ಹೊಸಪೇಟೆ (ವಿಜಯನಗರ): ಬೇಲೆಕೇರಿ ಬಂದರಿನಲ್ಲಿ ಮುಟ್ಟುಗೋಲು ಹಾಕಿ ಇಟ್ಟಿದ್ದ ಕಬ್ಬಿಣದ ಅದಿರು ನಾಪತ್ತೆ ಪ್ರಕರಣದಲ್ಲಿ ಹೊಸಪೇಟೆಯ ಇಬ್ಬರ ಸಹಿತ ಎಲ್ಲ ಏಳು ಮಂದಿಗೆ ಏಳು ವರ್ಷ ಜೈಲು ಶಿಕ್ಷೆ ಪ್ರಕಟವಾದ ಬಳಿಕ ಇತರ ಕೆಲವರಿಗೂ ನಡುಕ ಶುರುವಾಗಿದೆ. ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು ನೀಡಿದ ವರದಿ ದುಃಸ್ವಪ್ನದಂತೆ ಕಾಡುತ್ತಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ವರದಿ ನೀಡಿದ್ದೇ ಉಗ್ರಪ್ಪ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದ ಅವರು, 2008ರ ನವೆಂಬರ್ 16ರಂದು ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಇದು ಅಂತರರಾಜ್ಯ, ವಿದೇಶಗಳು ಒಳಗೊಂಡ ಪ್ರಕರಣವಾಗಿದ್ದರಿಂದ ಸಿಬಿಐಗೆ ವಹಿಸಬೇಕು ಎಂದು ಸದನದಲ್ಲೇ ಒತ್ತಾಯಿಸಿದ್ದರು. ಬಳಿಕ ಲೋಕಾಯುಕ್ತಕ್ಕೆ ತನಿಖೆಗೆ ಹೊಣೆ ವಹಿಸಲಾಗಿತ್ತು.

ಎದೆಗಾರಿಕೆ ಪ್ರದರ್ಶನ: ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದರ ಕುರಿತಂತೆ ಸತ್ಯ ಶೋಧನಾ ತಂಡದ ನೇತೃತ್ವವಹಿಸಿ ಹಲವು ಗಣಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಉಗ್ರಪ್ಪ, ವಿ.ಮುನಿಯಪ್ಪ, ಬಸವರಾಜ ರಾಯರೆಡ್ಡಿ, ಶಿವಮೂರ್ತಿ ನಾಯ್ಕ್ ಇತರರು ಇದ್ದ ತಂಡ ವರದಿ ಸಿದ್ಧಪಡಿಸುವ ಹಂತದಲ್ಲಿದ್ದಾಗಲೇ 2008 ಅಕ್ಟೋಬರ್ 25ರಂದು ಕಿತ್ತೂರು ಉತ್ಸವ ಕಾರ್ಯಕ್ರಮ ಇತ್ತು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದ ವಿ.ಎಸ್.ಉಗ್ರಪ್ಪ, ಸರ್ಕಾರವನ್ನು ಟೀಕಿಸಿ ಮಾತನಾಡಿದ್ದಾಗ ವೇದಿಕೆಯಲ್ಲೇ ಅವರ ಶರ್ಟ್ ಹಿಡಿದು ಎಳೆಯುವ ಪ್ರಸಂಗ ನಡೆದಿತ್ತು. ಬಸವರಾಜ ಬೊಮ್ಮಾಯಿ, ವೀರಣ್ಣ ಮತ್ತಿಕಟ್ಟಿ ಅವರ ಮಧ್ಯಪ್ರವೇಶದದಿಂದ ಪರಿಸ್ಥಿತಿ ತಿಳಿಯಾಗಿತ್ತು.

