ತುಮಕೂರು: ಎಐಡಿಎಸ್‌ಒ ಸಂಘಟನೆಯಿಂದ ನಗರದ ವಿವಿಧೆಡೆ ಶನಿವಾರ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‌ಸಿಂಗ್, ಸುಖ್‌ದೇವ್ ಹಾಗೂ ರಾಜ್‌ಗುರು ಅವರ ಹುತಾತ್ಮ ದಿನ ಆಚರಿಸಲಾಯಿತು.

ಬ್ರಿಟಿಷರ ದಬ್ಬಾಳಿಕೆ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ರಾಜಿ ರಹಿತವಾಗಿ ಹೋರಾಡಿ ನಗುನಗುತ್ತಾ ಗಲ್ಲಿಗೇರಿದ ಮಹಾನ್ ಕ್ರಾಂತಿಕಾರಿಗಳು. ‘ಜನತೆಗೆ ಸ್ವಾತಂತ್ರ್ಯ ತಂದು ಕೊಡುವ, ಮಾನವನಿಂದ ಮಾನವನ ಶೋಷಣೆ ಅಸಾಧ್ಯಗೊಳಿಸುವ ಕ್ರಾಂತಿಯ ಸಂದೇಶವನ್ನು ದೇಶದ ಮೂಲೆ ಮೂಲೆಗೂ ಒಯ್ಯುವಂತೆ ಭಗತ್‌ಸಿಂಗ್ ಹೇಳಿದ್ದರು’ ಎಂದು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಸ್ಮರಿಸಿದರು.

ವಿದ್ಯಾರ್ಥಿಗಳು ಹಾಗೂ ಯುವ ಜನರು ಭಗತ್ ಸಿಂಗ್ ಹಾದಿಯಲ್ಲಿ ಸಾಗಬೇಕಿದೆ. ಬಂಡವಾಳಶಾಹಿ ಶೋಷಣೆಗೆ ಮುಕ್ತಾಯ ಹಾಡಲು ಸಮಾಜವಾದಿ ಕ್ರಾಂತಿ ಅನಿವಾರ್ಯ. ಭಗತ್ ಸಿಂಗ್ ವಿಚಾರಗಳು ಇಂದಿಗೂ ಪ್ರಸ್ತುತವಾಗಿದೆ. ಹಸಿವು, ಬಡತನ, ನಿರುದ್ಯೋಗ ಇಲ್ಲದ ಸಮಾಜವಾದಿ ಭಾರತ ನಿರ್ಮಾಣ ಅವರ ಕನಸಾಗಿತ್ತು. ಅದನ್ನು ನನಸಾಗಿಸುವ ದಾರಿಯಲ್ಲಿ ವಿದ್ಯಾರ್ಥಿಗಳು, ಯುವ ಜನರು ಮುನ್ನಡೆಯಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.