ಶಿವಮೊಗ್ಗ: ಇಲ್ಲಿನ ಸಹ್ಯಾದ್ರಿ ಕಾಲೇಜು ಮುಂಭಾಗ ಗುರುವಾರ ಸಂಚಾರ ನಿಯಮ ಉಲ್ಲಂಘನೆ ಕಾರಣ ಕಾರು ನಿಲ್ಲಿಸುವಂತೆ ಸೂಚಿಸಿದ ಟ್ರಾಫಿಕ್ ಪೊಲೀಸ್ ಮೇಲೇ ಚಾಲಕ ಕಾರು ಹರಿಸಲು ಯತ್ನಿಸಿದ್ದಾನೆ. ಮೈಮೇಲೆ ಬಂದ ಕಾರ್ನ ಬಾನೆಟ್ ಹಿಡಿದು, ಮೇಲೆ ಬಿದ್ದ ಅವರನ್ನು 100 ಮೀಟರ್ನಷ್ಟು ದೂರ ಎಳೆದೊಯ್ದಿದ್ದಾನೆ.

ಶಿವಮೊಗ್ಗದ ಪೂರ್ವ ಸಂಚಾರ ವಿಭಾಗದ ಕಾನ್ಸ್ಟೆಬಲ್ ಪ್ರಭುರಾಜ್ ಅವರು ಸಹ್ಯಾದ್ರಿ ಕಾಲೇಜು ಬಳಿ ಕರ್ತವ್ಯ ನಿರತ
ರಾಗಿದ್ದರು. ಈ ವೇಳೆ ಎಂಆರ್ಎಸ್ ಸರ್ಕಲ್ ಕಡೆಯಿಂದ ಹೊಳೆ ಬಸ್ ನಿಲ್ದಾಣದತ್ತ ಹೊರಟಿದ್ದ ಕಿಯಾ ಸಾನೆಟ್ ಕಾರಿನ ಚಾಲಕ ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ. ಆಗ ಕಾರಿಗೆ ಅಡ್ಡ ನಿಂತ ಅವರು, ಪಕ್ಕಕ್ಕೆ ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದಾರೆ.

ಕಾರು ನಿಲ್ಲಿಸದೇ ಪ್ರಭುರಾಜ್ ಅವರೊಂದಿಗೆ ವಾದ ಮಾಡುತ್ತಲೇ ಮುಂದೆ ಚಲಾಯಿಸುತ್ತಾ ಅವರನ್ನು ದಬ್ಬಿಕೊಂಡು ಹೋಗಿದ್ದಾನೆ. ಹಿಂದಕ್ಕೆ ಸರಿಯುತ್ತಾ ಹೋದ ಕಾನ್ಸ್ಟೆಬಲ್, ಕಾರಿನ ವೇಗ ಹೆಚ್ಚುತ್ತಲೇ ಅದರ ಬಾನೆಟ್ ಮೇಲೆ ಬಿದ್ದಿದ್ದಾರೆ. ಸ್ವಲ್ಪ ದೂರ ತೆರಳಿದ ನಂತರ ಕಾರು ನಿಲ್ಲಿಸಿದ್ದಾನೆ. ಕಾನ್ಸ್ಟೆಬಲ್ ಕೆಳಗೆ ಇಳಿದು ಪಕ್ಕಕ್ಕೆ ಬರುತ್ತಿದ್ದಂತೆಯೇ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ.

ಕಾರು ಚಾಲಕ ಭದ್ರಾವತಿಯ ಕೇಬಲ್ ಆಪರೇಟರ್ ಮಿಥುನ್ ಜಗದಾಳೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.