ಶಿವಮೊಗ್ಗ: ಡಿಎಲ್ ಇಲ್ಲದಿದ್ದರೂ ಮಗನಿಗೆ ಬೈಕ್ ಓಡಿಸಲು ಕೊಟ್ಟಿದ್ದ ಅಪ್ಪನಿಗೆ ಭದ್ರಾವತಿಯ ಜೆಎಂಎಫ್‌ಸಿ ನ್ಯಾಯಾಲಯ ₹25 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ಭದ್ರಾವತಿಯ ನ್ಯೂಟೌನ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ರಮೇಶ್ ಜುಲೈ 19ರಂದು ಹುತ್ತಾ ಕಾಲೋನಿ ಬಳಿ ವಾಹನ ತಪಾಸಣೆ ಮಾಡುವಾಗ 16 ವರ್ಷದ ಬಾಲಕ ಪರವಾನಗಿ ಇಲ್ಲದಿದ್ದರೂ ಬೈಕ್ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಬಾಲಕನ ತಡೆದು ದಾಖಲೆಗಳ ಪರಿಶೀಲಿಸಿದ ಪೊಲೀಸರು ಬೈಕ್ ವಶಕ್ಕೆ ಪಡೆದಿದ್ದಾರೆ.

ನಂತರ ಬೈಕ್‌ನ ಮಾಲೀಕರೂ ಆದ ಬಾಲಕನ ತಂದೆ, ಭದ್ರಾವತಿಯ ಜನ್ನಾಪುರದ ನಿವಾಸಿ ಶ್ರೀಕಾಂತ್ (45) ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಲಘು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ವರದಿ ಸಲ್ಲಿಸಿದ್ದಾರೆ. ನ್ಯಾಯಾಲಯ ದಂಡ ವಿಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.