ಮಧುಗಿರಿ: ಮಧುಗಿರಿ ಶೈಕ್ಷಣಿಕ ಜಿಲ್ಲೆಯಾಗಿ ಹಲವು ವರ್ಷ ಕಳೆದರೂ ಈವರೆಗೂ ಸಾರ್ವಜನಿಕ ಗ್ರಂಥಾಲಯಕ್ಕೆ ಜಾಗ ಮತ್ತು ಕಟ್ಟಡವಿಲ್ಲದೆ ಮಳೆ ಬಂದರೆ ಸೋರುವ ಕೊಠಡಿಯಲ್ಲಿಯೇ ಓದುಗರು ಪುಸ್ತಕಗಳನ್ನು ಓದುವ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ಸಮರ್ಪಕ ಸೌಲಭ್ಯಗಳಿಲ್ಲದೆ ಓದುಗರು ಪರದಾಡುವಂತಾಗಿದೆ.

ಸಾರ್ವಜನಿಕ ಗ್ರಂಥಾಲಯದಲ್ಲಿ ಸುಮಾರು 1.25 ಲಕ್ಷ ಪುಸ್ತಕಗಳಿವೆ. 1,832 ಓದುಗರು ನೋಂದಾಯಿತರಾಗಿದ್ದಾರೆ. ಇದರ ಜೊತೆಗೆ ಶಾಲೆ– ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡವರು ಬಂದಾಗ ಇಕ್ಕಟ್ಟಾದ ಕಟ್ಟಡದಲ್ಲಿಯೇ ಪುಸ್ತಕಗಳನ್ನು ಓದುವ ಸ್ಥಿತಿ ಬಂದೊದಗಿದೆ.

ಸಾರ್ವಜನಿಕ ಗ್ರಂಥಾಲಯವಿರುವ ಕಟ್ಟಡ 7ರಿಂದ 8 ದಶಕಗಳಷ್ಟು ಹಳೆಯದಾಗಿದ್ದು, ಚಾವಣಿ ಶಿಥಿಲಗೊಂಡಿದೆ. ಮಳೆ ಬಂದರೆ ನೀರು ಗ್ರಂಥಾಲಯದ ಒಳಭಾಗದಲ್ಲಿ ಜಿನುಗುತ್ತಿದೆ. ಇದರಿಂದ ಕೆಲ ಪುಸ್ತಕಗಳು ಹಾಳಾಗುತ್ತಿವೆ. ಕುಳಿತುಕೊಂಡು ಓದಲು ಓದುಗರು ಹಿಂದೇಟು ಹಾಕುತ್ತಿದ್ದಾರೆ. ಹೊಸದಾಗಿ ಬರುವ ಪುಸ್ತಕಗಳನ್ನು ಜೋಡಿಸಲು ಜಾಗದ ಅನುಕೂಲವಿಲ್ಲದೆ ಮತ್ತು ಕಪಾಟುಗಳ ಕೊರತೆ ಇರುವುದರಿಂದ ಪ್ರತಿ ವರ್ಷ ಬರುವ ಪುಸ್ತಕಗಳು ಗಂಟು ಬಿಚ್ಚದೆ ಮೂಟೆಗಳಲ್ಲಿಯೇ ಉಳಿದಿವೆ. ಗ್ರಂಥಾಲಯದ ಕಟ್ಟಡ ಮಹಡಿಯ ಮೇಲೆ ಇರುವುದರಿಂದ ವೃದ್ಧರು ಪುಸ್ತಕ ಪಡೆದುಕೊಳ್ಳಲು ಮತ್ತು ಓದಲು ಕಷ್ಟಕರವಾಗಿದೆ.

ಗ್ರಂಥಾಲಯ ಕಟ್ಟಡ ಸುಣ್ಣ- ಬಣ್ಣ ಕಂಡು ಅದೆಷ್ಟೋ ವರ್ಷಗಳು ಕಳೆದಿವೆ. ಕಟ್ಟಡದಲ್ಲಿ ಗಾಳಿ, ಬೆಳಕು ಇಲ್ಲದೆ ಓದುಗರಿಗೆ ಉತ್ತಮ ವಾತಾವರಣ ಇಲ್ಲದಂತಾಗಿದೆ. ಶೌಚಾಲಯದ ವ್ಯವಸ್ಥೆ ಇಲ್ಲ. ಪಾರ್ಕಿಂಗ್, ಕುಡಿಯುವ ನೀರು, ಶೌಚಾಲಯ, ಗಾಳಿ, ಬೆಳಕು, ವ್ಯವಸ್ಥಿತ ಆಸನ ಇರಬೇಕೆಂಬ ನಿಯಮವಿದ್ದರೂ ಈ ಗ್ರಂಥಾಲಯದಲ್ಲಿ ಸರಿಯಾದ ವ್ಯವಸ್ಥೆಯೇ ಇಲ್ಲದಂತಾಗಿದೆ. ಈ ಕಟ್ಟಡದಲ್ಲಿ ವಿದ್ಯುತ್ ಇದ್ದಾಗ ಮಾತ್ರ ಪುಸ್ತಕಗಳನ್ನು ಓದಲು ಸಾಧ್ಯ. ಇಲ್ಲವಾದರೆ ಓದಲು ಬೆಳಕು ಇಲ್ಲದೆ ಕುಳಿತುಕೊಳ್ಳಲು ಕಷ್ಟವಾಗುತ್ತಿದೆ.

