ಶಿರಸಿ: ಕೃಷಿಕ ಹಾಗೂ ಪ್ರಕೃತಿಯ ಅವಿನಾಭಾವ ಸಂಬಂಧ ಪ್ರತಿಬಿಂಬಿಸುವ ಮಲೆನಾಡ ದೀಪಾವಳಿಯ ಭಾಗವಾಗಿ ಶಿರಸಿ ತಾಲ್ಲೂಕಿನ ಕಾಡಂಚುಗಳಲ್ಲಿ ಪ್ರತಿಷ್ಠಾಪಿಸಿರುವ 'ಹುಲಿ ದೇವರ ಪೂಜೆ'ಯನ್ನು ಶನಿವಾರ ಶ್ರದ್ಧಾಭಕ್ತಿಯ ನಡುವೆ ನೆರವೇರಿಸಲಾಯಿತು. ಮೇಯಲು ಹೋದ ದನ, ಕರುಗಳಿಗೆ ಅಪಾಯವಾಗದಿರಲಿ ಎಂಬ ಭಾವದೊಂದಿಗೆ ಈ ಆಚರಣೆ ನಡೆಯಿತು.

ದೀಪಾವಳಿಯ ಬೆಳಿಗ್ಗೆ ಸ್ನಾನಾಧಿ ನಿತ್ಯಕರ್ಮ ಪೂರೈಸಿದ ಕೃಷಿಕರು ಯಾವುದೇ ಆಹಾರ ಸೇವಿಸದೆ, ಹಿಂದಿನ ದಿನ ತಯಾರಿಸಿಟ್ಟ ಅಡಿಕೆ ಹಾರ, ಪುಂಡಿ ನಾರಿನ ದಾಬುಗಳ ಜತೆಗೆ ತೆಂಗಿನಕಾಯಿ, ಸಿಂಗಾರ, ಪಚ್ಚೆತೆನೆ, ಹಾಲು, ಆಗಷ್ಟೇ ಕಾಯಿಸಿ ಮಾಡಿದ ತುಪ್ಪ, ಪೂಜಾ ಪರಿಕರಗಳ ಜತೆ ಬರಿಗಾಲಲ್ಲಿ ಹುಲಿಯಪ್ಪನ ಸನ್ನಿಧಿಗೆ ತೆರಳಿದರು.

ಊರಿನ ಬಹುತೇಕ ಪುರುಷರು ಏಕಕಾಲದಲ್ಲಿ ಜತೆಗೂಡಿ ಹುಲಿಯಪ್ಪನ ಸನ್ನಿಧಾನಕ್ಕೆ ಆಗಮಿಸಿ ಅಲ್ಲಿ ಫಲಪುಷ್ಪ ಪೂಜೆ, ಧೂಪ ಪೂಜೆ, ಮಂತ್ರ ಪೂಜೆಯ ಜತೆ ಜಾಗಟೆ ಪೂಜೆಯನ್ನು ನೆರವೇರಿಸಿದರು. ಭಕ್ತಿಯ ಪೂಜೆ ನೋಡಲು ಬಂದಿದ್ದ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನೂರಾರು ಗ್ರಾಮಸ್ಥರು ತಮ್ಮ ಭಕ್ತಿಯ ಭಾಗವಾಗಿ ಹುಲಿ ದೇವರಿಗೆ ಯಥಾಶಕ್ತಿ ತೆಂಗಿನಕಾಯಿ, ಬಾಳೆಹಣ್ಣು ಸಮರ್ಪಿಸಿ ಧನ್ಯತೆ ಅನುಭವಿಸಿದರು. ಇದೇ ವೇಳೆ ರೈತರು ಸಾಮೂಹಿಕವಾಗಿ, 'ಕೃಷಿಕರ ಬೆನ್ನೆಲುಬಾದ ಜಾನುವಾರುಗಳ ರಕ್ಷಿಸು' ಎಂದು ಹುಲಿಯಪ್ಪನನ್ನು ಬೇಡಿಕೊಂಡು ಮನೆಯತ್ತ ಹೆಜ್ಜೆ ಹಾಕಿದರು. ನಂತರ ಹುಲಿಯಪ್ಪನ ಸನ್ನಿದಿಯಿಂದ ತಂದ ಪ್ರಸಾದವನ್ನು ಕೊಟ್ಟಿಗೆ, ಜಾನುವಾರು, ಕೃಷಿ ಕ್ಷೇತ್ರಕ್ಕೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.