ಕೊರಟಗೆರೆ: ತಾಲ್ಲೂಕಿನ ಬಜ್ಜನಹಳ್ಳಿ ಬಳಿಯ ಏಕಲವ್ಯ ವಸತಿ ಶಾಲೆಯಲ್ಲಿ ಸೋಮವಾರ 8ನೇ ತರಗತಿ ವಿದ್ಯಾರ್ಥಿ ಅಭಿಲಾಷ್ (14) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಅಭಿಲಾಷ್ ತಾಲ್ಲೂಕಿನ ಶಕುನಿತಿಮ್ಮನಹಳ್ಳಿ ನಿವಾಸಿ. ಇದ್ದಕಿದ್ದಂತೆ ಸಾವನ್ನಪ್ಪಿದ್ದು, ಯಾವ ಕಾರಣಕ್ಕೆ ಹೀಗಾಯಿತು, ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇತ್ತೆ? ಎಂಬುವುದು ಮರಣೋತ್ತರ ಪರೀಕ್ಷೆಯಿಂದ ತಿಳಿಯಬೇಕಿದೆ. ಪೊಲೀಸರು ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಭಿಲಾಷ್ ಮಲಗುತ್ತಿದ್ದ ಜಾಗ, ಊಟದ ಸಭಾಂಗಣ ಎಲ್ಲವನ್ನು ವೀಕ್ಷಿಸಿದರು.

ಮುಗಿಲು ಮುಟ್ಟಿದ ಆಕ್ರಂದನ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಬಳಿ ಅಭಿಲಾಷ್ ತಂದೆ ರಮೇಶ, ತಾಯಿ ಮಂಜುಳಾ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇದ್ದ ಒಬ್ಬ ಮಗನನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದ ರಮೇಶ ದಂಪತಿಯನ್ನು ಸಮಾಧಾನ ಪಡಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ವಿದ್ಯಾವಂತನನ್ನಾಗಿ ರೂಪಿಸಬೇಕು ಎಂದು ವಸತಿ ಶಾಲೆಗೆ ಸೇರಿಸಿದ್ದರು. ಅವರ ಕನಸು ಪ್ರಾರಂಭದಲ್ಲೇ ನುಚ್ಚು ನೂರಾಗಿದೆ. ಬದುಕಿನ ಭರವಸೆ ಕಳೆದುಕೊಂಡು ಗೋಳಿಡುತ್ತಿದ್ದ ದೃಶ್ಯಗಳು ನೆರೆದವರ ಕಣ್ಣಲ್ಲಿ ನೀರು ಜಿನಿಗಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.