ಡಿಜಿಟಲ್ ಗ್ರಂಥಾಲಯಕ್ಕೆ ತಾಲ್ಲೂಕಿನಿಂದ 3,500 ಮಂದಿ ನೋಂದಣಿಯಾಗಿದ್ದಾರೆ. ಕತೆ, ಕಾದಂಬರಿ, ಕಲೆ, ಸಾಹಿತ್ಯ, ಸಂಸ್ಕೃತಿ, ಪಠ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಎಲ್ಲ ಬಗೆಯ ಪುಸ್ತಕಗಳು ಲಭ್ಯ ಇವೆ. ಈ ಗ್ರಂಥಾಲಯದಲ್ಲಿ ಎರಡು ಕಂಪ್ಯೂಟರ್, ಯುಪಿಎಸ್ ಹಾಗೂ ಇಂಟರ್ನೆಟ್ ಸೌಲಭ್ಯ ಕೆಲವೇ ತಿಂಗಳು ಮಾತ್ರ ಓದುಗರಿಗೆ ಉಪಯುಕ್ತವಾಯಿತು. ನಂತರ ದಿನಗಳಲ್ಲಿ ಯುಪಿಎಸ್ ಕೆಟ್ಟು ಹೋಗಿ ಹಲವು ವರ್ಷ ಕಳೆದರೂ ದುರಸ್ತಿಯಾಗಿಲ್ಲ. ಇಂಟರ್ನೆಟ್ ವ್ಯವಸ್ಥೆ ಇಲ್ಲದೆ ಎರಡು ಕಂಪ್ಯೂಟರ್ ಮೂಲೆ ಸೇರಿವೆ.

‘ಕಾಲೇಜು ಮುಗಿಸಿ ಗ್ರಂಥಾಲಯಕ್ಕೆ ಬರುವಷ್ಟರಲ್ಲಿ ಬಹುತೇಕ ಎಲ್ಲ ಆಸನಗಳೂ ಭರ್ತಿಯಾಗಿರುತ್ತವೆ. ಅವರು ಆಸನದಿಂದ ಎದ್ದ ಮೇಲೆ ನಮಗೆ ಅವಕಾಶ ದೊರೆಯುತ್ತಿದೆ. ಅಲ್ಲಿಯವರೆಗೂ ಕಾಯಬೇಕು. ಇಲ್ಲವಾದರೆ ನಿಂತುಕೊಂಡು ಓದಬೇಕು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ನಾಗೇಶ್ ಅಳಲು ತೋಡಿಕೊಂಡರು.

ತಾಲ್ಲೂಕಿನ ಲಕ್ಷಾಂತರ ಮಂದಿ ಈ ಗ್ರಂಥಾಲಯದಲ್ಲಿ ಜ್ಞಾನ ವೃದ್ಧಿಸಿಕೊಂಡು ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸಾವಿರಾರು ಮಂದಿಗೆ ಈ ಗ್ರಂಥಾಲಯ ದಾರಿ ದೀಪವಾಗಿದೆ. ಕಣ್ಮುಂದೆಯೇ ಮೂಲಸೌಕರ್ಯ ಇಲ್ಲದೆ ಸೊರಗುತ್ತಿರುವುದು ನೋವು ತಂದಿದೆ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಎಂಟು ದಶಕದಿಂದ ಸ್ವಂತ ಕಟ್ಟಡವಿಲ್ಲದೆ ಪುರಸಭೆಯಿಂದ ಉಚಿತವಾಗಿ ನೀಡಿರುವ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ಥಳ ತುಂಬಾ ಚಿಕ್ಕದಾಗಿರುವುದರಿಂದ ಆಸನ ಮತ್ತು ಪುಸ್ತಗಳನ್ನು ಜೋಡಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ವಂತ ಕಟ್ಟಡದ ಕನಸು ಹಲವು ದಶಕಗಳಿಂದ ಕನಸಾಗಿಯೇ ಉಳಿದಿದೆ.

ಗ್ರಂಥಾಲಯಕ್ಕೆ ನಿವೇಶನ ನೀಡುವಂತೆ 2021ರಲ್ಲಿ ಅಂದಿನ ಶಾಸಕ, ಉಪವಿಭಾಗಾಧಿಕಾರಿ, ತಹಶೀಲ್ದಾರ್, ಪುರಸಭೆ ಅಧಿಕಾರಿಗಳಿಗೆ ಮನವಿ ಪತ್ರ ನೀಡಲಾಗಿದೆ ಎನ್ನುತ್ತಾರೆ ಗ್ರಂಥಾಲಯ ಸಹಾಯಕಿ ಮಹಾಲಕ್ಷ್ಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.