‘ಆಗ ಸಚಿವರಾಗಿದ್ದ ಜನಾರ್ದನ ರೆಡ್ಡಿ ಅವರೇ ನನಗೆ ವೇದಿಕೆಯಲ್ಲಿ ಬೆದರಿಕೆ ಹಾಕಿದ್ದರು. ಆದರೆ, ನಾನು ಹೆದರುವ ವ್ಯಕ್ತಿ ಅಲ್ಲ ಎಂಬುದು ಅವರಿಗೂ ಗೊತ್ತಿತ್ತು. ನನ್ನ ಭಾಷಣ ಮುಂದುವರಿಸಿದ್ದೆ. ಅದೇ ದಿನ ರಾತ್ರಿ ಬಳ್ಳಾರಿಯತ್ತ ನಾನು ರೈಲಿನಲ್ಲಿ ಹೊರಟಿದ್ದಾಗ ಒಂದೂವರೆ ಗಂಟೆ ಕಾಲ ರೆಡ್ಡಿ ಬೆಂಬಲಿಗನೊಬ್ಬ ನನಗೆ ಬೆದರಿಕೆ ಹಾಕಿದ್ದರು. ಆದರೂ ನಾನು ಮರುದಿನ ‘ರಿಪಬ್ಲಿಕ್ ಆಫ್ ಬಳ್ಳಾರಿ’ಗೆ ಬಂದು ಇಳಿದಿದ್ದೆ. ಕೆ.ಸಿ.ಕೊಂಡಯ್ಯ ಅವರು ದಾಖಲೆ ಸಂಗ್ರಹಿಸುವಲ್ಲಿ ಸಹಕಾರ ನೀಡಿದರು. ನಾನು ಹೆದರುವುದಿಲ್ಲ ಎಂದು ಗೊತ್ತಾದ ಬಳಿಕ ವರದಿ ಸಲ್ಲಿಸದಂತೆ ದೊಡ್ಡ ಆಮಿಷವನ್ನೂ ಒಡ್ಡಲಾಗಿತ್ತು. ಯಾವುದಕ್ಕೂ ನಾನು ಮಣಿಯಲಿಲ್ಲ. ಅದರ ಫಲವಾಗಿಯೇ ಇಂದು ನಾನು ಎದೆಯುಬ್ಬಿಸಿ ನಡೆಯುತ್ತಿದ್ದೇನೆ, ತಪ್ಪು ಎಸಗಿದವರಿಗೆ ಶಿಕ್ಷೆ ಆಗಿದೆ’ ಎಂದು ಉಗ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು 2008ರ ನವೆಂಬರ್ನಲ್ಲಿ ವರದಿ ಕೊಟ್ಟೆ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಡಿಸೆಂಬರ್ 18ರಂದು ಪ್ರಾಥಮಿಕ ವರದಿ ಸಲ್ಲಿಸಿದರು. ಆ ಬಳಿಕ ನಡೆದುದು ಎಲ್ಲವೂ ಇತಿಹಾಸ. ಈ ನೆಲದ ಕಾನೂನಿನ ಮೇಲೆ ನನಗೆ ಅಪಾರ ನಂಬಿಕೆ ಇದೆ. ತಪ್ಪು ಮಾಡಿದವರಿಗೆ ಇಂದಲ್ಲ ನಾಳೆ ಶಿಕ್ಷೆಯಾಗುವುದು ನಿಶ್ಚಿತ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಅದಿರು ಕಳವು ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ತೀರ್ಪು ಪ್ರಕಟವಾಗಿ ಶಿಕ್ಷೆ ಘೋಷಣೆಯಾದ ಮೇಲೆ ನನ್ನ ವರದಿ ಪರಿಣಾಮ ಬೀರಿದೆ ಎಂಬ ಖುಷಿ ಇದೆ. ನನ್ನ ವರದಿ ಈಗಲೂ ಕೆಲವರಿಗೆ ದುಃಸ್ವಪ್ನವಾಗಿ ಕಾಡಿದರೆ ಅಚ್ಚರಿ ಇಲ್ಲ’ ಎಂದು ಅವರು ಹೇಳಿದರು.

