ತುಮಕೂರು: ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಆಯ್ಕೆಯನ್ನು ಅಸಿಂಧುಗೊಳಿಸಿದ್ದ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ದಾರಿ ಸುಗಮವಾದಂತಾಗಿದೆ.

ಸದ್ಯದ ಮಟ್ಟಿಗೆ ಪಾರಾಗಿರಬಹುದು. ಆದರೆ ಮುಂದೆ ಕಾದು ನೋಡಬೇಕಾದ ಆತಂಕದ ಪರಿಸ್ಥಿತಿ ಎದುರಾಗಿದೆ. ತಡೆಯಾಜ್ಞೆ ಸಿಗದಿದ್ದರೆ ಮುಂದೆ ಏನು ಮಾಡಬೇಕು ಎಂದು ಎರಡು ವಾರದಿಂದ ಗೊಂದಲದಲ್ಲಿ ಸಿಲುಕಿದ್ದ ಗೌರಿಶಂಕರ್ ಈಗ ನಿರಾಳರಾಗಿದ್ದಾರೆ. ‘ಗ್ರಾಮಾಂತರ ಕ್ಷೇತ್ರದಿಂದ ನಾನೇ ಸ್ಪರ್ಧಿಸುತ್ತೇನೆ’ ಎಂದು ಕೋರ್ಟ್ ತೀರ್ಪಿನ ನಂತರ ಪ್ರತಿಕ್ರಿಯಿಸಿದ್ದಾರೆ.

ಶಾಸಕ ಸ್ಥಾನದಿಂದ ಹೈ ಕೋರ್ಟ್ ಅನೂರ್ಜಿತಗೊಳಿಸಿದ ನಂತರ ಮತ್ತೆ ಸ್ಪರ್ಧಿಸಲು ದಾರಿ ಕಾಣದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಕೋರ್ಟ್ನಿಂದ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ತನ್ನ ಮುಂದಿನ ಆದೇಶಕ್ಕೆ ಬದ್ಧರಾಗಿರಬೇಕು, ಮುಖ್ಯಮಂತ್ರಿ ಆಯ್ಕೆ ಸಮಯದಲ್ಲಿ ಮತದಾನ ಮಾಡಲು ಅನುಮತಿ ಪಡೆಯಬೇಕು ಎಂಬ ಷರತ್ತು ವಿಧಿಸಲಾಗಿದೆ.

‘2018ರ ಚುನಾವಣೆ ಸಮಯದಲ್ಲಿ ಶಾಲಾ ಮಕ್ಕಳು, ಪೋಷಕರಿಗೆ ನಕಲಿ ವಿಮಾ ಬಾಂಡ್ ಹಂಚಿಕೆಮಾಡಿ ಮತದಾರರನ್ನು ವಂಚಿಸಿ ಮತಪಡೆದು ಆಯ್ಕೆ ಆಗಿದ್ದಾರೆ. ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕು’ ಎಂದು ಕೋರಿ ಗೌರಿಶಂಕರ್ ಎದುರು ಪರಾಭವಗೊಂಡಿದ್ದ ಬಿ.ಸುರೇಶ್ಗೌಡ ಕೋರ್ಟ್ ಮೆಟ್ಟಿಲೇರಿದ್ದರು.

ಕೋರ್ಟ್ ಆದೇಶದಿಂದ ತಾತ್ಕಾಲಿಕವಾಗಿ ಪರಿಹಾರ ಸಿಕ್ಕಂತಾಗಿದ್ದರೂ ತೂಗುಗತ್ತಿ ನೇತಾಡುತ್ತಲೇ ಇದೆ. ಮುಂದೆ ವಿಚಾರಣೆ ನಡೆದು ಗೌರಿಶಂಕರ್ ಪರವಾಗಿ ತೀರ್ಪು ಬಂದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಒಂದು ವೇಳೆ ಆಯ್ಕೆಯನ್ನು ಪ್ರಶ್ನಿಸಿರುವ ಎದುರಾಳಿ ಬಿಜೆಪಿಯ ಬಿ.ಸುರೇಶ್ಗೌಡ ಪರವಾಗಿ ಬಂದರೆ ಸಂಕಷ್ಟ ಎದುರಾಗಲಿದೆ. ಹೈ ಕೋರ್ಟ್ ಆದೇಶವನ್ನೇ ‘ಸುಪ್ರೀಂ’ ಎತ್ತಿಹಿಡಿದ ಸಮಯದಲ್ಲಿ ಯಾರು ಶಾಸಕರಾಗಿರುತ್ತಾರೆ ಎಂಬುದರ ಮೇಲೆ ಇದರ ಪರಿಣಾಮ ಎದುರಿಸಬೇಕಾಗುತ್ತದೆ.

