ಕಾರವಾರ: ಗಂಗಾವಳಿ ನದಿಯ ಅಳಿವೆ ಪ್ರದೇಶವಾದ ಗಂಗೆಕೊಳ್ಳದಲ್ಲಿ ಮಂಗಳವಾರ ನಸುಕಿನ ಜಾವ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ.

ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದ ಬಳಿಕ ಗಂಗಾವಳಿ ನದಿಯಲ್ಲಿ ಸೃಷ್ಟಿಯಾದ ಪ್ರವಾಹದಿಂದ ಕಣ್ಮರೆಯಾಗಿದ್ದ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಅವರ ಮೃತದೇಹ ಇದು ಎಂದು ಪೊಲೀಸರು ಶಂಕಿಸಿದ್ದಾರೆ.

'ಮಹಿಳೆ ಧರಿಸಿದ್ದ ಬಳೆ ಗುರುತು ಆಧರಿಸಿ ಸಣ್ಣಿ ಅವರದ್ದೇ ಮೃತದೇಹ ಇದು ಎಂದು ಗುರುತಿಸಲಾಗಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ಎಂಟಕ್ಕೆ ಏರಿಕೆಯಾದಂತಾಗಿದ್ದು, ಮಹಿಳೆಯ ಮೃತದೇಹದ ಕುರಿತು ಜಿಲ್ಲಾಡಳಿತ ಇನ್ನಷ್ಟೆ ಮಾಹಿತಿ ಖಚಿತಪಡಿಸಬೇಕಿದೆ.
.ಶಿರೂರು ಗುಡ್ಡ ಕುಸಿತ ದುರಂತ: ಏಳಕ್ಕೇರಿದ ಸಾವಿನ ಸಂಖ್ಯೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.