ರೈತರು ಎರಡರಿಂದ ಮೂರು ವರ್ಷಗಳಿಗೊಮ್ಮೆ ತಮ್ಮ ಕೃಷಿ ಜಮೀನಿನ ಮಣ್ಣು ಪರೀಕ್ಷೆ ನಡೆಸಬೇಕು. ಇದರಿಂದ ಮಣ್ಣಿನ ಆರೋಗ್ಯ ಕಾಪಾಡಬಹುದು. ಮತ್ತು ಬೆಳೆಗಳಿಂದ ಗುಣಮಟ್ಟದ ಮತ್ತುಉತ್ತಮ ಇಳುವರಿ ಪಡೆಯಬಹುದು.
-ರಾಜೇಶ್ ಡಿ.ಪಿ. ಉಪ ಯೋಜನಾ ನಿರ್ದೇಶಕ (ಆತ್ಮ) ಕೃಷಿ ಇಲಾಖೆ
ಏಕದಳ ಬೆಳೆ ಬೆಳೆದ ಬಳಿಕ ದ್ವಿದಳ ಬೆಳೆ ಬೆಳೆಯಬೇಕು. ಇದರಿಂದ ಮಣ್ಣಿನ ಫಲವತ್ತತೆ ನಷ್ಟವಾಗುವುದಿಲ್ಲ. ಜಿಲ್ಲೆಯಲ್ಲಿ ಭತ್ತದ ಬೆಳೆಯುತ್ತಿರುವುದರಿಂದ ಭತ್ತ ಬೆಳೆದ ಬಳಿಕ ಆ ಗದ್ದೆಗಳಲ್ಲಿ ತರಕಾರಿ ಕೃಷಿ ಮಾಡಬೇಕು.
-ಜಯಪ್ರಕಾಶ್, ವಿಜ್ಞಾನಿ ಬ್ರಹ್ಮಾವರದ ಕೆ.ವಿ.ಕೆ
ವಿದ್ಯಾರ್ಥಿಗಳು ಕೆಲವು ಕಡೆಗಳಿಂದ ಮಣ್ಣಿನ ಮಾದರಿ ಸಂಗ್ರಹಿಸಿದ್ದಾರೆ. ಹಲವು ಮಂದಿ ರೈತರ ಮಾಹಿತಿಯನ್ನೂ ಸಂಗ್ರಹಿಸಿದ್ದಾರೆ. ಮಳೆ ಕಡಿಮೆಯಾಗಿ ಮಣ್ಣಿನ ತೇವಾಂಶ ಕಡಿಮೆಯಾದಾಗ ಇನ್ನಷ್ಟು ಪ್ರದೇಶಗಳಿಂದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು.