ತುಮಕೂರು: ಜಿಲ್ಲೆಯಲ್ಲಿ ಏ.1ರಿಂದ ಇದುವರೆಗೆ ಕೊಬ್ಬರಿ ಮಾರಾಟ ಮಾಡಿದ 12,262 ರೈತರ ಖಾತೆಗಳಿಗೆ ₹180.2 ಕೋಟಿ ಪಾವತಿಸಲಾಗಿದೆ ಎಂದು ಕೃಷಿ ಮಾರಾಟ ಇಲಾಖೆ ಉಪ ನಿರ್ದೇಶಕ ಬಿ.ರಾಜಣ್ಣ ತಿಳಿಸಿದ್ದಾರೆ.

ಜಿಲ್ಲೆಯ 26 ಕೊಬ್ಬರಿ ಖರೀದಿ ಕೇಂದ್ರಗಳಿಂದ ಇದುವರೆಗೆ ಶೇ 78ರಷ್ಟು ಕೊಬ್ಬರಿ ಖರೀದಿಯಾಗಿದೆ. ರಾಜ್ಯ ಸರ್ಕಾರದಿಂದ ಕೃಷಿ ಮಾರಾಟ ಇಲಾಖೆ ಮತ್ತು ರಾಜ್ಯ ಮಾರಾಟ ಮಂಡಳಿಗೆ ₹400 ಕೋಟಿ ಬಿಡುಗಡೆಯಾಗಿದೆ. ಬಾಕಿ ಉಳಿದ ರೈತರಿಗೆ ಡಿಬಿಟಿ ಮೂಲಕ ಶೀಘ್ರವಾಗಿ ಹಣ ಪಾವತಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದಿರುವ ಕಾರಣ 130 ರೈತರಿಗೆ ಕೊಬ್ಬರಿ ಖರೀದಿ ಹಣ ಬಾಕಿ ಉಳಿದಿದೆ. ರೈತರ ವಿವರ ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ಪ್ರದರ್ಶಿಸಲಾಗಿದೆ. ರೈತರು ಬ್ಯಾಂಕ್ಗೆ ತೆರಳಿ ಆಧಾರ್ ಜೋಡಣೆ ಮಾಡಿಸಿದರೆ ಹಣ ಪಾವತಿಯಾಗುತ್ತದೆ ಎಂದು ಹೇಳಿದ್ದಾರೆ.

ಕೊಬ್ಬರಿ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆ ಇದ್ದಲ್ಲಿ ಸಹಾಯವಾಣಿ 180–04251552 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.