ಮುಂಡಗೋಡ: ಬೆಳಕಿನ ಹಬ್ಬ ಮುಗಿಯುತ್ತಿದ್ದಂತೆ, ಬೆಳೆ ಕಟಾವು ಮಾಡಲು ಅನ್ನದಾತ ಮುಂದಾಗಿದ್ದಾನೆ. ಭತ್ತದ ಕಣಜ ತುಂಬುವ ಕಾಯಕದಲ್ಲಿ ನಿರತನಾಗಿರುವ ರೈತರಿಗೆ ಕೂಲಿ ಆಳುಗಳ ಕೊರತೆ ಕಾಡುತ್ತಿದೆ.

ಭತ್ತ ಕಟಾವು ಮಾಡುವ ವಾಹನಗಳು ತಾಲ್ಲೂಕಿನಲ್ಲಿ ಬೀಡು ಬಿಟ್ಟಿದ್ದರೂ, ಅಕಾಲಿಕ ಮಳೆಯ ಕಾರಣ ಗದ್ದೆಗಳು ಹಸಿಯಾಗಿದ್ದು, ವಾಹನಗಳ ಓಡಾಟಕ್ಕೆ ತೊಡಕಾಗಿದೆ.

ವರ್ಷದಿಂದ ವರ್ಷಕ್ಕೆ ಭತ್ತದ ಗದ್ದೆಗಳನ್ನು ಆಕ್ರಮಿಸುತ್ತಿರುವ ಅಡಿಕೆ, ಶುಂಠಿ, ಬಾಳೆ ಬೆಳೆಗಳ ನಡುವೆಯೂ ತಾಲ್ಲೂಕಿನಲ್ಲಿ 5,500ರಿಂದ 6,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಇದರ ಹೊರತಾಗಿ ಅರಣ್ಯ ಅತಿಕ್ರಮಣ ಪ್ರದೇಶದಲ್ಲಿಯ ರೈತರೂ 3–4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದಾರೆ.

ಮುಂಗಾರಿಗಿಂತ ಮುನ್ನ ಕೂರಿಗೆ ಬಿತ್ತನೆ ಮಾಡಿರುವ ಗದ್ದೆಗಳಲ್ಲಿ ಇದೀಗ ಭತ್ತವು ಕಟಾವು ಹಂತಕ್ಕೆ ಬಂದಿದೆ. ತಾಲ್ಲೂಕಿನ ಕಾತೂರ, ಪಾಳಾ, ಓಣಿಕೇರಿ ಸೇರಿದಂತೆ ಇತರ ಪ್ರದೇಶಗಳಲ್ಲಿ ಭತ್ತ ಕಟಾವು ಕಾರ್ಯ ಆರಂಭವಾಗಿದೆ. ಅಕ್ಟೋಬರ್ ತಿಂಗಳ ಕೊನೆಯಲ್ಲಿ ಸುರಿದ ಮಳೆಯಿಂದ, ಹಲವೆಡೆ ಭತ್ತ ನೆಲಕ್ಕೆ ಒರಗಿದೆ. ಬಿದ್ದಿರುವ ಭತ್ತವನ್ನು ಕೂಲಿ ಆಳುಗಳಿಂದ ಕೊಯ್ಲು ಮಾಡಿಸುವುದು ರೈತರಿಗೆ ಅನಿವಾರ್ಯವಾಗಿದೆ.

ಆಳುಗಳ ಕೊರತೆ: ಒಮ್ಮೆಲೇ ಕಟಾವು ಕಾರ್ಯ ಆರಂಭವಾಗುತ್ತಿರುವುದರಿಂದ, ಕೂಲಿ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಇದರ ಜೊತೆಗೆ ಕೂಲಿ ಕಾರ್ಮಿಕರ ಕೂಲಿ ಮೊತ್ತವೂ ಏರಿಕೆಯಾಗಿದೆ. ಹೆಚ್ಚಿನ ಹಣ ಹೋದರೂ ಕೈಗೆ ಬಂದಷ್ಟು ಬೆಳೆಯನ್ನು ಪಡೆದುಕೊಳ್ಳುವ ತವಕದಲ್ಲಿ ರೈತರಿದ್ದಾರೆ.

