ಪ್ರಜಾವಾಣಿ ವಾರ್ತೆ

ತುಮಕೂರು: ಪ್ರಸ್ತುತ ನಾವು ಧಾರ್ಮಿಕ ಸಂಕಷ್ಟದ ಕಾಲದಲ್ಲಿ ಇದ್ದೇವೆ. ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಸ್ವಾಮೀಜಿಗಳ ಪಾತ್ರ ಪ್ರಮುಖವಾದದ್ದು ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಚಿಕ್ಕತೊಟ್ಲುಕೆರೆ ಮಠದಲ್ಲಿ ಭಾನುವಾರ ಅಟವಿ ಸ್ವಾಮೀಜಿ ಸ್ಮರಣೋತ್ಸವ, ಅಟವಿ ಶಿವಲಿಂಗ ಸ್ವಾಮೀಜಿ ಪೀಠಾರೋಹಣದ ರಜತ ಮಹೋತ್ಸವ, ಅಟವಿ ಮಠದ ಉತ್ತರಾಧಿಕಾರಿಯ ಪಟ್ಟಾಧಿಕಾರ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮ ಸಭೆಯಲ್ಲಿ ಮಾತನಾಡಿದರು.

ಈಗ ತ್ರಿಕಾಲ ಪೂಜೆ ಮಾಡುವವರಿಲ್ಲ, ಕನಿಷ್ಠ ವಾರಕ್ಕೊಮ್ಮೆ ಸಾಮೂಹಿಕ ಶಿವಪೂಜೆ ಮಾಡಬೇಕು. ಮಠಗಳಲ್ಲಿ ಪೂಜೆಗೆ ವ್ಯವಸ್ಥೆ ಕಲ್ಪಿಸಬೇಕು. ನಮ್ಮ ಆಚಾರ, ವಿಚಾರ, ಸಂಪ್ರದಾಯ, ಪರಂಪರೆ ಉಳಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ಮಾಡಿದರು.

ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ, ‘ಹಸಿದವರಿಗೆ ಅನ್ನ, ಜ್ಞಾನ ನೀಡುವುದು ಮಠಗಳ ಪರಂಪರೆ. ಮಠಗಳು ಕೇವಲ ಧಾರ್ಮಿಕ ಕೇಂದ್ರವಾಗಿಲ್ಲ, ಸಮಾಜ ಸೇವಾ ಕೇಂದ್ರಗಳಾಗಿಯೂ ಗುರುತಿಸಿಕೊಂಡಿವೆ. ನಾಡಿನ ಅಂತರಂಗ-ಬಹಿರಂಗ ಕಟ್ಟುವಲ್ಲಿ ಕ್ರಿಯಾಶೀಲವಾಗಿವೆ’ ಎಂದರು.

ಅಟವಿ ಶಿವಲಿಂಗ ಸ್ವಾಮೀಜಿ, ‘ಈಗಿನ ಯುವ ಸಮೂಹಕ್ಕೆ ಧರ್ಮ ಶ್ರದ್ಧೆ ಕಡಿಮೆಯಾಗಿದೆ. ನಮ್ಮ ಆಚಾರ–ವಿಚಾರ ಮರೆಯುತ್ತಿದ್ದಾರೆ. ಹಿರಿಯರು ನಮ್ಮ ಪದ್ಧತಿ, ಸಂಸ್ಕಾರ, ಪರಂಪರೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕು. ಸ್ವಾಮೀಜಿಗಳು ಭಕ್ತರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು’ ಎಂದು ತಿಳಿಸಿದರು.

ಸಾಸನೂರು ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಅರಕೆರೆ ಮಠದ ಶಿವಲಿಂಗ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರ ಬಸವ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಗುಡ್ಡದ ಆನ್ವೇರಿ ಮಠದ ಶಿವಯೋಗೀಶ್ವರ ಸ್ವಾಮೀಜಿ, ನಗರ ವೀರಶೈವ ಸಮಾಜ ಅಧ್ಯಕ್ಷ ಟಿ.ಬಿ.ಶೇಖರ್, ಮಠದ ಆಡಳಿತ ಮಂಡಳಿ ಟ್ರಸ್ಟಿಗಳಾದ ಸಿ.ಮಹದೇವಪ್ಪ, ಬೆಟ್ಟಯ್ಯ, ರವಿಶಂಕರ್, ಮುಖಂಡರಾದ ಕೋರಿ ಮಂಜುನಾಥ್, ಟಿ.ಸಿ.ಓಹಿಲೇಶ್ವರ್ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.