ಅಕ್ರಮ ಭೇದಿಸಲು ಮೂಲವಾದ ಪತ್ರ

2006ರಲ್ಲಿ ರಾಜ್ಯದಲ್ಲಿ ಬಿಜೆಪಿ– ಜೆಡಿಎಸ್ 20;20 ಸರ್ಕಾರ ಅಸ್ತಿತ್ವದಲ್ಲಿತ್ತು. ಆಗ ಅರಣ್ಯ ಸಚಿವರಾಗಿದ್ದ ಚೆನ್ನಿಗಪ್ಪ ಅವರು ಬರೆದ ಒಂದು ಪತ್ರವೇ ಇಡೀ ಅಕ್ರಮ ಗಣಿಗಾರಿಕೆಯನ್ನು ಭೇದಿಸುವ ಮೂಲವಾಯಿತು. ಏಳು ಪುಟಗಳಷ್ಟು ಸುದೀರ್ಘ ಪತ್ರದಲ್ಲಿ ಅವರು ಬಳ್ಳಾರಿಯ ಅರಣ್ಯ ಪ್ರದೇಶದಿಂದ ಗಣಿಗಾರಿಕೆ ಮೂಲಕ ಸಂಪತ್ತು ಸೋರಿಕೆಯಾಗುತ್ತಿರುವ ಅಂಶವನ್ನು ಉಲ್ಲೇಖಿಸಿದ್ದರು. ಅದೇ ಪತ್ರವನ್ನು ಆಧಾರವಾಗಿ ಇಟ್ಟುಕೊಂಡ ವಿ.ಎಸ್.ಉಗ್ರಪ್ಪ ಅವರು ವಿಧಾನ ಪರಿಷತ್ನಲ್ಲಿ ವಿಷಯ ಪ್ರಸ್ತಾಪಿಸಿದ್ದರು ಹಾಗೂ ಪ್ರರಣವನ್ನು ಸಿಬಿಐಗೆ ವಹಿಸಲು ಪಟ್ಟು ಹಿಡಿದಿದ್ದರು. ಆ ಬಳಿಕ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಆಯೋಗ ರಚಿಸಲಾಯಿತು.

ಅಕ್ರಮದ ಬೇರೇ ಅಂತರರಾಜ್ಯ ಗಡಿ

ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ನಡುವೆ ಗಣಿ ಪ್ರದೇಶ ಹಂಚಿಕೊಂಡಿದೆ. ಇಂತಲ್ಲಿ ಇನ್ನೊಬ್ಬರ ಹೆಸರಲ್ಲಿ ಗಣಿಗಾರಿಕೆ ಗುತ್ತಿಗೆ (ರೇಜಿಂಗ್ ಕಾಂಟ್ರಾಕ್ಟ್) ನೀಡಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಇಲ್ಲಿ ಭಾರಿ ಅಕ್ರಮ ನಡೆಯುತ್ತಿದೆ ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಗಡಿ ಗುರುತು ನಡೆಯಬೇಕು ಎಂಬ ಶಿಫಾರಸನ್ನು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಪ್ರಾಥಮಿಕ ವರದಿ ನೀಡಿತ್ತು.

ಇದಾದ ಎರಡೂವರೆ ವರ್ಷಗಳ ಬಳಿಕ ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ಅಂತಿಮ ವರದಿ ಸಲ್ಲಿಸಿದ್ದರು. ಅದರಿಂದ ಆಗ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯಿತು ಗಣಿಧಣಿಗಳು ಸ್ಥಾನ ಕಳೆದುಕೊಂಡರು. ಅದರ ನಡುವೆಯೇ ಬೇಲೆಕೇರಿ ಬಂದರಿನಿಂದ 6 ಲಕ್ಷ ಟನ್ಗೂ ಅಧಿಕ ಅದಿರು ಕಳ್ಳತನವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.