ಕಾರವಾರ: ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದ ಸ್ಥಳದಲ್ಲಿ ಮಣ್ಣಿನಡಿ ಸಿಲುಕಿದ ಲಾರಿ, ನೀರಿನಲ್ಲಿ ಕಣ್ಮರೆಯಾದವರ ಪತ್ತೆಗೆ ಶನಿವಾರ ಶೋಧ ಕಾರ್ಯ ಚುರುಕುಗೊಂಡಿದೆ.

ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಾರ್ಯಾಚರಣೆ ಪರಿಶೀಲಿಸಿದರು. ಕ್ರೇನ್ ಮೂಲಕ ಗುಡ್ಡದ ಬುಡದವರೆಗೆ ಸಾಗಿ ಮಣ್ಣಿನ ರಾಶಿ ತೆರವು ಕಾರ್ಯ ವೀಕ್ಷಿಸಿದರು.

ಮಣ್ಣಿನಡಿ ಸಿಲುಕಿದ ಲಾರಿ ಪತ್ತೆಗೆ ರಡಾರ್ ತರಿಸಲಾಗಿದೆ. ಲೋಹ ಪರಿಶೋಧಕ ಯಂತ್ರದ ಮೂಲಕವೂ ಪತ್ತೆ ಕಾರ್ಯ ನಡೆದಿದೆ.

'ಮಣ್ಣು ತೆರವು ಮತ್ತು ಘಟನೆಯಲ್ಲಿ ಕಣ್ಮರೆಯಾದವರ ಪತ್ತೆಗೆ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಘಟನೆ ನಡೆದ ಸ್ಥಳದಲ್ಲಿ ಮತ್ತೆ ಮಣ್ಣು ಕುಸಿಯುತ್ತಿದೆ. ಸುರಕ್ಷಿತವಾಗಿ ಕಾರ್ಯಾಚರಣೆಗೆ ಸೂಚಿಸಲಾಗಿದೆ' ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.

'ಘಟನೆ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುವ ಭರವಸೆ ನೀಡಿದ್ದಾರೆ' ಎಂದರು.
.ಶಿರೂರು ಗುಡ್ಡ ಕುಸಿತ ದುರಂತ: ಏಳಕ್ಕೇರಿದ ಸಾವಿನ ಸಂಖ್ಯೆ .ಕಾರವಾರ: ನೆಲೆ ಕಸಿದುಕೊಂಡ ಶಿರೂರು ಗುಡ್ಡ.ಗುಡ್ಡ ಕುಸಿತದ ಅವಘಡ: ಶಿರೂರು, ಉಳುವರೆ ಗ್ರಾಮದಲ್ಲಿ ಜನರ ಆಕ್ರಂದನ.ಕಾರವಾರ: ಗುಡ್ಡ ಕುಸಿತದ ಭೀತಿ ನಡುವೆ ತೆರವು ಕಾರ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.