ಮೀನುಗಾರಿಕೆ ಚಟುವಟಿಕೆ ಇಲ್ಲದ ಕಾರಣ ತದಡಿಯ ಮೀನುಗಾರಿಕೆ ಬಂದರಿನಲ್ಲಿ ಮೀನು ಸಾಗಾಟಕ್ಕೆ ಬಳಸುವ ಬುಟ್ಟಿ ಇತರ ಸರಂಜಾಮುಗಳನ್ನು ಮುಚ್ಚಿಡಲಾಗಿದೆ
ಮೀನುಗಾರಿಕೆ ಚಟುವಟಿಕೆ ಇಲ್ಲದ ಪರಿಣಾಮ ಬಿಕೋ ಎನ್ನುತ್ತಿರುವ ತದಡಿಯ ಮೀನುಗಾರಿಕೆ ಬಂದರಿನ ಶೆಡ್
ಹೊನ್ನಾವರದ ಮೀನುಗಾರಿಕೆ ಬಂದರಿನಲ್ಲಿ ಲಂಗರು ಹಾಕಿರುವ ದೋಣಿಗಳು
ಕಾರವಾರದ ಮೀನು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕಾದು ಕುಳಿತಿರುವ ಮೀನು ಮಾರಾಟಗಾರರು
ಕೃಷಿ ಕ್ಷೇತ್ರಕ್ಕೆ ಬರ ಪರಿಹಾರ ನೀಡಿದಂತೆಯೇ ಮೀನುಗಾರಿಕೆ ಕ್ಷೇತ್ರವನ್ನೂ ಪರಿಗಣಿಸಿ ಮೀನುಗಾರರಿಗೆ ಪರಿಹಾರ ಕೊಡಲು ಸರ್ಕಾರ ನಿರ್ಣಯಿಸಲಿ.
ರಾಜು ತಾಂಡೇಲ ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟಗಾರರ ಸಹಕಾರ ಫೆಡರೇಶನ್ ಅಧ್ಯಕ್ಷಮೀನು ಸಂಪನ್ಮೂಲದ ಮೇಲಿನ ಅತಿಯಾದ ಒತ್ತಡ ಬೆಳಕಿನ ಮೀನುಗಾರಿಕೆಯ ಜತೆಗೆ ಸಣ್ಣ ಬಲೆಗಳನ್ನು ಬಳಸಿ ಮೀನುಗಾರಿಕೆ ನಡೆಸುವ ಪ್ರಕ್ರಿಯೆಗಳಿಂದ ಮೀನಿನ ಸಂತತಿ ಕ್ಷೀಣಿಸಿದೆ.
ಜೆ.ಎಲ್.ರಾಠೋಡ ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥಮೀನುಗಾರಿಕೆ ದೋಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮೀನುಗಾರಿಕೆ ಹೊರತಾಗಿ ಬೇರೆ ಕೆಲಸ ಇಲ್ಲ. ಮತ್ಸ್ಯಕ್ಷಾಮದಿಂದ ಕಾರ್ಮಿಕರು ಬೀದಿಪಾಲಾಗುವ ಸ್ಥಿತಿ ಇದ್ದು ಸರ್ಕಾರ ಅವರ ಸಹಾಯಕ್ಕೆ ಧಾವಿಸಬೇಕು.
ವಿನಾಯಕ ಹರಿಕಂತ್ರ ಮೀನುಗಾರರ ಯುವ ಸಂಘರ್ಷ ಸಮಿತಿ ಅಧ್ಯಕ್ಷಎರಡು ತಿಂಗಳ ಹಿಂದೆ ಮೀನಿನ ಬರ ಕಂಡು ಬಂದಿತ್ತು. ಈಗ ಪರಿಸ್ಥಿತಿ ಸುಧಾರಿಸಿದೆ. ಆದರೂ ಮೊದಲಿನಂತೆ ಮೀನು ಸಿಗುತ್ತಿಲ್ಲ.
ರಾಜೇಶ ತಾಂಡೇಲ ಹೊನ್ನಾವರ ಮೀನುಗಾರ ಮುಖಂಡತವರಿಗೆ ಮರಳಿದ ಕಾರ್ಮಿಕರು
ಪರ್ಸಿನ್ ದೋಣಿಗಳಲ್ಲಿ ಸರಾಸರಿ 20 ರಿಂದ 25 ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಾರೆ. ಈ ಪೈಕಿ ಬಹುತೇಕ ಮಂದಿ ಹೊರರಾಜ್ಯದವರೇ ಆಗಿದ್ದಾರೆ. ಒರಿಸ್ಸಾ ಝಾರ್ಖಂಡ್ ಛತ್ತೀಸಗಡ ಸೇರಿದಂತೆ ಉತ್ತರ ಭಾರತದ ಕೆಲ ರಾಜ್ಯಗಳಿಂದ ನೂರಾರು ಸಂಖ್ಯೆಯಲ್ಲಿ ವಲಸೆ ಬರುವ ಕಾರ್ಮಿಕರು ಬೈತಕೋಲ ಮುದಗಾ ಹೊನ್ನಾವರ ಸೇರಿ ಹಲವೆಡೆ ಕಾರ್ಯನಿರ್ವಹಿಸುತ್ತಾರೆ. ಆಗಸ್ಟ್ ವೇಳೆಗೆ ಬರುವ ಅವರು ಮೇ ತಿಂಗಳ ಅಂತ್ಯದವರೆಗೆ ದುಡಿದು ಊರಿಗೆ ಮರಳುತ್ತಿದ್ದರು. ಈ ಬಾರಿ ಮಾರ್ಚ್ ಅಂತ್ಯಕ್ಕೆ ಬಹುತೇಕ ಕಾರ್ಮಿಕರು ತವರಿಗೆ ಮರಳಿದ್ದಾರೆ. ಕಾರ್ಮಿಕರಿಂದ ಗಿಜಿಗುಡುತ್ತಿದ್ದ ಬಂದರುಗಳಲ್ಲಿ ಮೌನ ವಾತಾವರಣ ಮೂಡಿದೆ. ‘ಮೀನುಗಾರಿಕೆ ಚಟುವಟಿಕೆ ಇದ್ದರೆ ಕಾರ್ಮಿಕರ ವೇತನ ಒದಗಿಸಲು ಸಾಧ್ಯವಿದೆ. ಚಟುವಟಿಕೆಯೇ ಇಲ್ಲದೆ ಲಕ್ಷಾಂತರ ರೂಪಾಯಿ ವೇತನ ನೀಡುವುದು ದೋಣಿಗಳ ಮಾಲೀಕರಿಗೂ ಕಷ್ಟ. ಈ ಬಾರಿ ಮೀನುಗಾರಿಕೆಯೇ ಇಲ್ಲದ ಪರಿಣಾಮ ಅವಧಿಗೆ ಮೊದಲೇ ಕಾರ್ಮಿಕರು ಊರಿಗೆ ಮರಳಿದ್ದಾರೆ’ ಎಂದು ರಾಜು ತಾಂಡೇಲ ಸಮಸ್ಯೆ ವಿವರಿಸುತ್ತಾರೆ.