ಮೋಹನ ನಾಯ್ಕ

ಭಟ್ಕಳ: ತಾಲ್ಲೂಕಿನ ಹಾಡವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಂದೂರು ಗ್ರಾಮದಲ್ಲಿ ಇರುವ ಬಸವಬಾಯಿ ಗಣಪತಿ ದೇವಸ್ಥಾನ ಪುರಾಣ ಪ್ರಸಿದ್ಧ. ಜತೆಗೆ ಸುಂದರ ರಮಣೀಯ ತಾಣಗಳಲ್ಲಿ ಒಂದೆನಿಸಿದೆ.

ನೆಲದಿಂದ 110 ಅಡಿ ಎತ್ತರದಲ್ಲಿರುವ ಈ ದೇವಸ್ಥಾನಕ್ಕೆ ಹೋಗುವುದು ಒಂದು ಸಾಹಸವೇ ಆಗಿದೆ. ಸಾಗರ ರಸ್ತೆಯಲ್ಲಿ ಸಾಗಿ ಹಾಡುವಳ್ಳಿ ಬಳಿ ಕುರಂದೂರು ರಸ್ತೆಗೆ ತಿರುಗಿ ಅಲ್ಲಿಂದ ಮುಂದೆ 3.5 ಕೀ.ಮೀ ಸಾಗಿದರೆ ಅಲ್ಲಿಂದ ಎತ್ತರದ ಕಚ್ಚಾ ರಸ್ತೆ ಕಾಣಿಸುತ್ತದೆ. ಆ ರಸ್ತೆಯ ಮೂಲಕ ಸರಿಸುಮಾರು 3.5 ಕಿ.ಮೀ ಕಡಿದಾದ ರಸ್ತೆಯಲ್ಲಿ ಸಾಗಿದರೆ ಸಿಗುವುದೇ ಬಸವನಬಾಯಿ ಗಣಪತಿ ದೇವಸ್ಥಾನ.

ಈ ಪ್ರದೇಶಕ್ಕೆ ಸರ್ವಋತುವಿನಲ್ಲಿ ಭೇಟಿ ನೀಡಬಹುದಾಗಿದೆ. ತಂಪಾದ ವಾತಾವರಣ ವರ್ಷದ 24 ಘಂಟೆಯೂ ಬಸವನ ಬಾಯಿಯಿಂದ ಹರಿದು ಬರುವ ನೀರು, ಸುಂದರ ಪ್ರಕೃತಿ ಸೌಂದರ್ಯ ಪರಿಸರ ಪ್ರೇಮಿಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಮಳೆಗಾಲದಲ್ಲಿ ಚಾರಣ ಮಾಡಲು ಈ ಪ್ರದೇಶ ಉತ್ತಮವಾಗಿದ್ದು, ಅಲ್ಲಿಂದ 1 ಕಿ.ಮೀ ದೂರ ಸಾಗಿದರೆ ಪುರಾಣ ಪ್ರಸಿದ್ಧ ಹೊಗೆವಡ್ಡಿ ದೇವಸ್ಥಾನ ಕೂಡ ಕಾಣಬಹುದಾಗಿದೆ.

ಬಸವನಬಾಯಿ ಗಣಪತಿ ದೇವಸ್ಥಾನ ತುಂಬ ಶಕ್ತಿಶಾಲಿ ದೇವಸ್ಥಾನವಾಗಿದೆ. ಇಲ್ಲಿ ಬಂದು ಹರಕೆ ಹೊತ್ತು ಒಳಿತನ್ನು ಕಂಡವರು ಅನೇಕರಿದ್ದಾರೆ. ಮಳೆಗಾಲದಲ್ಲಿ ಈ ಭಾಗಕ್ಕೆ ಚಾರಣಕ್ಕೆ ಬರುವವರು ಹೆಚ್ಚು.
ಗಿರೀಶ ನಾಯ್ಕ, ಕುರಂದೂರು ನಿವಾಸಿ

1945ರಿಂದ ಇಲ್ಲಿನ ಗ್ರಾಮಸ್ಥರು ಈ ಮೂರ್ತಿಗೆ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ. 1973, 2000 ಹಾಗೂ 2006 ರಲ್ಲಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗಿತ್ತು. ಪ್ರತಿ ಸಂಕಷ್ಠ ಚತುರ್ಥಿ ಹಾಗೂ ಮಂಗಳವಾರದಂದು ಇಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಜನವರಿ ತಿಂಗಳಿನಲ್ಲಿ ವರ್ಧಂತಿ ಉತ್ಸವ ನಡೆಸಲಾಗುತ್ತದೆ. ಆ ಸಮಯದಲ್ಲಿ ಇಲ್ಲಿಗೆ ಪರ ಊರಿನ ನೂರಾರು ಭಕ್ತರು ಕಾಲ್ನಡಿಗೆಯ ಮೂಲಕ ಹತ್ತಿ ಬಂದು ದೇವರ ದರ್ಶನ ಮಾಡಿ ಹೋಗುತ್ತಾರೆ.

ಪ್ರಕೃತಿಯ ಸುಂದರ ಸೊಬಗನ್ನು ಹೊಂದಿರುವ ಈ ಪ್ರದೇಶಕ್ಕೆ ಸಾಗಲು ಪಕ್ಕಾ ರಸ್ತೆ ಅವಶ್ಯಕತೆ ಇದೆ. ಈ ರಸ್ತೆಯನ್ನು ಅಭಿವೃದ್ಧಿ ಪಡಿಸಿದರೆ ಸಾಗರ ರಸ್ತೆಯ ಮೂಲಕ ಸಾಗುವ 27 ಕಿ.ಮೀ ಕಡಿಮೆಯಾಗಿ ಸಾಗರ ಹಾಗೂ ಸಿಗಂದೂರು ಪ್ರದೇಶಗಳನ್ನು ಕೆಲವೇ ತಾಸುಗಳಲ್ಲಿ ತಲುಪಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.