ತುಮರಿ (ಶಿವಮೊಗ್ಗ ಜಿಲ್ಲೆ): ಸಾಗರ ತಾಲ್ಲೂಕಿನ ಕಳಸವಳ್ಳಿ ಗ್ರಾಮದ ಬಳಿಯ ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರಿನ ನಡುಗಡ್ಡೆಗೆ ಬುಧವಾರ ಊಟಕ್ಕೆ (ಹೊಳೆ ಊಟ) ಹೋಗಿದ್ದ ಮೂವರು ಯುವಕರು ತೆಪ್ಪ ಮುಗುಚಿ ನೀರು ಪಾಲಾಗಿದ್ದಾರೆ.

ಮಧ್ಯಾಹ್ನ ಐವರು ಯುವಕರು ನಡುಗಡ್ಡೆಗೆ ಊಟಕ್ಕೆ ತೆರಳಿದ್ದರು. ಸಂಜೆ ಮರಳಿ ಬರುವಾಗ ಸಮತೋಲನ ತಪ್ಪಿ ತೆಪ್ಪ ಶರಾವತಿ ಹಿನ್ನೀರಿನಲ್ಲಿ ಮುಳುಗಿದೆ. ಈ ವೇಳೆ ಇಬ್ಬರು ಈಜಿ ದಡ ಸೇರಿದ್ದಾರೆ ಎಂದು ತಿಳಿದುಬಂದಿದೆ.

ಕಳಸವಳ್ಳಿ ಗ್ರಾಮದ ಚೇತನ್ ಜೈನ್ ಸಿಗಂದೂರು (28), ಸಂದೀಪ್ ಹುಲಿದೇವರಬನ (31) ಹಾಗೂ ರಾಜು ಗಿಣಿವಾರ (27) ನೀರಿನಲ್ಲಿ ಮುಳುಗಿದವರು.

ತೆಪ್ಪದಲ್ಲಿದ್ದ ಯಶವಂತ ಹಾಗೂ ವಿನಯ್ ಈಜಿ ದಡ ಸೇರಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸಾಗರದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಾಂತರ ಠಾಣೆ ಪೊಲೀಸರುನೀರು ಪಾಲಾಗಿರುವ ಮೂವರ ಹುಡುಕಾಟದಲ್ಲಿ ತೊಡಗಿದ್ದರು. ಪಿಎಸ್ಐ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಕತ್ತಲು ಆವರಿಸಿದ್ದರಿಂದ ಶೋಧ ಕಾರ್ಯವನ್ನು ರಾತ್ರಿ ಸ್ಥಗಿತಗೊಳಿಸಲಾಗಿದೆ. ಬೆಳಿಗ್ಗೆ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.