ಈ ಬಾರಿಯ ಚುನಾವಣೆಯಲ್ಲಿ ಒಂದು ವೇಳೆ ಗೌರಿಶಂಕರ್ ಆಯ್ಕೆಯಾದರೆ ಶಾಸಕ ಸ್ಥಾನ ಕಳೆದುಕೊಳ್ಳುವುದರ ಜತೆಗೆ ಆರು ವರ್ಷ ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ಕಳೆದುಕೊಳ್ಳುತ್ತಾರೆ. ಆಗ ಉಪಚುನಾವಣೆ ಬರಲಿದೆ. 2028ರ ಚುನಾವಣೆಯಲ್ಲೂ ಅವರು ಸ್ಪರ್ಧಿಸುವಂತಿಲ್ಲ. ಒಂದು ವೇಳೆ ಸುರೇಶ್ಗೌಡ ಆಯ್ಕೆಯಾಗಿದ್ದರೆ ಅವರು ಶಾಸಕರಾಗಿ ಮುಂದುವರಿಯುತ್ತಾರೆ. ಆಗ ಉಪಚುನಾವಣೆ ನಡೆಯುವುದು ತಪ್ಪುತ್ತದೆ.

ಹೈ ಕೋರ್ಟ್ ತೀರ್ಪಿನ ನಂತರ ಗೌರಿಶಂಕರ್ ತಮ್ಮ ಪತ್ನಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದರು. ಈಗ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಶಾಸಕರೇ ಸ್ಪರ್ಧೆಗೆ ಮುಂದಾಗಿದ್ದಾರೆ. ಮುಂದೆ ನ್ಯಾಯಾಲಯದ ತೀರ್ಪಿನ ನಂತರ ನಿರ್ಧಾರ ತೆಗೆದುಕೊಂಡರಾಯಿತು. ಕೋರ್ಟ್ನಲ್ಲಿ ಒಂದಷ್ಟು ವರ್ಷಗಳ ಕಾಲವಾದರೂ ವಿಚಾರಣೆ ನಡೆಯುವಂತೆ ನೋಡಿಕೊಳ್ಳಬಹುದು. ಅಲ್ಲಿಯವರೆಗಾದರೂ ರಾಜಕಾರಣದಲ್ಲಿ ಮುಂದುವರಿಯಬಹುದು. ಇದ್ದಷ್ಟು ದಿನ ರಾಜಕಾರಣ ಮಾಡೋಣ ಎಂಬ ಲೆಕ್ಕಾಚಾರ ನಡೆಸಿದ್ದಾರೆ ಎನ್ನಲಾಗಿದೆ.

ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರಾದ ಗ್ರಾಮಾಂತರ ಕ್ಷೇತ್ರ ಈಗ ಮತ್ತಷ್ಟು ರಂಗೇರಲಿದೆ. ಬಿಜೆಪಿಯಿಂದ ಸುರೇಶ್ಗೌಡ ಹಾಗೂ ಜೆಡಿಎಸ್ನಿಂದ ಗೌರಿಶಂಕರ್ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ. ಇಬ್ಬರೂ ನಗರದಲ್ಲಿ ಮೆರವಣಿಗೆ ನಡೆಸಿ ತಮ್ಮ ಶಕ್ತಿ ಪ್ರದರ್ಶಿಸುವ ಮೂಲಕ ನಾಮಪತ್ರ ಸಲ್ಲಿಸಲಿದ್ದಾರೆ. ಇಬ್ಬರ ನಡುವೆ ಹಣಾಹಣಿ ನಡೆಯಲಿದೆ.

‘ನಾನೇ ಸ್ಪರ್ಧಿಸುತ್ತೇನೆ’

ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ನಾನೇ ಚುನಾವಣೆಗೆ ಸ್ಪರ್ಧಿಸುತ್ತೇನೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನ್ಯಾಯಾಲಯ ಹಾಗೂ ರಾಜಕೀಯವಾಗಿಯೂ ಹೋರಾಟ ಮುಂದುವರಿಯಲಿದೆ ಎಂದು ಡಿ.ಸಿ.ಗೌರಿಶಂಕರ್ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.