹಾಲು ಒಕ್ಕೂಟ ಪ್ರತೀ ಲೀಟರ್ ಪ್ಯಾಕೆಟ್‌ನಲ್ಲಿ ಹಾಲಿನ ಪ್ರಮಾಣ 50 ಎಂಎಲ್ ಹೆಚ್ಚಿಸಿ ಅದಕ್ಕೆ ತಕ್ಕಂತೆ ₹2 ದರ ಏರಿಸಿದೆ. ಇದರಲ್ಲಿ ಬೆಲೆ ಏರಿಕೆ ಏನೂ ಆಗಿಲ್ಲ. ಆದರೆ ಭದ್ರಾವತಿಯ ಕೆಲವು ಹೋಟೆಲ್‌ನವರು ಹಾಲಿನ ದರ ಏರಿಕೆ ಆಗಿದೆ ಎಂದು ಗ್ರಾಹಕರಿಗೆ ಸುಳ್ಳು ಹೇಳುತ್ತಾ ಕಾಫಿ–ಟೀ ದರ ಹೆಚ್ಚಿಸಿದ್ದಾರೆ. ಇದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ಲೋಟ ಟೀ ಕಾಫಿ ಗೆ ₹2 ರಿಂದ ₹3 ಏರಿಸಲಾಗಿದೆ ಎಂದು ಗ್ರಾಹಕ ಸುಮನ್ ಬೇಸರ ವ್ಯಕ್ತಪಡಿಸುತ್ತಾರೆ. ಸಂಘದಲ್ಲಿ ನೋಂದಾಯಿತವಾದ ಯಾವುದೇ ಹೋಟೆಲ್‌ಗಳಲ್ಲಿ ಕಾಫಿ–ಟೀ ದರಗಳಲ್ಲಿ ಏರಿಕೆ ಮಾಡಿಲ್ಲ. ಪ್ರಸ್ತುತ ಒಂದು ಫುಲ್ ಟೀ ಕಾಫಿ ₹20 ನಿಗದಿಪಡಿಸಲಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರವಿರಾಜ್ ಆಚಾರ್ಯ ಹೇಳುತ್ತಾರೆ.