ಬೈಂದೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಾಕಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆ (ಜಾಕಿ ಕ್ರಿಯೇಷನ್) ತಮಿಳುನಾಡಿನ ಮಯಿಲಾಡುತುರೈ ಜಿಲ್ಲೆಯಲ್ಲಿ ಆಯೋ ಜಿಸಿದ್ದ ರಂಗೋಲಿಯಲ್ಲಿ ರಾಷ್ಟ್ರಧ್ವಜ ಬಿಡಿಸುವ ಸ್ಪರ್ಧೆಯಲ್ಲಿ ಇಲ್ಲಿನ ಡಾ. ಭಾರತಿ ಮರವಂತೆ ಗಮನಾರ್ಹ ಸಾಧನೆ ಮಾಡಿದ್ದಾರೆ. 76 ನಿಮಿಷಗಳಲ್ಲಿ 76 ಧ್ವಜಗಳನ್ನು ಸೃಷ್ಟಿಸಿದ್ದಾರೆ. ಜಾಕಿ ಬುಕ್ ಆಫ್ ವರ್ಡ್ ರೆಕಾರ್ಡ್ ಸಂಸ್ಥೆಯವರು ಪ್ರಮಾಣಪತ್ರ, ಬ್ಯಾಡ್ಜ್, ಟ್ರೋಫಿ, ಪದಕ, ಟಿ ಶರ್ಟ್ ನೀಡಿ ಭಾರತಿಯವರನ್ನು ಗೌರವಿಸಿದ್ದಾರೆ.

ಬೈಂದೂರು ತಾಲ್ಲೂಕಿನ ಮರವಂತೆಯ ಭಾರತಿ ಅವರು ‘ಕರಾವಳಿ ಕರ್ನಾಟಕದ ರಂಗೋಲಿ ಕಲೆ’ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ರಂಗೋಲಿ ಕಲಾಪರಿಷತ್ತಿನ ಸಂಸ್ಥಾಪಕರಾಗಿ, ರಂಗೋಲಿ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.