ಕೆಲವು ರೈತರು, ಈಗಾಗಲೇ ಬೆಳೆ ಹಾನಿಯಿಂದ ನಷ್ಟ ಅನುಭವಿಸಿದ್ದು, ಹೆಚ್ಚಿನ ಕೂಲಿ ಹಣ ನೀಡಿ ಕೊಯ್ಲು ಮಾಡಿಸಿದರೆ, ರಾಶಿ ಮಾಡಲು ಮತ್ತಷ್ಟು ಖರ್ಚಾಗುತ್ತದೆ. ಖರ್ಚು ಮಾಡಿದಷ್ಟಾದರೂ ಹಣ ಕೈಗೆ ಸಿಗುವುದೇ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ, ಕಾರ್ಮಿಕರ ನಿತ್ಯದ ವೇತನದಲ್ಲಿ ₹100–₹150ರಷ್ಟು ಏರಿಕೆಯಾಗಿದೆ. ಗಾಳಿಮಳೆಗೆ ನೆಲಕ್ಕೆ ಬಿದ್ದಿರುವ ಭತ್ತವನ್ನು ಕಟಾವು ಮಾಡಿಸಲು, 3–4 ಕೂಲಿ ಆಳು ಹೆಚ್ಚುವರಿಯಾಗಿ ಬೇಕಾಗಿದೆ’ ಎಂದು ಪ್ರಗತಿಪರ ಕೃಷಿಕ ಶಿವಕುಮಾರ ಪಾಟೀಲ ಹೇಳಿದರು.

ಕೊಯ್ಲು ಯಂತ್ರಗಳಿಗಿಲ್ಲ ಕೆಲಸ

‘ಭತ್ತ ಕೊಯ್ಲು ಮಾಡಲು ರಾಯಚೂರು ಗಂಗಾವತಿ ಬಳ್ಳಾರಿ ಕಡೆಗಳಿಂದ ವಾಹನಗಳು ಈಗಾಗಲೇ ತಾಲ್ಲೂಕಿಗೆ ಬಂದಿವೆ. ಗದ್ದೆಗಳು ಹಸಿಯಾಗಿರುವುದರಿಂದ ವಾಹನಗಳಿಗೆ ಪೂರ್ಣ ಪ್ರಮಾಣದ ಕೆಲಸ ಸಿಗುತ್ತಿಲ್ಲ. ಅಲ್ಲೊಂದು ಇಲ್ಲೊಂದು ಗದ್ದೆಗೆ ತೆರಳಿ ಭತ್ತ ಕಟಾವು ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಪ್ರತಿ ಎಕರೆಯ ಕಟಾವು ದರದಲ್ಲಿ ತುಸು ಏರಿಕೆ ಆಗಿದೆ. ಕೂಲಿ ಕಾರ್ಮಿಕರಿಂದ ಕಟಾವು ಮಾಡಿಸಿದರೆ ಆಗುವ ಖರ್ಚಿಗಿಂತ ಯಂತ್ರಗಳಿಂದ ಕೊಯ್ಲು ಮಾಡಿಸಿದರೆ ರೈತರಿಗೆ ಉಳಿತಾಯವಾಗುತ್ತದೆ. ಕಡಿಮೆ ಅವಧಿಯಲ್ಲಿ ಕಾಳುಗಳು ಚೀಲದಲ್ಲಿ ಭರ್ತಿಯಾಗುತ್ತವೆ’ ಎಂದು ರೈತ ಬಾಬಣ್ಣ ಹೇಳಿದರು.

ತಾಲ್ಲೂಕಿನಲ್ಲಿ ಶೇ 5ರಷ್ಟು ರೈತರು ಭತ್ತ ಕೊಯ್ಲು ಆರಂಭಿಸಿದ್ದಾರೆ. ಕಳೆದ ತಿಂಗಳು ಸುರಿದ ಸತತ ಮಳೆಗೆ ಸುಮಾರು 143 ಹೆಕ್ಟೇರ್ ಭತ್ತ ಗೋವಿನಜೋಳ ಬೆಳೆ ಹಾನಿಯಾಗಿದೆ
-ಕೃಷ್ಣಪ್ಪ ಮಹಾರೆಡ್ಡಿ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.