ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೇಲನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಾಗಿಲ ದುಸ್ಥಿತಿ
ವಸತಿ ಗೃಹ ಸಮಸ್ಯೆ:
ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ 13 ವಸತಿಗೃಹಗಳಿರಬೇಕಿತ್ತು. ಆದರೆ, ಅಲ್ಲಿ ನಿರ್ಮಿಸಿರುವುದು 6 ಮಾತ್ರ. ಅವೂ ಸೋರುತ್ತವೆ ಎನ್ನುತ್ತಾರೆ ಶಿಕ್ಷಕರು. ಮುಖ್ಯ ರಸ್ತೆಯಿಂದ ವಸತಿ ಶಾಲೆವರೆಗೂ ರಸ್ತೆ ಸರಿಯಾಗಿಲ್ಲ. ಅಲ್ಲಿ ಡಾಂಬರ್ ರಸ್ತೆ ನಿರ್ಮಿಸಬೇಕು ಎಂಬ ಒತ್ತಾಯವಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೇಲನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೊಠಡಿಯಲ್ಲಿ ಮಳೆ ನೀರು ಸೋರಿ ಗೋಡೆ ಹಾಳಾಗಿದೆ
ಬಹುತೇಕ ಶಾಲೆಗಳಲ್ಲಿ ಸಮಸ್ಯೆ
ಅನುದಾನದ ಕೊರತೆಯಿಂದ ರಾಜ್ಯದ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡಗಳ ನಿರ್ವಹಣೆ ದುಸ್ಥಿತಿ ತಲುಪಿವೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಪರಿಶಿಷ್ಟ ಜಾತಿ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಇಲಾಖೆಗಳಿಂದ ಅಗತ್ಯ ಅನುದಾನ ದೊರೆತು ಆಯಾ ವಸತಿ ಶಾಲೆಗಳ ಕಟ್ಟಡ ನಿರ್ವಹಣೆಯಲ್ಲಿ ಸಮಸ್ಯೆಯಾಗಿಲ್ಲ. ಆದರೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಸಂಘಕ್ಕೆ ಅನುದಾನ ಬಿಡುಗಡೆಯಾಗದೆ ಆ ವರ್ಗದ ಜಿಲ್ಲೆಯ 9 ಸೇರಿ ರಾಜ್ಯದ ಹಲವು ಶಾಲೆಗಳು ಸಮಸ್ಯೆ ಎದುರಿಸುತ್ತಿವೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೇಲನಹಳ್ಳಿಯಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕೊಠಡಿಯಲ್ಲಿ ಮಳೆನೀರು ಸೋರಿ ತಾರಸಿಯ ಒಳಭಾಗ ಹಾಳಾಗಿದೆ.
ಉತ್ತಮ ಫಲಿತಾಂಶ
ತುಮಕೂರು ಜಿಲ್ಲೆಯ ವಸತಿ ಶಾಲೆಗಳ ಪೈಕಿ ಮೇಲನಹಳ್ಳಿ ಮೊರಾರ್ಜಿ ವಸತಿ ಶಾಲೆ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ನೀಡಿ ಗಮನ ಸೆಳೆದಿದೆ. ಪ್ರತಿ ವರ್ಷ ಶೇ 100ರಷ್ಟು ಫಲಿತಾಂಶ ನೀಡುವುದರೊಂದಿಗೆ ಪ್ರತಿ ವಿದ್ಯಾರ್ಥಿಯ ಅಂಕಗಳು ಶೇ 70 ದಾಟುತ್ತವೆ. 2015ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ದೃವಿಕಾ ರಾಜ್ಯಕ್ಕೆ 5ನೇ ಟಾಪರ್ ಆಗಿದ್ದಳು. ಈ ವರ್ಷ ಇಬ್ಬರು ತಲಾ 620 ಅಂಕ ಪಡೆದು ತಾಲ್ಲೂಕಿಗೆ ಪ್ರಥಮರಾಗಿದ್ದಾರೆ.